ಕಲಾ ಸಾಮ್ರಾಟನನ್ನೇ ಬಕ್ರಾ ಮಾಡಿದ 18 ನಿರ್ಮಾಪಕರು..!

ಈ ಬಣ್ಣದ ಲೋಕದಲ್ಲಿ ದಿನಕ್ಕೊಂದು ವೇಷ ದಿನಕ್ಕೊಂದು ಅವತಾರ ನಡಿತಾನೇ ಇರುತ್ತೆ... ಈ ಮಾಯಾನಗರಿಯಲ್ಲಿ ಬದುಕನ್ನು ಕಟ್ಟಿಕೊಳ್ಳೋಕೆ ಹಲವಾರು ಪ್ರತಿಭಾವಂತರು ದಶಕಗಳಿಂದಲೂ ದುಡಿದು ಒಂದು ಭದ್ರ ನೆಲೆಯನ್ನು ಕಂಡು ಯಶಸ್ವಿಯಾಗಿ ಗುರುತಿಸಿಕೊಂಡಿದ್ದಾರೆ. ಅಂಥವರ ಸಾಲಿಗೆ ಸೇರುವವರೇ ನಟ , ನಿರ್ಮಾಪಕ ,ನಿರ್ದೇಶಕ ಕಲಾ ಸಾಮ್ರಾಟ್ ಎಸ್. ನಾರಾಯಣ್. ಇವರು ಸುಮಾರು 30 ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ವರನಟ ಡಾ. ರಾಜ್ ಕುಮಾರ್ , ಡಾ. ವಿಷ್ಣುವರ್ಧನ್ , ರೆಬೆಲ್ ಸ್ಟಾರ್ ಅಂಬರೀಶ್ ಸೇರಿದಂತೆ ಸ್ಟಾರ್ ನಟರುಗಳು ಹಾಗೂ ಯುವ ಪ್ರತಿಭೆಗಳ ಚಿತ್ರಗಳನ್ನು ನಿರ್ದೇಶಿಸಿ ಸೈ ಅನ್ನಿಸಿಕೊಂಡoತ ಈ ಮಹಾನ್ ನಿರ್ದೇಶಕ ಇಲ್ಲಿಯವರೆಗೂ ಸುಮಾರು 49 ಚಿತ್ರವನ್ನು ನಿರ್ದೇಶಿಸಿ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇದರೊಂದಿಗೆ ಅವರೇ ಕೆಲವು ಚಿತ್ರಗಳ ನಿರ್ಮಾಣವನ್ನು ಕೂಡ ಮಾಡಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆ ಇವರ ಬಳಿ ಭೇಟಿ ಮಾಡದಂತ ಹಲವು ನಿರ್ಮಾಪಕರು ಕಥೆಗಳನ್ನು ಕೇಳಿ ಎಲ್ಲವೂ ಫೈನಲ್ ಆದ ನಂತರ ಯಾವುದೇ ಕಾರಣವನ್ನು ನೀಡಿದೆ ಹಿಂದೆ ಸರಿಯುತ್ತಿದ್ರoತೆ. ಮತ್ತೊಬ್ಬ ನಿರ್ಮಾಪಕ ಇವರೊಂದಿಗೆ ಮಾತುಕತೆ ಆಡಿದ ಕಥೆಯನ್ನು ಇಟ್ಟುಕೊಂಡು ಚಿತ್ರದ ಮುಹೂರ್ತಕ್ಕೆ ಕ್ಲಾಪ್ ಮಾಡಲು ಆಹ್ವಾನಿಸಿದ್ದರಂತೆ. ಈ ರೀತಿ ಸುಮಾರು 18 ಚಿತ್ರಗಳು ಇವರ ಕೈ ಯಿಂದ ಜಾರಿದೆ. ಬಹಳಷ್ಟು ಮನನೊಂದ ನಿರ್ದೇಶಕ ಎಸ್.ನಾರಾಯಣ್ ಚಿತ್ರರಂಗದ ಸಹವಾಸವೇ ಬೇಡ ಎಂದಿದ್ದು ಉಂಟು. ಆಗ ಆತ್ಮೀಯರ ಮನವೊಲಿಕೆಯಿಂದ ನಿರ್ಧಾರವನ್ನು ಕೈಬಿಟ್ಟು ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದು ನಿರ್ಧರಿಸಿ ಒಂದಷ್ಟು ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಬೇಕೆಂದು ನಿರ್ಧಾರ ಮಾಡಿದ ಎಸ್. ನಾರಾಯಣ್ ಈಗ ಗೆಳೆಯರೊಂದಿಗೆ ಸೇರಿ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ನಟನಾಗಿ ನಿರ್ದೇಶಕರಾಗಿ ನಿರ್ಮಾಪಕರಾಗಿ ಬಹಳಷ್ಟು ಹೆಸರನ್ನು ಗಳಿಸಿದ ಇವರು ಸುಮಾರು 5 ಕಥೆಗಳನ್ನು ಸಿದ್ಧಪಡಿಸಿ ಕೊಂಡಿದ್ದಾರಂತೆ. ಅದು ದೊಡ್ಡ ಬಜೆಟ್ಟಿನ ಚಿತ್ರವಾಗಿದ್ದು ಭಾರತೀಯ ಚಿತ್ರರಂಗವೇ ನಮ್ಮ ಸ್ಯಾಂಡಲ್ವುಡ್ನತ್ತ ಒಮ್ಮೆ ತಿರುಗಿ ನೋಡುವಂತಹ ಕಥಾಹಂದರ ಸಿದ್ಧಪಡಿಸುತ್ತಿದ್ದೇನೆ. ಇದಕ್ಕೆ ಸೂಕ್ತ ನಿರ್ಮಾಪಕರು ಸಿಕ್ಕರೆ ಇದೇ ವರ್ಷ ಚಿತ್ರ ಆರಂಭಿಸಲಿದ್ದೇನೆ ಎಂದರು. ಇಂತಹ ಕ್ರಿಯಾಶೀಲ ನಿರ್ದೇಶಕನಿಗೆ ಕಾಟ ಕೊಟ್ಟು ಬಕ್ರಾ ಮಾಡಿದ ಆ ನಿರ್ಮಾಪಕರಿಗೆ ತಕ್ಕ ಪಾಠ ಕಲಿಸುವ ಕೆಲಸ ಆದರೆ ಬಹಳ ಒಳ್ಳೆಯದು.ಇಲ್ಲದಿದ್ದರೆ ಚಿತ್ರರಂಗದಲ್ಲಿ ಇಂಥವರಿಂದ ಬಹಳಷ್ಟು ಸಮಸ್ಯೆ ಎದುರಾಗುವ ಸಾಧ್ಯತೆಯೂ ಇದೆ.