ಎಫ್‍ಟಿಐಐ ಅಧ್ಯಕ್ಷರಾಗಿ ಅನುಪಮ್ ಖೇರ್ ನೇಮಕ

ಪುಣೆ ಮೂಲದ ದೇಶದ ಪ್ರತಿಷ್ಠಿತ ಸಿನಿಮಾ ಮತ್ತು ಟೆಲಿವಿಷ್ ಸಂಸ್ಥೆಯ (ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್‍ಟಿಟ್ಯೂಟ್ ಅಫ್ ಇಂಡಿಯಾ-ಎಫ್‍ಟಿಐಐ) ನೂತನ ಅಧ್ಯಕ್ಷರಾಗಿ ಹಿರಿಯ ನಟ ಅನುಪಮ್ ಖೇರ್ ನೇಮಕಗೊಂಡಿದ್ದಾರೆ. ಖೇರ್ ಅವರನ್ನು ಇಂದು ನೇಮಕ ಮಾಡಿರುವ ವಿಷಯವನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ವಿವಾದಕ್ಕೆ ಸಿಲುಕಿದ್ದ ಗಜೇಂದ್ರ ಚೌಹಾಣ್ ಸ್ಥಾನದಲ್ಲಿ ಖೇರ್ ಅವರನ್ನು ನೇಮಕ ಮಾಡಲಾಗಿದ್ದು, ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ.