'ಪ್ರೇಮ ಬರಹ' ಚಿತ್ರದ ಟ್ರೈಲರ್ ಬಂತು ನೋಡಿ

ಅರ್ಜುನ್ ಸರ್ಜಾ ನಿರ್ದೇಶನದ 'ಪ್ರೇಮ ಬರಹ' ಚಿತ್ರ ಫೆಬ್ರವರಿ 9 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದ್ದು, ಈಗ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಪ್ರೇಮ ಬರಹ ಚಿತ್ರದ ಮೂಲಕ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ನಾಯಕಿಯಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ.

ಅರ್ಜುನ್ ಸರ್ಜಾ ನಿರ್ದೇಶನದ 'ಪ್ರೇಮ ಬರಹ' ಚಿತ್ರಕ್ಕೆ ಆಂಜನೇಯನ ಕುರಿತಾದ ಹಾಡೊಂದನ್ನು ಸೇರಿಸಲಾಗಿದೆ. ಆಂಜನೇಯನ ಕುರಿತಾದ ಹಾಡಿನಲ್ಲಿ ಸ್ಟಾರ್ ನಟರಾದ ದರ್ಶನ್, ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಸ್ಟೆಪ್ ಹಾಕಿದ್ದಾರೆ. ಕೇಸರಿ ದಿರಿಸಿನಲ್ಲಿ ಅರ್ಜುನ್, ದರ್ಶನ್, ಚಿರು, ಧ್ರುವ ಸಖತ್ತಾಗಿಯೇ ಸ್ಟೆಪ್ ಹಾಕಿದ್ದಾರೆ.

ಪ್ರೇಮ ಬರಹದಲ್ಲಿ ಚಂದನ್ ಕುಮಾರ್ ನಾಯಕರಾಗಿ ಐಶ್ವರ್ಯ ಅರ್ಜುನ್ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ, ಐಶ್ವರ್ಯ ಅವರಿಗೆ ಇದು ಕನ್ನಡದಲ್ಲಿ ಮೊದಲ ಚಿತ್ರ. ಚಿತ್ರದಲ್ಲಿ ಸಾಧು ಕೋಕಿಲ, ರಂಗಾಯಣ ರಘು ಮತ್ತು ಸುಹಾಸಿನಿ ಅವರ ತಾರಾಗಣ ಇದೆ.  ಈ ಸಿನಿಮಾದಲ್ಲಿ ಬಿಗ್ ಬಾಸ್ ಚಂದನ್ ಕುಮಾರ್ ನಾಯಕನಾಗಿ ನಟಿಸಿದ್ದು, ಚಿತ್ರಕ್ಕೆ ಜೆಸ್ಸ್ಟಿ ಗಿಫ್ಟ್ ಸಂಗೀತ ನೀಡಿದ್ದಾರೆ.