ರಾಕಿಂಗ್ ಸ್ಟಾರ್ ಯಶ್ ಪೊಲೀಸ್ ಆಗ್ತಾರಂತೆ..!

ಯಶ್‌ ಅಭಿಮಾನಿಗಳಿಗೆ ಇದೀಗ ಮತ್ತೊಂದು ಸಿಹಿ ಸುದ್ದಿ. ಸದ್ಯ ಕೆ.ಜಿ.ಎಫ್‌ ಚಿತ್ರದಲ್ಲಿ ಯಶ್‌ ಬ್ಯುಸಿಯಾಗಿರುವ ಯಶ್‌ ಅವರ ಮುಂದಿನ ಚಿತ್ರದ ಕುರಿತು ಸಿಕ್ಕಾಪಟ್ಟೆ ಚರ್ಚೆಗಳು ನಡೆಯುತ್ತಿವೆ. ಕೆ.ಜಿ.ಎಫ್‌ ನಂತ್ರ ಯಶ್‌ 'ರಾಣಾ' ಚಿತ್ರದಲ್ಲಿ ಇದೆ ಮೊದಲ ಬಾರಿಗೆ ಯಶ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಸಿನಿಮಾದ ಬಗ್ಗೆ ಹೆಚ್ಚಿನ ಇನ್ನಷ್ಟೇ ಲಭ್ಯವಾಗಬೇಕಿದೆ.
ಇನ್ನು ಈಗಾಗಲೇ ನಟ ಸುದೀಪ್‌, ದರ್ಶನ್‌, ಶಿವರಾಜ್‌ ಕುಮಾರ್‌ ಹಾಗೂ ಪುನೀತ್ ರಾಜಕುಮಾರ್ ಸೇರಿದಂತೆ ಹಲವು ನಟರು ಪೊಲೀಸ್‌ ಪಾತ್ರದಲ್ಲಿ ಮಿಂಚಿದ್ದಾರೆ. ಇದೀಗ ಯಶ್‌ ಸರದಿ.