ಕಿಚ್ಚನ ಜೊತೆ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದ ಅಮಲಾ ಅರೆಸ್ಟ್ ಆಗಿದ್ದೇಕೆ..!

ಕನ್ನಡದ ಹೆಬ್ಬುಲಿ ಚಿತ್ರದಲ್ಲಿ ನಟಿಸಿದ್ದ ಬಹುಭಾಷಾ ನಟಿ, ಮೋಹಕ ತಾರೆ ಅಮಲಾ ಪಾಲ್ ರನ್ನು ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಕಾರಣವಿಷ್ಟೇ ಅಮಲಾ ಕಳೆದ ಕೆಲ ದಿನಗಳ ಹಿಂದೆ ಕೋಟಿ ಕೋಟಿ ಕೊಟ್ಟು ಕಾರು ಖರೀದಿಸಿದ್ದಳು. ಈ ವೇಳೆ ತಪ್ಪು ವಿಳಾಸ ನೀಡಿ ಪಾಂಡಿಚೇರಿಯಲ್ಲಿ ಕಾರನ್ನು ರಿಜಿಸ್ಟರ್‌ ಮಾಡಿಸಿದ್ದಳು. ಇದರಿಂದಾಗಿ ಅವರು 20 ಲಕ್ಷ ತೆರಿಗೆ ಹಣ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಕೇರಳದಲ್ಲಿ ಅಮಲಾ ವಿರುದ್ಧ ಪ್ರಕರಣ ದಾಖಲಾಗಿತ್ತು.

ಅಮಲಾ ಪಾಲ್‌ ಕೇರಳ ಹೈಕೋರ್ಟ್‌ಗೆ ಜಾಮೀನು ಕೋರಿ ಮೊದಲೇ ಅರ್ಜಿ ಸಲ್ಲಿಸಿದ್ದರು. ಆದರೆ ಕ್ರೈಂ ಬ್ರ್ಯಾಂಚ್‌ ಎದುರು ಹಾಜರಾಗಬೇಕು ಎಂದು ನ್ಯಾಯಾಲಯ ಆದೇಶಿಸಿತು. ಹೀಗಾಗಿ ಅಮಲಾ ತಿರುವನಂತಪುರಂನಲ್ಲಿರುವ ಕ್ರೈಂ ಬ್ರ್ಯಾಂಚ್‌ ಪೊಲೀಸರ ಮುಂದು ಹಾಜರಾಗಿ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಬಳಿಕ ನ್ಯಾಯಾಲಯ ಅಮಲಾಗೆ ಜಾಮೀನು ಮಂಜೂರು ಮಾಡಿದೆ.