ಹಸಿಬಿಸಿ ದೃಶ್ಯಗಳ ಹೇಟ್ ಸ್ಟೋರಿ-4 ಟ್ರೈಲರ್‍

ಬಾಲಿವುಡ್ ಸೆಕ್ಸ್‍ಬಾಂಬ್ ಊರ್ವಶಿ ರೌಟೇಲಾ ಇದ್ದ ಮೇಲೆ ಅಲ್ಲಿ ಹಾಟ್ ಸೀನ್‍ಗಳಿಗೇನೂ ಬರವಿಲ್ಲ. ಈ ಮಾದಕ ಬೆಡಗಿ ಮತ್ತು ವಸ್ತ್ರದ್ವೇಷಿ ನಟಿಸಿದ ಬಹುತೇಕ ಎಲ್ಲ ಸಿನಿಮಾಗಳಲ್ಲೂ ಅತಿ ಎನಿಸುವಷ್ಟು ಹಸಿಬಿಸಿ ದೃಶ್ಯಗಳಿರುತ್ತವೆ. ಅದು ಹೇಟ್ ಸ್ಟೋರಿ-4ರಲ್ಲೂ ಮುಂದುವರಿದಿದೆ. ಹೇಟ್ ಸ್ಟೋರಿ ಸರಣಿಯ ನಾಲ್ಕನೇ ಭಾಗದಲ್ಲೂ ಸಖತ್ ಹಾಟ್‍ಸೀನ್‍ಗಳ ವೈಭವ ಪುನರಾವರ್ತನೆಯಾಗಿದೆ. ಈಗಷ್ಟೇ ಬಿಡುಗಡೆಯಾದ ಹೇಟ್‍ಸ್ಟೋರಿ-4ರ 2.41 ನಿಮಿಷಗಳ ಮೊದಲ ಟ್ರೈಲರ್‍ನ ಬಹುತೇಕ ತುಣಕುಗಳಲ್ಲಿ ಹಸಿಬಿಸಿ ದೃಶ್ಯಗಳೇ ತುಂಬಿವೆ. ಟ್ರೈಲರೇ ಇಷ್ಟು ಹಾಟ್ ಆಗಿರುವಾಗ ಇನ್ನು ಸಿನಿಮಾ ಇನ್ನೆಷ್ಟು ಬಿಸಿಯಾಗಿರುತ್ತದೆ ಎಂಬ ಪ್ರಶ್ನೆ ಇದನ್ನು ನೋಡಿದ ಪ್ರತಿಯೊಬ್ಬರ ಮನದಲ್ಲಿ ಸಹಜವಾಗಿ ಮೂಡುತ್ತದೆ.

ಊರ್ವಶಿ, ಕರಣ್ ವಹಿ, ವಿವಿನ್ ಭಥೆನಾ, ಇಹಾನಾ ಧಿಲ್ಲೋನ್ ಪ್ರಮುಖ ಪಾತ್ರದಲ್ಲಿರುವ ಈ ಸಿನಿಮಾದ ಟ್ರೈಲರ್‍ನಲ್ಲಿ ನಗ್ನಾವತಾರ, ಲಿಪ್-ಟು-ಲಿಪ್, ರೋಮಾನ್ಸ್ ಸೀನ್‍ಗಳ ತುಣುಕುಗಳಿವೆ. ಎಲ್ಲೆಂದರಲ್ಲಿ ಜೋಡಿಗಳು ಸರಸ-ಸಲ್ಲಾಪದ ದೃಶ್ಯಗಳು ಟ್ರೈಲರ್‍ನಲ್ಲಿ ಧಾರಾಳವಾಗಿ ಕಂಡುಬರುತ್ತದೆ.

ಮಾದಕ ದೇಹಸಿರಿಯನ್ನು ಬಿಗಿಯಾಗಿ ಅಪ್ಪಿರುವ ತೇಳು ವಸ್ತ್ರದೊಂದಿಗೆ ಊರ್ವಶಿ ಬಳುಕುತ್ತಾ ಬರುವ ದೃಶ್ಯದೊಂದಿಗೆ ಆರಂಭವಾಗುವ ಟ್ರೈಲರ್ ಫ್ಯಾಷನ್ ಜಗತ್ತಿನ ರಸವತ್ತಾದ ಕಥೆಯನ್ನು ಅನಾವರಣಗೊಳಿಸುವ ಸೂಚನೆ ನೀಡುತ್ತದೆ. ಈ ಸಿನಿಮಾದಲ್ಲಿ ಕರಣ್ ಫೋಟೋ ಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ರೂಪದರ್ಶಿಯರೊಂದಿಗೆ ಈತ ರೊಮಾನ್ಸ್ ಮಾಡುವ ಸೀನ್‍ಗಳೂ ಇವೆ. ಈತನ ಸಹೋದರನಾಗಿ ನಟಿಸಿರುವ ವಿವಾನ್ ಕೂಡ ರಸಿಕ. ಆತನ ಪ್ರಯಾಣದ ದೃಶ್ಯಗಳೂ ಟ್ರೈಲರ್‍ನಲ್ಲಿ ಕಾಣಬಹುದು. ಒಟ್ಟಾರೆ ಬೋಲ್ಡ್ ಸೀನ್‍ಗಳು ಎದ್ದು ಕಾಣುವಂತೆ ಇರುವ ಈ ಸಿನಿಮಾ ಮಾರ್ಚ್‍ನಲ್ಲಿ ತೆರೆ ಕಾಣಲಿದ್ದು, ಹಾಟ್ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪಡ್ಡೆಗಳು ಕಾತುರದಿಂದ ಕಾಯುತ್ತಿ ದ್ದಾರೆ.