ಹೊಸ ತಂತ್ರಜ್ಞಾನದೊಂದಿಗೆ ತೆರೆಗೆ ಬರುತ್ತಿದ್ದಾನೆ 'ಮುತ್ತಣ್ಣ'

ಶ್ರೀ ಕಾವೇರಿ ಅಮ್ಮ ಫಿಲಂಸ್ ಲಾಂಛನದಡಿಯಲ್ಲಿ ಎಲ್. ಸೋಮಣ್ಣಗೌಡ ನಿರ್ಮಾಣದ 90ರ ದಶಕದಲ್ಲಿ ತೆರೆಕಂಡು ಭರ್ಜರಿ ಯಶಸ್ವಿಯಾದ “ಮುತ್ತಣ್ಣ” ಚಿತ್ರವು ನೂತನ ತಂತ್ರಜ್ಞಾನದಲ್ಲಿ ಈ ವಾರ ತೆರೆ ಕಾಣುತ್ತಿದೆ. ಖ್ಯಾತ ನಿರ್ದೇಶಕ ಎಂ.ಎಸ್.ರಾಜಶೇಖರ್ ನಿರ್ದೇಶನದೊಂದಿಗೆ ಶಿವರಾಜ್‍ಕುಮಾರ್ ದ್ವಿಪಾತ್ರದಲ್ಲಿ ಅಭಿನಯಿಸಿದ ಚಿತ್ರ ಬಹು ತಾರಾಗಣವನ್ನೆ ಹೊಂದಿದೆ.

ಚಿತ್ರವನ್ನು ಇದೀಗ 7.1 7.1 Dolby, Digital Sound, 4K U.H.D. ತಂತ್ರಜ್ಞಾನವನ್ನು ಅಳವಡಿಸಿ ಮತ್ತೆ ತೆರೆಗೆ ತರುತ್ತಿದ್ದಾರೆ. ನಿರ್ಮಾಪಕ ಸೋಮಣ್ಣಗೌಡ ಚಿತ್ರದಲ್ಲಿ ಹಂಸಲೇಖ ಸಂಗೀತ ನಿರ್ದೇಶನದಲ್ಲಿ (ಮುತ್ತಣ್ಣ ಪೀಪೀ ಊದುವ, ನೂರು ನೂರು ಕೊಹಿನೂರು ಕೂಗಿಕೊಟ್ಟರು) ಗೀತೆಗಳು ಇಂದಿಗೂ ಭಾರೀ ಜನಪ್ರಿಯತೆಯಾಗಿವೆ.  

ಚಿತ್ರದಲ್ಲಿ ಶಿವರಾಜ್‍ಕುಮಾರ್ ಜೋಡಿಯಾಗಿ ಸುಪ್ರಿಯಾ, ಸ್ನೇಹ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಶಶಿಕುಮಾರ್, ದೊಡ್ಡಣ್ಣ, ಮಾ|| ಚಿರಾಗ್, ಸತ್ಯಜಿತ್, ಭವ್ಯಶ್ರೀ ರೈ ಮುಂತಾದವರು ಅಭಿನಯಿಸಿದ್ದರು.