ಕಿರುತೆರೆಯಲ್ಲಿ 'ಕಾಲೇಜ್‍ಕುಮಾರ್' ಪ್ರೀಮಿಯರ್ ಶೋ

ಉದಯ ಟಿವಿ ಇದೇ ಶನಿವಾರ ಸಂಜೆ 6 ಗಂಟೆಗೆ ಸೂಪರ್ ಹಿಟ್ ಚಲನಚಿತ್ರವಾದ “ಕಾಲೇಜ್‍ಕುಮಾರ” ಪ್ರದರ್ಶನವಾಗಲಿದೆ. ನಾಯಕನಾಗಿ ವಿಕ್ಕಿ ವರುಣ್ ಹಾಗೂ ಕಿರಿಕ್ ಪಾರ್ಟಿಖ್ಯಾತಿಯ ಸಂಯುಕ್ತ ಹೆಗಡೆ ಅಭಿನಯಿಸಿರುವ “ಕಾಲೇಜ್‍ಕುಮಾರ” ಚಿತ್ರವು 2017ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್‍ಆಗಿತ್ತು. ಸಂಪೂರ್ಣ ಹೊಸತನದಿಂದಕೂಡಿದ್ದ ಈ ಚಿತ್ರವನ್ನಕನ್ನಡ ಸಿನಿ ಪ್ರೇಕ್ಷಕರುಒಪ್ಪಿಕೊಂಡಿದ್ದರು. ಅಲ್ಲದೆ ಈ ಚಿತ್ರವುಚಿತ್ರ ವಿಮರ್ಶಕರಿಂದಲೂ ಒಳ್ಳೆಯ ಮನರಂಜನಾತ್ಮಕಚಿತ್ರ ಎಂಬ ಪ್ರಶಂಶೆಗೂ ಒಳಗಾಗಿತ್ತು.

ಚಿತ್ರದಲ್ಲಿ ಶಿವು (ರವಿಶಂಕರ್) ದೊಡ್ಡ ಹುದ್ದೆ ಪಡೆಯಬೇಕು ಎಂಬ ಆಸೆ ಹೊಂದಿರುತ್ತಾರೆ. ಆದರೆಆತನ ಶಾಲಾ ಗೆಳೆಯ ವಸುಗೆ ಒಂದುಕಂಪೆನಿಯಲ್ಲಿಆಡಿಟರ್ ಕೆಲಸ ಸಿಕ್ಕರೆ ಶಿವುಗೆ ಅದೇಕಂಪೆನಿಯಲ್ಲಿಕ್ಲರ್ಕ್ ಕೆಲಸವಷ್ಟೆ ಸಿಗುತ್ತದೆ. ಹೀಗಾಗಿ ಇಬ್ಬರೂಒಬ್ಬರನ್ನೊಬ್ಬರುದ್ವೇಷಿಸಲು ಆರಂಭಿಸುತ್ತಾರೆ.

ಅಲ್ಲದೆರವಿಶಂಕರ್ (ಶಿವು) ತನ್ನ ಮಗ ವಿಕ್ಕಿ ವರುಣ್‍ನನ್ನೂ (ಕುಮಾರ್) ವಸುವಿನಂತೆದೊಡ್ಡ ಫೈನಾನ್ಷಿಯಲ್‍ಆಡಿಟರ್ ಮಾಡುವ ಆಸೆ ಹೊಂದಿರುತ್ತಾರೆ. ಆದರೆ ಮಗ ಕಾಲೇಜಿನಲ್ಲಿಅದಕ್ಕೆತದ್ವಿರುದ್ಧವಾಗಿ ಬೆಳೆಯುತ್ತಾನೆ. ಕೊನೆಯಲ್ಲಿ ಮಗ ಕುಮಾರತಂದೆಯ ಆಸೆಯನ್ನುಈಡೇರಿಸುತ್ತಾನೆಯೇ ?ಇಲ್ಲವೆ..?ಎಂಬುದು ಈ ಚಿತ್ರದಕಥಾ ಹಂದರ. ಚಿತ್ರದಲ್ಲಿತಂದೆಯ ಪಾತ್ರವನ್ನು ನಿರ್ವಹಿಸಿರುವ ರವಿಶಂಕರ್‍ತಮ್ಮ ಅಮೋಘ ನಟನೆಯ ಮೂಲಕ ಇಡೀಚಿತ್ರವನ್ನು ಆಕ್ರಮಿಸಿಕೊಂಡಿದ್ದಾರೆ. ಕೆಂಡ ಸಂಪಿಗೆ ನಂತರ ಮತ್ತೆದೊಡ್ಡ ಪರದೆಗೆ ಮರಳಿರುವ ವಿಕ್ಕಿ ವರುಣ್ ಈ ಚಿತ್ರದಲ್ಲಿತಮ್ಮಅಭಿನಯವನ್ನು ಮತ್ತಷ್ಟು ಸುಧಾರಿಸಿಕೊಂಡಿದ್ದರೆ, ಕಿರಿಕ್ ಪಾರ್ಟಿ ಗೆಲುವಿನ ಅಲೆಯಲ್ಲಿತೇಲುತ್ತಿರುವ ಸಂಯುಕ್ತ ಹೆಗಡೆಗೆ ಈ ಚಿತ್ರದ ಗೆಲವು ಮತ್ತೊಂದು ಸಿಹಿಯಾಗಿದೆ.

ಇನ್ನೂ ನಿರ್ದೇಶಕ ಸಂತು ಸಾಮಾನ್ಯವಾದ ಕಥೆಗೆ ಅತ್ಯುತ್ತಮವಾದ ಚಿತ್ರಕಥೆಯನ್ನು ಸಿದ್ದಪಡಿಸಿದ್ದು ಪ್ರೇಕ್ಷಕರನ್ನುರಂಜಿಸುವಲ್ಲಿ ಯಶಸ್ವಿಯಾದರೆ, ಅರ್ಜುನ್‍ಜನ್ಯಅವರ ಸಂಗೀತದಲ್ಲಿ ಮೂಡಿಬಂದಿರುವಎಲ್ಲಾ ಹಾಡುಗಳೂ ಮನಮುಟ್ಟುವಂತಿದೆ. ಒಟ್ಟಿನಲ್ಲಿ ಕಳೆದ ವರ್ಷ ಬಿಡುಗಡೆಯಾಗಿ ಅತ್ಯುತ್ತಮ ಕೌಂಟುಂಬಿಕ ಚಿತ್ರವಾಗಿ ಚಿಕನ್ನಡ ಸಿನಿ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದ್ದ “ಕಾಲೇಜ್‍ಕುಮಾರ” ಇದೇ ಶನಿವಾರ (27.01.2018) ಸಂಜೆ 6 ಗಂಟೆಗೆಉದಯಟಿವಿಯ ಪ್ರೀಮಿಯರ್ ಶೋನಲ್ಲಿ ಪ್ರಸಾರವಾಗಲಿರುವುದು ವಿಶೇಷ.