ಈ ವಾರ ಬಿಡುಗಡೆಯಾಗುತ್ತಿದೆ 'ಸಿತಾರ' ಚಿತ್ರ

ಕಲ್ಲೇಶಿ ಮಲ್ಲೇಶಿ, ಶುಕ್ಲಂಬರಧರಂ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರಚಾರ ವಿನ್ಯಾಸಕ ಮಸ್ತಾನ್ ಅವರು ನಿರ್ದೇಶಿಸಿರುವ ಸಿತಾರ ಚಿತ್ರವು ಈ ವಾರ ರಾಜ್ಯಾದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವು ಬಹಳ ಹಿಂದೆಯೇ ರೆಡಿಯಾಗಿದ್ದರೂ ಕೂಡ ಬಿಡುಗಡೆಗೆ ಕಾಲ ಕೂಡಿ ಬಂದಿರಲಿಲ್ಲ ಆದರೆ ಈಗ ಚಿತ್ರ ಬಿಡುಗಡೆಯಾಗುತ್ತಿದ್ದು ಅದರ ಬಗ್ಗೆ ತಿಳಿಸಲು ಚಿತ್ರತಂಡದ ಪತ್ರಿಕಾಗೋಷ್ಠಿಯನ್ನು ಕರೆದಿತ್ತು.
ನಟ ಹರೀಶ್‍ರಾಜ್ ಅವರು ಮಾತನಾಡಿ, ಈ ಚಿತ್ರ ಬಿಡುಗಡೆಯಾಗಲು ತುಂಬಾ ತಡವಾಗಿದ್ದರೂ ಕೂಡ ಸಿನಿಮಾ ಚೆನ್ನಾಗಿ ಮೂಡಿಬಂದಿದ್ದು ಕುಟುಂಬ ಸಮೇತ ನೋಡುವ ಚಿತ್ರವಾಗಿದೆ ಎಂದರು.

ಅಣ್ಣ ತಮ್ಮಂದಿರ ಸೋದರ ಬಾಂಧವ್ಯವನ್ನು ಹೊಂದಿರುವ ಈ ಚಿತ್ರವು ತಡವಾಗಲು ನಿರ್ಮಾಪಕರು ಬದಲಾಗಿದ್ದೆ ಕಾರಣವಾದರೂ ಕೊನೆಗೂ ಚಿತ್ರ ಬಿಡುಗಡೆಯಾಗುತ್ತಿದೆ ಈ ಚಿತ್ರಕ್ಕೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕೆಂದರು ನಿರ್ದೇಶಕ ಮಸ್ತಾನ್.
ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾದೆಯನ್ನು ಸಿನಿಮಾ ಮಾಡಿ ನೋಡು, ರಿಲೀಸ್ ಮಾಡಿ ನೋಡು ಎಂದು ಹೇಳಬಹುದು ಎಂದು ನಿರ್ಮಾಪಕರು ಹೇಳಿದರು.

ಬಂದು ಜೀವನ ಸಾಗಿಸುವ ನಾಯಕಿಯ ಪಾತ್ರದಲ್ಲಿ ನಾನು ನಟಿಸಿದ್ದೇನೆ ಎಂದು ನಟಿ ನೇಹಾಪಾಟೀಲ್ ತನ್ನ ಪಾತ್ರವನ್ನು ಪರಿಚಯಿಸಿಕೊಂಡರು. ಚಿತ್ರ ತಡವಾದರೂ ಕೂಡ ಗೆಲ್ಲುವ ನಿರೀಕ್ಷೆಯನ್ನು ಹೊಂದಿರುವ ಚಿತ್ರತಂಡದ ಹುಮ್ಮಸ್ಸನ್ನು ಪ್ರೇಕ್ಷಕರು ನಿರಾಸೆ ಮಾಡದಿರಲಿ.