ಹೇಗಿದೆ 'ದೇವ್ರಂಥ ಮನುಷ್ಯ'ನ ಸಿನಿಮಾ..? (ಚಿತ್ರ ವಿಮರ್ಶೆ)

ಬಿಗ್ ಬಾಸ್ ಮನೆಯಿಂದ ಹೊರ ಬಂದಂಥ ಪ್ರಥಮ್ ಬಾರಿ ಸದ್ದನ್ನೇ ಮಾಡಿದ್ರು... ಈಗ ಅಂತಹದ್ದೇ ಕೆಲಸ ತನ್ನ ಮೊದಲ ಚಿತ್ರ ದೇವ್ರಂಥ ಮನುಷ್ಯ ಚಿತ್ರದಲ್ಲಿ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಪ್ರೀತಿ ಪ್ರೇಮದ ಚಿತ್ರಗಳು ಬಂದು ಹೋಗಿವೆ. ಆದರೆ ಈ ಚಿತ್ರದಲ್ಲಿ ಪ್ರೀತಿ ಜತೆಗೆ ಎಣ್ಣೆಯೂ ಬೆಸದುಕೊಂಡಿದೆ. ಬಾರ್ ನೊಂದಿಗೆ ಗೆಳೆಯರ ಆಗುವ ಸುಚೇಂದ್ರ ಪ್ರಸಾದ್ ಹಾಗೂ ತಬಲಾನಾಣಿಯ ನಡುವೆ ತನ್ನ ಡೈಲಾಗ್ ಮೂಲಕವೇ ಎಂಟ್ರಿ ಪಡೆಯುವ ಪ್ರಥಮ್ . ಭಗ್ನ ಪ್ರೇಮಿಯಾಗಿ ಕಾಣುವ ಪ್ರಥಮ್ ತನ್ನ ಫ್ಲಾಶ್ ಬ್ಯಾಕ್ ಮೂಲಕ ಕಥೆಯ ಎಳೆಯನ್ನು ತೆರೆಯುತ್ತಾ ಹೋಗುತ್ತಾನೆ.ತಾನು ಪ್ರೀತಿಸುವ ಹುಡುಗಿ ಶ್ರುತಿ ಗಾಗಿ ಏನೆಲ್ಲಾ ಪಡಿಪಾಟಲು ಪಡುತ್ತಾನೆ ಎಂಬುದನ್ನು ಹೇಳುತ್ತಾನೆ.ಇದನ್ನು ಸರಿಪಡಿಸಲು ಹೋಗುವ ಈ ಇಬ್ಬರು ಗೆಳೆಯರಿಗೆ ಮತ್ತೊಂದು ಕಥೆ ಅನಾವರಣವಾಗುತ್ತದೆ.ಬಾಲ್ಯದಲ್ಲಿ ಪ್ರಥಮ್ ತಂದೆ ಎಣ್ಣೆಯನ್ನು ಔಷಧಿ ಎಂದು ಹೇಳಿ ಮಗನ ದಿಕ್ಕನ್ನು ತಪ್ಪಿಸುತ್ತಾನೆ. ತನ್ನ ಅಜ್ಜಿಗೆ ಔಷಧಿ ರೂಪದಲ್ಲಿ ಕಾಣುವ ಎಣ್ಣೆ ಮುಂದೆ ಪ್ರಥಮ್ ಭವಿಷ್ಯಕ್ಕೆ ಎಣ್ಣೆಯೇ ಸರ್ವಸ್ವವಾಗಿರುತ್ತೆ. ಇದನ್ನು ಅರಿತ ತಂದೆ ಕುಡಿತ ಚಟವನ್ನು ಬಿಡಿಸಲು ಮಗನೊಂದಿಗೆ ಭಾಷೆಯನ್ನು ಪಡೆಯುತ್ತಾನೆ. ಮೊದಲ ಭಾಗದಲ್ಲಿ ಟ್ವಿಸ್ಟ್ ಗಳ ಮೇಲೆ ಟ್ವಿಸ್ಟ್ ಹಾಗೂ ಡೈಲಾಗ್ಳ ಸುರಿಮಳೆ ಜೋರಾಗಿ ಕಾಣುತ್ತದೆ.ಯಾವುದು ಸುಳ್ಳು ಯಾವುದು ಸತ್ಯ ಅನ್ನುವುದರಲ್ಲಿ ಎರಡನೇ ಭಾಗ ಆರಂಭಗೊಳ್ಳುತ್ತದೆ. ಸುತ್ತಿ ಬಳಸಿ ಅದೇ ಜಾಗಕ್ಕೆ ಬಂದೆ ಅನ್ನೋ ಹಾಗೆ... ಸುಚೇಂದ್ರ ಪ್ರಸಾದ್ ತನ್ನ ಪ್ರೀತಿಯ ಮಗಳು ವೈಷ್ಣವಿಗೆ ನಡೆದ ಘಟನೆಗಳನ್ನೆಲ್ಲ ವಿವರಿಸುತ್ತಾನೆ.ಯಾರನ್ನೂ ಒಪ್ಪದ ತನ್ನ ಮಗಳು ಪ್ರಥಮ್ ನನ್ನು ಮದುವೆಯಾಗಲು ನಿರ್ಧರಿಸುತ್ತಾಳೆ.ಎರಡನೇ ನಾಯಕಿಯಾಗಿ ಕಾಣುವ ವೈಷ್ಣವಿ ತಾನು ಇಷ್ಟಪಡುವ ಹುಡುಗನ ಪ್ರೀತಿಯನ್ನು ಪಡೆಯುತ್ತಾಳಾ...ಹಾಗೂ ಎಣ್ಣೆಯನ್ನು ಬಿಡಿಸುತ್ತಾಳಾ ಎಂಬುದನ್ನು ತೆರೆಯ ಮೇಲೆ ನೋಡಿದರೆ ಚೆನ್ನ. ಚಿತ್ರದುದ್ದಕ್ಕೂ ನಿರ್ದೇಶಕ ಕಿರಣ್ ಶೆಟ್ಟಿ ಮಾತಿನ ಚಾಟಿಯನ್ನು ಬೀಸುತ್ತಾ ಸಾಗಿದ್ದಾರೆ. ಪ್ರಥಮ್ ನಲ್ಲಿರುವ ಟ್ಯಾಲೆಂಟ್ ಅನ್ನು ಅರಿತು ಅದಕ್ಕೆ ಅನುಗುಣವಾಗಿ ಚಿತ್ರವನ್ನು ಕಟ್ಟಿಕೊಂಡಿದ್ದಾರೆ.

