'ಉದಯ ಸಿಂಗರ್ ಜೂನಿಯರ್ಸ್' ಆಡಿಷನ್ : ಎಲ್ಲಿ, ಯಾವಾಗ, ಮಾಹಿತಿ ಇಲ್ಲಿದೆ ನೋಡಿ

ಉದಯ ಟಿವಿ ನಾಲ್ಕು ವರ್ಷದ ನಂತರ ಮತ್ತೆ ಹಾಡಿನ ರಿಯಾಲಿಟಿ ಷೋವನ್ನು ಶುರುಮಾಡಲಿದೆ. ಅದರ ಹಿನ್ನಲೆಯಲ್ಲಿ ಅಕ್ಟೋಬರ್ 14 ರಂದು ಹುಬ್ಬಳ್ಳಿ ಮತ್ತು ಉಡುಪಿಯಲ್ಲಿ, ಅಕ್ಟೋಬರ್ 15ರಂದು ಮೈಸೂರು ಮತ್ತು ಬೆಂಗಳೂರಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಉತ್ತಮ ಹಾಡುಗಾರಿಕೆ ಮತ್ತು ವಾಕ್‍ಚಾತುರ್ಯ ಹೊಂದಿದ 5 ರಿಂದ 13 ವರ್ಷ ವಯಸ್ಸಿನ ಮಕ್ಕಳು ಬೆಳಗ್ಗೆ 9 ರಿಂದ 5ರವರೆಗೆ ನಡೆಯುವ ಆಡಿಷನ್‍ನಲ್ಲಿ ಭಾಗವಹಿಸಬಹುದೆಂದು ಉದಯ ಟಿವಿ ಪ್ರಕಟಣೆಯಲ್ಲಿ ತಿಳಿದೆ.

ಆಡಿಷನ್ ನಡೆಯುವ ದಿನಾಂಕ ಮತ್ತು ಸ್ಥಳ:
ಅಕ್ಟೋಬರ್ 14 :
ಹುಬ್ಬಳ್ಳಿ: ಶಾಂತಾಬಾಯಿ ದಿವಟೆ ಕಲ್ಯಾಣ ಮಂಟಪ, ಕೇಶ್ವಾಪೂರ ಮುಖ್ಯರಸ್ತೆ, ಹುಬ್ಬಳ್ಳಿ
ಉಡುಪಿ:ಸೇಂಟ್ ಮೆರಿ ಸಿರಿಯನ್ ಕಾಲೇಜ್ ನ್ಯೂ ಅಡಿಟೋರಿಯಮ್, ಎಸ್.ಎಮ್.ಎಸ್ ಚರ್ಚ, ಹತ್ತಿರ, ಉಡುಪಿ

ಅಕ್ಟೋಬರ್ 15 :
ಮೈಸೂರು: ಶಾರದಾ ವಿಲಾಸ ಕಾಲೇಜ್, ಕೃಷ್ಣಮೂರ್ತಿಪುರಂ, ಮೈಸೂರು
ಬೆಂಗಳೂರು: ಉದಯಭಾನು ಕಲಾಸಂಘ, ಗವಿಪುರಂ ಚೌಲ್ಟ್ರಿ ಎದುರು, ಕೆಂಪೇಗೌಡನಗರ, ಬೆಂಗಳೂರು