ಜೋರಾಗಿದೆ ಕರಿಯನ ಹವಾ : 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ

ಚಾಲೆಂಜಿಂಗ್‍ಸ್ಟಾರ್ ದರ್ಶನ್‍ನ ಸಿನಿಮಾ ಕೆರಿಯರ್‍ಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟ ಕರಿಯ ಚಿತ್ರದ ನಿರ್ಮಾಪಕ ಆನೇಕಲ್ ಬಾಲರಾಜ್ ಅವರು ನಿರ್ಮಿಸಿರುವ ಕರಿಯ 2 ಚಿತ್ರವು ಸಂತೋಷ್ ಬಾಲರಾಜ್‍ಗೆ ದೊಡ್ಡ ಬ್ರೇಕ್ ನೀಡಲು ಈ ವಾರದಿಂದ ರಾಜ್ಯಾದಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಪಿ2 ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಪರಮೇಶ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಒಬ್ಬ ರೌಡಿಗೆ ತಾನು ಕೂಡ ಸಮಾಜದಲ್ಲಿ ನೆಮ್ಮದಿಂದ ಬದುಕಬೇಕು ಎಂಬ ಆಸೆ ಇದ್ದೇ ಇರುತ್ತದೆ, ಈ ಚಿತ್ರದಲ್ಲಿ ತಾಯಿ, ತಂದೆ, ಲವ್ವರ್‍ನ ಸೆಂಟಿಮೆಂಟ್‍ಗಳು ಇದ್ದು ಚಿತ್ರವು ನೈಜವಾಗಿ ಹೊಮ್ಮಿಬಂದಿದೆ, ಈ ಪಾತ್ರಕ್ಕೆ ಸಂತೋಷ್ ಎಷ್ಟರಮಟ್ಟಿಗೆ ಹೊಂದಾಣಿಕೆಯಾಗುತ್ತೇನೆ ಎಂಬುದನ್ನು ನೀವೇ ತೆರೆಯ ಮೇಲೆ ನೋಡಿ ಎಂದು ನಿರ್ಮಾಪಕ ಆನೇಕಲ್ ಬಾಲರಾಜ್ ಹೇಳಿದರು.

ಚಿತ್ರದ ನಾಯಕ ಸಂತೋಷ್ ಮಾತನಾಡಿ, ಈ ಚಿತ್ರ ಒಂದೇ ಕೆಟಗರಿಯವರಿಗೆ ಇಷ್ಟವಾಗುತ್ತದೆ ಎಂದು ಹೇಳಲಾಗುವುದಿಲ್ಲ , ಚಿತ್ರಕ್ಕೆ ಯಾವುದೇ ತೊಂದರೆ ಬಾರದ ರೀತಿ ನಿರ್ದೇಶಕರು ಕೇಳಿದ್ದನ್ನೆಲ್ಲ ನಿರ್ಮಾಪಕರು ಕೊಟ್ಟಿದ್ದಾರೆ, ಈ ಚಿತ್ರದಲ್ಲಿರುವ ಫೈಟ್‍ಗಳು ಕೂಡ ಪ್ರೇಕ್ಷಕರನ್ನು ರಂಜಿಸಲಿದ್ದಾರೆ, ಫೈಟ್ ಮಾಸ್ಟರ್‍ಗಳಾದ ಡಿಫರೆಂಟ್ ಡ್ಯಾನಿ, ರವಿವರ್ಮ, ಮಾಸ್‍ಮಾದ, ವಿಕ್ರಂ ಉತ್ತಮ ಫೈಟ್ ಅನ್ನು ಕಂಪೋಸ್ ಮಾಡಿದ್ದಾರೆ, ನಾನು ಹಿಂದೆ ಅಭಿನಯಿಸಿದ್ದ ಗಣಪ ನನಗೆ ಹೆಸರು ತಂದುಕೊಟ್ಟಿತ್ತು, ಕರಿಯ 2 ಚಿತ್ರದಲ್ಲೂ ಉತ್ತಮ ಕಥೆಯಿದ್ದು ಈ ಚಿತ್ರದ ರಿಸಲ್ಟ್ ಅನ್ನು ನೋಡಿಕೊಂಡು ಮುಂದೆ ಯಾವ ರೀತಿಯ ಚಿತ್ರಗಳಲ್ಲಿ ನಟಿಸಬೇಕೆಂಬುದರ ಬಗ್ಗೆ ನಿರ್ಣಯಿಸುತ್ತೇನೆ ಎಂದರು.