ಇನ್ನು ಹಾಡುಗಳು ಗಮನಾರ್ಹವಾಗಿದ್ದು , ಛಾಯಾಗ್ರಾಹಕರ ಕೆಲಸ ಅಚ್ಚುಕಟ್ಟಾಗಿದೆ.ಇನ್ನು ನಿರ್ಮಾಪಕರಾದ ಎಚ್.ಸಿ. ಮಂಜುನಾಥ್ ಹಾಗೂ ತಿಮ್ಮರಾಜು ಅವರು ಹಣ ಹೂಡಿದ್ದಾರೆ. ನಿರ್ಮಾಪಕರ ಪಾಲಿಗೆ ಇದು ಸೇಫ್ ಚಿತ್ರ ಎಂದೇ ಹೇಳಬಹುದು. ಒಟ್ನಲ್ಲಿ ಪ್ರಥಮ್ ಅಭಿಮಾನಿಗಳಿಗೆ ಈ ಚಿತ್ರ ಮನರಂಜನೆ ನೀಡಲಿದೆ.ಪ್ರೀತಿ ಮುಖ್ಯನಾ ಎಣ್ಣೆ ಮುಖ್ಯಾನಾ ಅನ್ನೋದನ್ನ ತೆರೆಯ ಮೇಲೆ ಒಮ್ಮೆ ನೋಡಬಹುದು.

ಚಿತ್ರ : ದೇವ್ರಂಥ ಮನುಷ್ಯ
ನಿರ್ದೇಶಕ : ಕಿರಣ್ ಶೆಟ್ಟಿ
ನಿರ್ಮಾಪಕರು : ಎಚ್. ಸಿ. ಮಂಜುನಾಥ್ ಹಾಗೂ ತಿಮ್ಮರಾಜು
ಸಂಗೀತ : ಪ್ರದ್ಯೂತನ್
ಛಾಯಾಗ್ರಹಣ : ಅರುಣ್ ಸುರೇಶ್
ತಾರಾಗಣ : ಬಿಗ್ ಬಾಸ್ ಪ್ರಥಮ್, ವೈಷ್ಣವಿ, ಶ್ರುತಿ, ಸುಚೇಂದ್ರ ಪ್ರಸಾದ್, ತಬಲನಾಣಿ ಮುಂತಾದವರು...
ರೇಟಿಂಗ್ :3.5/5