ಬಿಗ್ ಬಾಸ್ ಮನೆಯಿಂದ ಅನುಪಮಾ ಗೌಡ ಔಟ್..!

ಬಿಗ್ ಬಾಸ್ ಮನೆಯಿಂದ ಈ ವಾರ ಅಕ್ಕ ಖ್ಯಾತಿಯ ಕಿರುತೆರೆ ನಟಿ ಅನುಪಮಾ ಗೌಡ ಎಲಿಮಿನೇಟ್ ಆಗಿದ್ದಾರೆ. ಆರಂಭದಲ್ಲಿ ಇವರನ್ನು ಫೈನಲ್ ಅಭ್ಯರ್ಥಿ ಎಂದೇ ಪರಿಗಣಿಸಲಾಗುತ್ತಿತ್ತು. ಆದರೆ ಅನುಪಮಾ ಫೈನಲ್ ಗೆ ಕೆಲವೇ ದಿನಗಳಿರುವಾಗ ಆಶ್ಚರ್ಯಕರ ರೀತಿಯಲ್ಲಿ ಹೊರಬಿದ್ದಿದ್ದಾರೆ. ಅನುಪಮಾ ಅವರ ಕೆಲವು ವರ್ತನೆಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ವೀಕ್ಷಕರ ಪ್ರೀತಿ ಉಳಿಸಿಕೊಳ್ಳಲು ವಿಫಲವಾದ ಅನುಪಮಾ ಮನೆಯಿಂದ ಹೊರ ನಡೆಯಬೇಕಾಯಿತು. ಈ ಮೂಲಕ ಬಿಗ್ ಬಾಸ್ ಫಿನಾಲೆಗೆ ಬೆರಳೆಣಿಕೆ ದಿನಗಳು ಬಾಕಿ ಇರುವಾಗ ಎಲಿಮಿನೇಟ್ ಆಗಿರುವುದು ಅನುಪಮಾಗೆ ದೊಡ್ಡ ನಿರಾಸೆಯಾಗಿದೆ.

ಇದೀಗ ಜಯರಾಮ್ ಕಾರ್ತಿಕ್, ಶ್ರುತಿ ಪ್ರಕಾಶ್, ಸಮೀರಾಚಾರ್ಯ, ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಉಳಿದುಕೊಂಡಿದ್ದಾರೆ. ಈ ಬಾರಿಯ ಬಿಗ್ ಬಾಸ್ ಅವತರಣಿಕೆಯಲ್ಲಿ ಮೊದಲ ಹಾಗೂ ಕೊನೆಯ ಕ್ಯಾಪ್ಟನ್ ಆಗಿದ್ದು ಅನುಪಮಾ ಎಂಬುದು ವಿಶೇಷ. ಇನ್ನು ಕಾರ್ಯಕ್ರಮದಲ್ಲಿ ಜಯರಾಂ ಕಾರ್ತಿಕ್, ಚಂದನ್ ಶೆಟ್ಟಿ, ನಿವೇದಿತಾ, ಶೃತಿ, ಸಮೀರ್ ಆಚಾರ್ಯ, ದಿವಾಕರ್ ಉಳಿದುಕೊಂಡಿದ್ದು, ಒಬ್ಬೊಬ್ಬರು ತಮ್ಮದೇ ಆದ ವಿಶೇಷತೆಗಳಿಂದ ಇಷ್ಟು ದೂರ ಸಾಗಿ ಬಂದಿದ್ದಾರೆ. ಇವರಲ್ಲಿ ಅಂತಿಮ ಅಂತಿಮ ಐದರಲ್ಲಿಸ್ಥಾನ ಪಡೆಯುವರಾರು? ಮೊದಲ ರನ್ನರ್ ಅಪ್ ಹಾಗೂ ದ್ವಿತೀಯ ರನ್ನರ್ ಅಪ್ ಆಗಿ ಸ್ಥಾನಕ್ಕೆತೃಪ್ತಿಯಾಗುವವರಾರು? ಟ್ರೋಫಿ ಗೆಲ್ಲುವರಾರು ಎಂಬುದಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಕಾಯಬೇಕಿದೆ.