ರೈಲಿನಲ್ಲಿ ನಟಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ..!

ಕನ್ನಡದ 'ಸಂತೆಯಲ್ಲಿ ನಿಂತ ಕಬೀರ' ಚಿತ್ರ ಸೇರಿದಂತೆ 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಸನುಷಾ ಅವರಿಗೆ ರೈಲಿನಲ್ಲಿ ಕಿರುಕುಳ ನೀಡಲಾಗಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಕನ್ಯಾಕುಮಾರಿಯಿಂದ ತಿರುವನಂತಪುರಂಗೆ ಮಾವೆಲಿ ಎಕ್ಸ್ ಪ್ರೆಸ್ ನಲ್ಲಿ ತೆರಳುವ ಸಂದರ್ಭದಲ್ಲಿ ರಾತ್ರಿ ವೇಳೆ ರೈಲಲ್ಲಿ ಮಲಗಿದ್ದ ನಟಿಯ ಮೈ ಕೈ ಮುಟ್ಟಿದ ಕಾಮುಕ ಕಿರುಕುಳ ನೀಡಿದ್ದು, ನಿದ್ದೆಯಲ್ಲಿದ್ದ ನಟಿಗೆ ಎಚ್ಚರವಾಗಿದ್ದು, ಲೈಟ್ ಆನ್ ಮಾಡಿ ಕಿರುಚಾಡಿದ್ದಾರೆ. ಕತ್ತಲಲ್ಲಿ ಕಾಮುಕ ಪರಾರಿಯಾಗಿದ್ದಾನೆ.

ಇತ್ತೀಚೆಗಷ್ಟೇ ಬಹು ಭಾಷಾ ನಟಿ ಅಮಲಾ ಪೌಲ್ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಕುರಿತಾಗಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಈಗ ಮತ್ತೊಬ್ಬ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿರುವುದು ವಿಪರ್ಯಾಸ.

ಕಣ್ಣೂರಿನಲ್ಲಿ ರೈಲು ಏರಿದ ನಟಿ ಮೇಲಿನ ಬರ್ತ್‍ನಲ್ಲಿ ನಿದ್ರಿಸುತ್ತಿದ್ದರು. ಮುಂಜಾನೆ 1.10ರಲ್ಲಿ ಆರೋಪಿಯೊಬ್ಬ ಅವರ ಮುಖದ ಮೇಲೆ ಕೈಯಾಡಿಸುತ್ತಿದ್ದ. ಗಾಬರಿಯಿಂದ ಎಚ್ಚರಗೊಂಡ ಅವರು ಕಾಮುಕನ ಕೈ ಬೆರಳನ್ನು ಜೋರಾಗಿ ತಿರುಚಿದರು. ಸಹಾಯಕ್ಕಾಗಿ ಕೂಗಿದರೂ ಸಹ ಪ್ರಯಾಣಿಕರು ಮುಂದೆ ಬರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಇದೇ ಬೋಗಿಯಲ್ಲಿದ್ದ ಚಿತ್ರಕಥೆ ಬರೆಯುವ ಉನ್ನಿ ಮತ್ತು ಸಹ ಪ್ರಯಾಣಿಕ ರಂಜಿತ್ ನೆರವಿಗೆ ಬಂದರು. ನಂತರ ಈ ಬಗ್ಗೆ ರೈಲಿನ ಟಿಕೆಟ್ ಕಲೆಕ್ಟರ್‍ಗೆ(ಟಿಟಿ) ಸುದ್ದಿಮುಟ್ಟಿಸಿದರು. ಅವರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ಆರೋಪಿಯು ಪರಾರಿಯಾಗದಂತೆ ನಟಿಯು ಆತನನ್ನು ಹಿಡಿದಿಟ್ಟುಕೊಂಡಿದ್ದರು. ತ್ರಿ ಶ್ಯೂರು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ದುಷ್ಕರ್ಮಿಯನ್ನು ಬಂಧಿಸಿದರು.