Watch : ಲೂಸ್ ಮಾದನ 'ಯೋಗಿ ದುನಿಯಾ' ಚಿತ್ರದ ಟೈಲರ್ ನೋಡಿ

ಲೂಸ್ ಮಾದ ಯೋಗಿ ಅಭಿನಯದ `ಯೋಗಿ ದುನಿಯಾ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ‘ದುನಿಯಾ-2’ ಟೈಟಲ್‌ನೊಂದಿಗೆ ಸೆಟ್ಟೇರಿದ್ದ ಲೂಸ್ ಮಾದ’ ಯೋಗಿ ನಟನೆಯ ಚಿತ್ರ ಈಗ ಹೆಸರು ಬದಲಾಯಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಎ' ಸರ್ಟಿಫಿಕೇಟ್ ಕೂಡ ಸಿಕ್ಕಿದ್ದು, ‘ಯೋಗಿ ದುನಿಯಾ’ ಎಂಬ ಹೊಸ ಹೆಸರಿನೊಂದಿಗೆ ಮಾರ್ಚ್ 9ರಂದು ತೆರೆಗೆ ಬರುತ್ತಿದೆ.

ರಚನೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನ ಮಾಡಿರುವ ಹರಿ, ಸಿನಿಮಾದಲ್ಲಿ ಬೆಂಗಳೂರು ರಾತ್ರಿ ವೇಳೆ ಹೇಗಿದೆ ಅಂತ ತೋರಿಸುವ ಪ್ರಯತ್ನ ಮಾಡಿದ್ದಾರೆ. ಬೆಂಗಳೂರು ಸುತ್ತಮುತ್ತ ಶೇ. 90ರಷ್ಟು ಚಿತ್ರೀಕರಣ ನಡೆದಿದೆ. ರಾತ್ರಿಯ ಕಥೆ ಇದಾಗಿದ್ದು ಬೆಂಗಳೂರಿನ ಕರಾಳ ಮುಖದ ದರ್ಶನ ಮಾಡಿಸಲಿದೆಯಂತೆ ಚಿತ್ರ. ಟ್ರಾವೆಲ್ ಏಜೆಂಟ್ ಪಾತ್ರದಲ್ಲಿ ನಾಯಕ ನಟ ಯೋಗಿ ಅಭಿನಯಿಸಿದ್ದಾರೆ. ಯೋಗಿ ಅಣ್ಣ ಮಹೇಶ್ ಮುಸ್ಲಿಂ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಶಿಷ್ಠ ಸಿಂಹ ಖರಾಬ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.