ಟಾಲಿವುಡ್ ನಲ್ಲೂ ರಶ್ಮಿಕಾ ಕಮಾಲ್

ಮಾಡಿದ ಒಂದೇ ಸಿನಿಮಾದಿಂದ ಸ್ಯಾಂಡಲ್ವುಡ್ ನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದ ನಟಿ ರಶ್ಮಿಕಾ ಈಗ ತೆಲುಗಿನಲ್ಲೂ ನಟಿಸಿದ ಒಂದೇ ಸಿನಿಮಾದಿಂದ ಸಕತ್ ಸುದ್ದಿಯಲ್ಲಿದ್ದಾರೆ. ಹೌದು, ಈ ವಾರ ಬಿಡುಗಡೆಯಾದ ‘ಚಲೋ’ ಚಿತ್ರದಲ್ಲಿ ಮೊದಲ ಬಾರಿಗೆ ತೆಲುಗಿನಲ್ಲಿ ನಟಿಸಿ ಒಂದೇ ಸಿನಿಮಾದಿಂದ ತೆಲುಗು ಫ್ಯಾನ್ಸ್ ಫಾಲೋವರ್ಸ್ ನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ಚಲೋ’ ಸಿನಿಮಾದಲ್ಲಿ ನಾಗಶೌರ್ಯ ನಾಯಕನಾಗಿ ಕಾಣಿಸಿಕೊಂಡಿದ್ದು, ಸಿನಿಮಾದಲ್ಲಿ ನ್ನೆಲ್ ಕಿಶೋರ್ ಸತ್ಯ, ಅಚ್ಯುತ್ ಕುಮಾರ್, ರಘು ಬಾಬು. ಪ್ರಗತಿ ಮತ್ತಿತರರು ಕಾಣಿಸಿಕೊಂಡಿದ್ದಾರೆ. ವೆಂಕಿ ಕುಡುಮುಲು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮೆಹಟಿ ಸ್ವರ ಸಾಗರ್ ಸಂಗೀತ ಈ ಚಿತ್ರಕ್ಕಿದ್ದು ಕನ್ನಡದ ಅಚ್ಯುತ್ ಕುಮಾರ್, ರಘು ಬಾಬು, ಪ್ರಗತಿ ಸೇರಿ ಹಲವರು ನಟರು ಅಭಿನಯಿಸಿದ್ದಾರೆ.