ಗೋವಾ ಬೀಚ್‍ನಲ್ಲಿ ಮಲೆಯಾಳಂ ನಟನ ಕೊಳೆತ ಶವ ಪತ್ತೆ..!

ಮಲೆಯಾಳಂ ನಟ ಸಿಧು ಆರ್.ಪಿಳ್ಳೈ (25) ಅವರ ಮೃತದೇಹ ಗೋವಾದ ಅಂಜುನಾ ಬೀಚ್‍ನಲ್ಲಿ ಪತ್ತೆ ಯಾಗಿದೆ. ಸಿಧು ಮೃತದೇಹ ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಿನ್ನೆ ಅವರ ಶವದ ಗುರುತು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಧು ಕಳೆದ ಬುಧ ವಾರ ಸಂಜೆಯಿಂದ ನಾಪತ್ತೆಯಾಗಿ ದ್ದರು. ಕೇರಳದ ಎರ್ನಾಕುಲಂನ ಕೂಥಟ್ಟುಕುಲಂ ನಿವಾಸಿಯಾದ ಅವರು ಹಲವು ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿದ್ದರು.