https://youtu.be/fsR7OnXOd-M

ಇಷ್ಟಕಾಮ್ಯ, ನಟರಾಜ ಸರ್ವೀಸ್ ಚಿತ್ರಗಳಲ್ಲಿ ನನ್ನ ಪಾತ್ರ ಸಾಫ್ಟ್ ಆಗಿತ್ತು, ಆದರೆ ಕರಿಯ 2 ಚಿತ್ರದಲ್ಲ ಬೋಲ್ಡಾಗಿ ಕಾಣಿಸಿಕೊಂಡಿದ್ದಾನೆ. ಇದರಲ್ಲಿ ಜಾನಕಿ ಅಂತ ನನ್ನ ಪಾತ್ರದ ಹೆಸರು. ತುಂಬಾ ಸ್ಟ್ರಾಂಗ್ ರೋಲ್. ಟ್ರೇಲರ್, ಪೋಸ್ಟರ್ ನಲ್ಲೇ ಗೊತ್ತಾಗತ್ತೆ. ಬುಲೆಟ್ ಓಡಿಸೋ ಹುಡುಗಿ. ಹಲವು ಷೇಡ್‍ಗಳಿಂದ ಕೂಡಿದ ಪಾತ್ರ . ಚಿಕ್ಕ ವಯಸ್ಸಿನವಳಾದರೂ ಬಹಳಷ್ಟು ಜವಾಬ್ದಾರಿಯಿಂದ ತನ್ನ ಕುಟುಂಬ ನಿರ್ವಹಣೆ ಮಾಡುತ್ತಾಳೆ. ಬಹಳಷ್ಟು ಹೆಣ್ಣು ಮಕ್ಕಳಿಗೆ ಕನೆಕ್ಟ್ ಆಗುವಂಥಾ ಪಾತ್ರವಿದೆ ಎಂದು ನಾಯಕಿ ಮಯೂರಿ ಹೇಳಿಕೊಂಡರು.


ತೆಲುಗು ಚಿತ್ರರಂಗದ ಖ್ಯಾತ ನಟ ಅಜಯ್ ಘೋಷ್ ಈ ಚಿತ್ರದಲ್ಲಿ ಖಳ ನಟರಾಗಿ ಅಬಿನಯಿಸಿದ್ದಾರೆ. ಸಾಧು ಕೋಕಿಲ ಹಾಸ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಶ್ರೀನಿವಾಸ್ ದೇವಸ್ವಮ್ ಛಾಯಾಗ್ರಹಣ, ಶ್ರೀಕಾಂತ್ ಗೌಡ ಅವರ ಸಂಕಲನ ಈ ಚಿತ್ರಕ್ಕಿದೆ. ಶ್ರೀನಿವಾಸ್ ದೇವಸ್ವಮ್ ಛಾಯಾಗ್ರಹಣ, ಶ್ರೀಕಾಂತ್ ಗೌಡ ಅವರ ಸಂಕಲನ ಒದಗಿಸಿದ್ದಾರೆ. ವಿಕ್ರಮ್, ರವಿ ವರ್ಮ, ಡಿಫರೆಂಟ್ ಡ್ಯಾನಿ, ಮಾಸ್ ಮಾದ ಸಾಹಸ ಸಂಯೋಜನೆ ಮಾಡಿರುವರು.

14 ವರ್ಷಗಳ ಹಿಂದೆ ತೆರೆಕಂಡ ಕರಿಯ ಚಿತ್ರವು ದರ್ಶನ್‍ಗೆ ಒಂದು ಉತ್ತಮ ಬ್ರೇಕ್ ನೀಡಿದಂತೆ ಕರಿಯ 2 ಚಿತ್ರದ ನಾಯಕ ಸಂತೋಷ್‍ಗೆ ಚಿತ್ರರಂಗದಲ್ಲಿ ಬೆಳೆಯಲು ಉತ್ತಮ ವೇದಿಕೆ ನಿರ್ಮಾಣವಾಗುವಂತಾಗಲಿ.