'ಕುರುಕ್ಷೇತ್ರ'ದ ಯುದ್ಧಕ್ಕೆ ಕಾಣರರಾಗಲಿದ್ದಾರಂತೆ ರವಿಶಂಕರ್..!?

ಚಂದನವನದ ಭಾರಿ ನಿರೀಕ್ಷೆಯ ಚಿತ್ರ 'ಕುರುಕ್ಷೇತ್ರ'ದ ಪಾತ್ರಗಳು ಒಂದೊಂದಾಗಿ ರಿವೀಲ್ ಆಗಿವೆ. ಕುರುಕ್ಷೇತ್ರದ ಕೇಂದ್ರ ಬಿಂದು ಮತ್ತು ಕುರುಕ್ಷೇತ್ರ ಯುದ್ಧಕ್ಕೆ ಕಾರಣೀಕರ್ತ ಎನಿಸುವ ಪಾತ್ರ ಶಕುನಿಯದು. ಈ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎಂಬ ಕುತೂಹಲ ಕೊನೆಯಾಗಿದೆ. ಕನ್ನಡ ಖಳನಾಯಕ ರವಿಶಂಕರ್ ಈಗ ಶಕುನಿಯಾಗಿ ಕುರುಕ್ಷೇತ್ರ ಯುದ್ಧಕ್ಕೆ ಕಾರಣರಾಗಲಿದ್ದಾರಂತೆ.

ಖಡಲ್ ವಿಲನ್ ಪಾತ್ರಕ್ಕೆ ಫಿಕ್ಸ್ ಆಗಿದ್ದ ರವಿಶಂಕರ್ ಅಲ್ಲಲ್ಲಿ ಕಾಮಿಡಿ ಝಲಕ್ ತೋರಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. ಅದಕ್ಕೆ ತಕ್ಕ ಹಾಕೆ ಸ್ವಲ್ಪ ಕಾಮಿಡಿ ಸಿಕ್ಕಾಪಟ್ಟೆ ವಿಲನ್ ಶೇಡ್ ಇರುವ ಶಕುನಿ ಪಾತ್ರದಲ್ಲಿ ರವಿಶಂಕರ್ ಕುಂಟುತ್ತಾ ವಿಭಿನ್ನ ಶೈಲಿಯಲ್ಲಿ ಡೈಲಾಗ್ ಹೊಡೆಯೋದನ್ನ ಊಹಿಸಿಕೊಂಡರೆ ಸಾಕು ಸಕತ್ ಕಿಕ್ ಸಿಗುತ್ತೆ , ಇನ್ನು ರವಿಶಂಕರ್ ಶಕುನಿ ಪಾತ್ರಕ್ಕೆ ಜೀವ ತುಂಬೋದು ಕನ್ಫರ್ಮ್ ಆಗಿದೆಯಂತೆ.  ಶಕುನಿಯ ಅವತಾರದಲ್ಲಿ ದುರ್ಯೋಧನ ಅಂದರೆ ದರ್ಶನ್ ಗೆ ಪ್ರೀತಿಯ ಮಾವನಾಗಿ ಹೇಗೆ ಕಾಣಿಸಿಕೂಳ್ಳಲಾರೆ ಎಂಬುದೇ ಮತ್ತಷ್ಟು ಕುತೂಹಲದ ಸಂಗತಿ.  

ರವಿಶಂಕರ್ ಶಕುನಿ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಒಟ್ಟಿನಲ್ಲಿ ನಾನಾ ಕುತೂಹಲಗಳನ್ನು ತನ್ನೊಳಗಡಗಿಸಿಕೊಂಡಿರುವ ಕುರುಕ್ಷೇತ್ರ ಚಿತ್ರಕ್ಕಾಗಿ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಕ್ಯುರಿಯಾಸಿಟಿ ಹೆಚ್ಚಾಗುತ್ತಲೇ ಇದೆ.