ಯಾರಾಗಲಿದ್ದಾರೆ 'ಬಿಗ್ ಬಾಸ್' ..?

'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆಯಲ್ಲಿ ವಿನ್ನರ್ ಯಾರು? ಎಂಬ ಚರ್ಚೆ ಶುರುವಾಗಿದೆ. ಮನೆಯೊಳಗಿದ್ದ 17 ಸ್ಪರ್ಧಿಗಳಲ್ಲಿ ಮೂವರು ಉಳಿದುಕೊಂಡಿದ್ದಾರೆ. ಫಿನಾಲೆಯಲ್ಲಿದ್ದ ಐವರಲ್ಲಿ ಶ್ರುತಿ ಮತ್ತು ನಿವೇದಿತಾ ಅವರು ಹೊರಗೆ ಬಂದಿದ್ದು, ಚಂದನ್, ಜೆ.ಕೆ.(ಕಾರ್ತಿಕ್), ದಿವಾಕರ್ ಅವರು ಮನೆಯೊಳಗೆ ಇದ್ದಾರೆ. ಮೂವರಲ್ಲಿ ಗೆಲ್ಲೋರು ಯಾರು ಎಂಬ ಕುತೂಹಲ ಹೆಚ್ಚಾಗಿದೆ.

ಚಂದನ್, ದಿವಾಕರ್ ಸೆಲೆಬ್ರಿಟಿಯಾಗಿದ್ದು, ದಿವಾಕರ್ ಕಾಮನ್ ಮ್ಯಾನ್ ಆಗಿದ್ದಾರೆ. 'ಬಿಗ್ ಬಾಸ್' ಗೆ ಎಂಟ್ರಿ ಕೊಡುವಾಗ ಕಾಮನ್ ಮ್ಯಾನ್ ಆಗಿದ್ದ ದಿವಾಕರ್ ತಮ್ಮದೇ ಶೈಲಿಯಿಂದಾಗಿ ಸೆಲೆಬ್ರಿಟಿಗಳನ್ನೂ ಹಿಂದಿಕ್ಕಿ ಫೈನಲ್ ಪ್ರವೇಶಿಸಿ, ಸೆಲೆಬ್ರಿಟಿಯಾಗಿ ಹೊರ ಹೊಮ್ಮಿದ್ದಾರೆ. ಚಂದನ್ ಹಾಗೂ ಕಾರ್ತಿಕ್ ಅವರೂ ತಮ್ಮದೇ ಆಟದಿಂದಾಗಿ ಗಮನ ಸೆಳೆದಿದ್ದಾರೆ. ಈ ಹಿಂದಿನ 4 ಸೀಸನ್ ಗಳಲ್ಲಿ ಕ್ರಮವಾಗಿ ವಿಜಯ್ ರಾಘವೇಂದ್ರ, ಅಕುಲ್ ಬಾಲಾಜಿ, ಶ್ರುತಿ ಹಾಗೂ ಪ್ರಥಮ್ ಅವರು ವಿಜೇತರಾಗಿದ್ದರು. 5 ನೇ ಸೀಸನ್ ನಲ್ಲಿ 'ಬಿಗ್ ಬಾಸ್' ವಿನ್ನರ್ ಯಾರು ಎಂಬುದು ಕುತೂಹಲ ಮೂಡಿಸಿದ್ದು, ರಾತ್ರಿ ಕುತೂಹಲಕ್ಕೆ ತೆರೆ ಬೀಳಲಿದೆ.
ಎಲಿಮಿನೇಟ್ ಆದ ಶೃತಿ :
ಕನ್ನಡದ ಬಿಗ್ ಬಾಸ್ ಸೀಸನ್ -5 ನಲ್ಲಿ ನಿವೇದಿತಾ ಗೌಡ ಮತ್ತು ಶೃತಿ ನಿನ್ನೆ ಬಿಗ್ ಬಾಸ್ ನಿಂದ ಹೊರಬಿದ್ದಿದ್ದಾರೆ. ಶನಿವಾರ ನಡೆದ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಚಾಲನೆ ದೊರೆತಿದ್ದು, ನಿವೇದಿತಾ, ಶೃತಿ, ಜೆಕೆ, ದಿವಾಕರ್ ಹಾಗೂ ಚಂದನ್ ಶೆಟ್ಟಿಯವರ ಸಖತ್ ಡಾನ್ಸ್ ಜೊತೆಗೆ ಬಿಗ್ ಬಾಸ್ ನ ಈ ಸೀಸನ್ ನ ಎಲ್ಲ ಸ್ಪರ್ಧಿಗಳು ಕೂಡ ಬಿಗ್ ಬಾಸ್ ವೇದಿಕೆಯ ಮೇಲೆ ಹಾಜರಾಗುವ ಮೂಲಕ ಕಾರ್ಯಕ್ರಮದ ಮೆರಗು ಹೆಚ್ಚಿಸಿದ್ದಾರೆ.

ಕೊನೆಯಲ್ಲಿ ಐವರಲ್ಲಿ ಒಬ್ಬರನ್ನು ಸುದೀಪ್ ಎಲಿಮಿನೇಟ್ ಮಾಡಿದರು. ಮೊದಲಿಗೆ ಜೆಕೆ ಹಾಗೂ ಚಂದನ್ ಅವರನ್ನು ಸೇಫ್ ಮಾಡಿದರು. ನಂತರ ದಿವಾಕರ್ ಅವರನ್ನು ಉಳಿಸಿಕೊಂಡರು. ಕೊನೆಯದಾಗಿ ಉಳಿದ ನಿವೇದಿತಾ ಹಾಗೂ ಶೃತಿ ಅವರನ್ನು ಸುದೀಪ್ ಹೊರಗೆ ಕರೆದರು.