'ಬಾಹುಬಲಿ'ಪ್ರಭಾಸ್ ಗೆ ಕೈಕೊಟ್ಟಳಾ ಭಾಗಮತಿ..!?

ದಕ್ಷಿಣ ಭಾರತದ ಖ್ಯಾತ ಅಭಿನೇತ್ರಿ ಮತ್ತು ಬಾಹುಬಲಿ ಚಿತ್ರದ ದೇವಸೇನಾಳ ಹೊಸ ವರಸೆ ಇದು. ಅನುಷ್ಕಾ ಶೆಟ್ಟಿ ಸಿನಿಮಾ ವಿಚಾರಕ್ಕಿಂತ ಮದುವೆ ವಿಚಾರಕ್ಕೆ ಹೆಚ್ಚು ಸುದ್ದಿಯಾಗುತ್ತಿದ್ದಾಳೆ. ಸದ್ಯ, ಅನುಷ್ಕಾ ಶೆಟ್ಟಿ ಅಭಿನಯದ ಭಾಗಮತಿ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಭದಲ್ಲಿ ಬಾಹುಬಲಿ ಸುಂದರಿ ತನ್ನ ಮದುವೆ ವಿಷಯವನ್ನು ಪ್ರಸ್ತಾಪಿಸಿ ಗಮನ ಸೆಳೆದಿದ್ದಾಳೆ.
ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಜತೆ ಲವ್ವು-ಮದುವೆ ಎಂಬ ರೂಮರ್‍ಗಳಿಂದ ತಲೆಕೆಡಿಸಿಕೊಂಡಿದ್ದ ಅನುಷ್ಕಾ ಮದುವೆ ಬಗ್ಗೆ ಮನದಾಳದ ಮಾತುಗಳನ್ನಾಡಿದ್ದಾಳೆ.
ನನಗೆ ಮದುವೆ ಮೇಲೆ ನಂಬಿಕೆ ಇದೆ. ಆದರೆ, ಸದ್ಯಕ್ಕೆ ವಿವಾಹ ಆಗುವ ಆಲೋಚನೆ ಇಲ್ಲ. ನನ್ನ ಜತೆ ಯಾರು ಹೊಂದಿಕೊಳ್ಳುತ್ತಾರೋ ಅವರನ್ನೇ ಮದುವೆ ಆಗುತ್ತೇನೆ. ನಮ್ಮ ತಂದೆ-ತಾಯಿ ಕೂಡ ಮದುವೆ ಆಗು ಎಂದು ಒತ್ತಾಯಿಸುತ್ತಿದ್ದಾರೆ. ಒಳ್ಳೆ ಸಮಯಕ್ಕಾಗಿ ಕಾಯುತ್ತಿದ್ದೇನೆ. ಮುಂದೆ ಈ ಬಗ್ಗೆ ನಿಮಗೇ ಗೊತ್ತಾಗುತ್ತದೆ ಎಂದು ಕನ್ನಡದ ಕುವರಿ ಅನುಷ್ಕಾ ಹೇಳಿದ್ದಾಳೆ.