ಉದಯ ಸಿಂಗರ್ ಜೂನೀಯರ್ಸ್ 'ಗ್ರ್ಯಾಂಡ್ ಫಿನಾಲೆ'ಯಲ್ಲಿ ನಟ ಶರಣರ ಹಾಡಿನ ಮೋಡಿ

ಕ್ರೇಜಿಸ್ಟಾರ್‍ರವಿಚಂದ್ರನ್ ಮತ್ತು ಮನೋ ಅವರ ಸಾರಥ್ಯದಲ್ಲಿ ನಡೆದಉದಯ ಸಿಂಗರ್ ಜೂನೀಯರ್ಸ್ ಈ ಕೊನೆಯಘಟ್ಟಕ್ಕೆತಲುಪಿದೆ. ಇದೆ ಶನಿವಾರ ಮತ್ತು ಭಾನುವಾರರಾತ್ರಿ 9ಕ್ಕೆ ಉದಯಟಿವಿಯಲ್ಲಿಉದಯ ಸಿಂಗರ್ ಜೂನೀಯರ್ಸ್ ಪಿನಾಲೆ ಪ್ರಸಾರವಾಗಲಿದೆ. 16 ಮಕ್ಕಳಿದ್ದ ಸಿಂಗಿಂಗ್ ಶೋ ಫಿನಾಲೆಯ ಹೊತ್ತಿಗೆ 5 ಮಕ್ಕಳಿಂದ ಕೂಡಿದ್ದುಅದರಲ್ಲಿಒಬ್ಬರನ್ನು "ಉದಯ ಸಿಂಗರ್ ಜೂನೀಯರ್" ಎಂದು ಘೋಷಿಸಲಾಗುವುದು.

ಸುಮಾರು ದಿನಗಳಿಂದ ನಡೆದು ಬಂದ ಶೋನಲ್ಲಿ ವಿಭಿನ್ನರೀತಿಯ ಸಂಚಿಕೆಗಳು ಪ್ರಸಾರವಾದವು.ಅಲ್ಲದೆಚಿತ್ರರಂಗದ ಹೆಸರಾಂತ ನಟ ನಟಿಯರಾದ ಮಾಲಾಶ್ರೀ, ಪ್ರೇಮಾ, ಚೇತನ್, ಶ್ರದ್ಧಾ ಶ್ರೀನಾಥ್,ಮಾನ್ವಿತಾ ಹರೀಶ್,ಕಾರುಣ್ಯಾರಾಮ್ ಮತ್ತು ಸಂಗೀತಕ್ಷೇತ್ರದಅರ್ಚನಾಉಡುಪಾ,ಪ್ರವೀಣ್.ಡಿರಾವ್,ಪೂರ್ಣಚಂದ್ರ ತೇಜಸ್ವಿ.ಕೆ.ಕಲ್ಯಾಣ್,ಅನುರಾಧಾ ಭಟ್,ಶ್ರೀಧರ್ ಸಂಭ್ರಮ್,ಹೆಸರಾಂತ ನಿರ್ದೇಶಕರುಗಳಾದ ಭಾರ್ಗವ ಮತ್ತುಯೋಗರಾಜ್ ಭಟ್ ಭಾಗವಹಿಸಿ ಮಕ್ಕಳಿಗೆ ಶುಭಕೋರಿದ್ದನ್ನುಇಲ್ಲಿ ಸ್ಮರಿಸಬಹುದು.

ಹೀಗೆ ನಡೆದುಕೊಂಡು ಈ ಸಿಂಗಿಂಗ್ ರಿಯಾಲಿಟಿ ಶೋ ಈಗ ಫೈನಲ್ ಹಂತ ತಲುಪಿದ್ದು ಗುರುಕಿರಣ್, ತನುಶ್‍ರಾಜ್,ನಿಹಾರಿಕಾ, ಸಿರಿ ಮತ್ತು ವಿಕ್ಸ್ ಪಿನಾಲೆ ಲಿಸ್ಟ್‍ನಲ್ಲಿದ್ದಾರೆ. ಈ ಫಿನಾಲೆಯ ನಿಯಮದ ಪ್ರಕಾರ ಶಾಸ್ತ್ರೀಯ ಸಂಗೀತ, ಹೆಸರಾಂತ ನಿರ್ದೇಶಕ ಪುಟ್ಟಣ್ಣಾಕಣಗಾಲ್ ಮತ್ತುಡಾ.ರಾಜಕುಮಾರ್ ಹಿಟ್ಸ್‍ಎಂದು 3 ಸುತ್ತಗಳಿದ್ದು ಪ್ರತಿಯೊಂದು ಸುತ್ತಿನಲ್ಲಿಒಬ್ಬಬ್ಬರು ಎಲಿಮಿನೆಟ್‍ಅಗುತ್ತಾರೆ.ಆದರೆಇಲ್ಲಿರವಿಚಂದ್ರನ್ ಮತ್ತೊಂದು ಸುತ್ತಾಗಿಜುಗಲ್‍ಬಂದಿಯನ್ನುಆಯ್ಕೆ ಮಾಡುತ್ತಾರೆಅದುಯಾಕೆ ? ಎಂಬುದನ್ನುಕಾದು ನೋಡಬೆಕಾಗಿದೆ.

ಹಾಗಾದರೆ ಈ ಐವರಲ್ಲಿಯಾರಿಗೆದೊರೆಯುತ್ತದೆಉದಯ ಸಿಂಗರ್? ಈ ಗ್ರ್ಯಾಂಡ್ ಫಿನಾಲೆಯಲ್ಲಿ ವಿಕ್ಟರಿ ಸ್ಟಾರ್ ಶರಣ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.ರ್ಯಾಂಬೋ ಚಿತ್ರದ ‘ಕಣ್ಣಾ ಮುಚ್ಚೆ ಕಾಡೆಗುಡೆ” ಹಾಡಿಎಲ್ಲರನ್ನು ರಂಜಿಸಿದ್ದಾರೆ. ಉದಯ ಸಿಂಗರ್ ಜೂನೀಯರ್ಸ್‍ಗ್ರ್ಯಾಂಡ್ ಫಿನಾಲೆಇದೇ ಶನಿವಾರ ಮತ್ತು ಭಾನುವಾರರಾತ್ರಿ 9ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತದೆ.