ಸಖತ್‌ ಸ್ಲಿಮ್ ಹಾಟ್ ಲುಕ್'ನಲ್ಲಿ ರಾಗಿಣಿ ಮಿಂಚಿಂಗ್

ಮಾಡೆಲ್‌ ಕೂಡ ಆಗಿರುವ ರಾಗಿಣಿ ದ್ವಿವೇದಿ ಇತ್ತೀಚೆಗೆ ನಡೆದ 'ಬೆಂಗಳೂರು ಟೈಮ್ಸ್‌ ಫ್ಯಾಷನ್‌ ವೀಕ್‌ 2017'ನಲ್ಲಿ ಪಾಲ್ಗೊಂಡಿದ್ದರು. ಸಖತ್‌ ಸ್ಲಿಮ್ ಆಗಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಲೆಹಂಗಾ ಡ್ರೇಸ್‌ನಲ್ಲಿ ರಾಗಿಣಿ ಕಂಗೊಳಿಸಿದ್ದಾರೆ. ತುಪ್ಪದ ಹುಡುಗಿ ರಾಗಿಣಿ ತಮ್ಮ ಮೈ ತೂಕ ಇಳಿಸಿಕೊಂಡು ಮತ್ತಷ್ಟು ಹಾಟ್ ಅಂಡ್ ಸ್ಲಿಮ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಬೆಂಗಳೂರು ಫ್ಯಾಷನ್‌ ವೀಕ್‌ 2017ರಲ್ಲಿ ಶ್ರುತಿ ಹಾಸನ್, ಸೈನಾ ನೆಹ್ವಾಲ್, ಜೋಯಾ ಅಫ್ರೋಜ್, ಸನಾ ದುವಾ, ಐಂದ್ರಿತಾ ರೇ ಸೇರಿದಂತೆ ಹಲವರು ಭಾಗವಹಿಸಿದ್ದರು.

ರೂಪದರ್ಶಿಯರು ರ‍್ಯಾಂಪ್ ಮೇಲೆ ಕ್ಯಾಟ್​ವಾಕ್ ಮಾಡುವ ಮೂಲಕ ಸಭಿಕರನ್ನು ಮೂಕವಿಸ್ಮಿತರನ್ನಾಗಿದರು. ಚಿತ್ರನಟಿಯರಾದ ರಾಗಿಣಿ ದ್ವಿವೇದಿ, ಶ್ರುತಿ ಹಾಸನ್ ಮತ್ತು
ಶ್ರೀದೇವಿ ‘ನಾ ಮೇಲು ತಾ ಮೇಲು‘ ಎಂಬಂತೆ ಲುಕ್ ಕೊಟ್ಟರು. ಶ್ರವಣ್​ಕುಮಾರ್, ಪ್ರಿಯಾ ಕಟ್ರಿಯಾ ವಿನ್ಯಾಸಗೈದ ಉಡುಪುಗಳನ್ನು ಪ್ರದರ್ಶಿಸಿದರು.

ಸದ್ಯ ರಾಗಿಣಿ ಅಮ್ಮಾ, I Don’t know, ಹಾಗೂ ಪ್ರೊಡಕ್ಷನ್‌ ನಂ 6 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.