ಪೂರಿ ಜಗನ್ನಾಥ್ ಪುತ್ರನ 'ಮೆಹಬೂಬಾ' ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್

ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಥ್ ನಿರ್ದೇಶನದ 'ಮೆಹಬೂಬಾ' ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ವಿಶೇಷವೇನೆಂದರೆ ಈ ಚಿತ್ರದಲ್ಲಿ ಪೂರಿ ಜಗನ್ನಾಥ್ ಅವರ ಪುತ್ರ ಆಕಾಶ್ ಪೂರಿ ಪೂರ್ಣ ಪ್ರಮಾಡನಾದ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಪೂರಿ ಜಗನ್ನಾಥ್‌ ಈಗಾಗಲೇ ತಮ್ಮ ಚಿತ್ರಗಳ ಮೂಲಕ ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಇದೀಗ 'ಮೆಹಬೂಬಾ' ಚಿತ್ರದಲ್ಲಿ ತಮ್ಮ ಮಗನನ್ನೇ ನಾಯಕ ನಟನನ್ನಾಗಿ ಸೆಲೆಕ್ಟ್‌ ಮಾಡಿದ್ದಾರೆ.

ಈ ಚಿತ್ರದಲ್ಲಿ 1971 ರಲ್ಲಿ ನಡೆದ ಇಂಡೋ-ಪಾಕ್‌ ಯುದ್ಧದ ಹಿನ್ನೆಲೆಯುಳ್ಳ ಕಥೆ ಇದೆ , ಹಾಗಂತ ಇದು ಯುದ್ಧಕ್ಕೆ ಸಂಬಂಧಿಸಿದ ಚಿತ್ರವಲ್ಲವಂತೆ. ಇದೊಂದು ಲವ್‌ ಸ್ಟೋರಿ ಕುರಿತಾದ ಚಿತ್ರವಂತೆ. ಇನ್ನು ಆಕಾಶ್‌ ಪೂರಿ ಕುರಿತು ಹೇಳೋದಾದ್ರೆ, ಅವರಿಗೆ ನಟನೆ ಹೊಸದೇನಲ್ಲ. ತಮ್ಮ ಅಪ್ಪನ ಹಲವು ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಆದರೆ ಆಕಾಶ್‌ ಫುಲ್‌ಟೈಮ್‌ ನಾಯಕನಾಗಿ ಮೆಹಬೂಬ್‌ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಮಾತ್ರ ವಿಶೇಷವಾಗಿದೆ. ರಾಮ್ ಚರಣ್ ತೇಜಾ ಅಭಿನಯದ `ಚಿರುತ' ಚಿತ್ರದಲ್ಲಿ ಆಕಾಶ್ ಪೂರಿ ಬಾಲನಟನಾಗಿ ಗುರುತಿಸಿಕೊಂಡಿದ್ರು. ಇನ್ನು 2015ರಲ್ಲಿ ತೆರೆಕಂಡಿದ್ದ `ಆಂಧ‍್ರ ಪೋರಿ'ಯಲ್ಲಿ ಆಕಾಶ್ ಹಿರೋ ಆಗಿ ಕೂಡ ಮಿಂಚಿದ್ದರು.

ಈ ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ಕನ್ನಡದ ಮುಂಗಾರು ಮಳೆ 2 ಸಕ್ಸಸ್ ನಂತರ ಮಳೆ ಹುಡುಗಿ ನೇಹಾ ಶೆಟ್ಟಿ ಈ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಡ್ತಿದ್ದಾರೆ. ಆಕಾಶ್ ಗೆ ನಾಯಕಿಯಾಗಿ ನೇಹಾ ಶೆಟ್ಟಿ ಟಾಲಿವುಡ್ ನಲ್ಲಿ ನೇಹಾ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.