'ಜೀ ಕುಟುಂಬ ಅವಾರ್ಡ್ಸ್ 2017'ನಲ್ಲಿ ತಾರೆಗಳ ಸಂಗಮ

ದಶಕದ ಹಾದಿಯನ್ನು ದಾಟಿ ಮುನ್ನಡೆದಿರುವ ಜೀ ಕನ್ನಡ ವಾಹಿನಿ ಇತ್ತೀಚಿನ ದಿನಗಳಲ್ಲಿ ಕಿರುತೆರೆ ಉದ್ದಿಮೆಯಲ್ಲಿ ಕ್ರಾಂತಿಯನ್ನೇ ತಂದುದಲ್ಲದೆ, ಕನ್ನಡ ಕಲಾರಂಗಕ್ಕೆ ಹಲವು ಪ್ರತಿಭೆಗಳನ್ನು ಪರಿಚಯಿಸಿ ಕನ್ನಡಿಗರ ಮೆಚ್ಚುಗೆಗೆ ಕೂಡ ಪಾತ್ರವಾಗಿದೆ. ಜೀ ವಾಹಿನಿಯು ರಾಜ್ಯದ ನಾನಾ ಮೂಲೆಗಳಲ್ಲಿರುವ ಪ್ರತಿಭೆಗಳಿಗೆ ಒಂದು ವೇದಿಕೆಯಾಗಿ ಮಾರ್ಪಟ್ಟಿತ್ತಲ್ಲದೆ ಇದರೊಂದಿಗೆ ವೀಕ್ಷಕರೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಬೆಸೆದುಕೊಂಡಿದೆ. ಈ ಎಲ್ಲಾ ಖುಷಿಯನ್ನು ಸಂಭ್ರಮಿಸುವ ಮತ್ತೊಂದು ಅಪರೂಪದ ಕ್ಷಣವಾಗಿ ಜೀó ಕುಟುಂಬ ಅವಾಡ್ರ್ಸ್ 2017 ಮೂಡಿಬಂದಿದೆ.

ಯುವನಟಿ ಸಂಯುಕ್ತ ಹೆಗಡೆ ಹಾಗೂ ಜೀó ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಾದ ಸರಿಗಮಪ ಲಿಟ್ಲ್ ಚಾಂಪ್ಸ್, ಡ್ರಾಮಾ ಜೂನಿಯರ್ಸ್‍ನ ಎಲ್ಲಾ ಪುಟಾಣಿಗಳ ಪ್ರತಿಭಾ ಪ್ರದರ್ಶನ ಜೀ ಕುಟುಂಬ ಕಾರ್ಯಕ್ರಮದ ಹೈಲೈಟ್ ಆಗಿ ಮೂಡಿಬಂದಿದೆ. ಅಪಾರ ಜನಮನ್ನಣೆ ಗಳಿಸಿರುವ ಧಾರಾವಾಹಿಗಳಾದ ನಾಗಿಣಿ, ಬ್ರಹ್ಮಗಂಟು, ಜೋಡಿಹಕ್ಕಿ, ಹಾಗೂ ಯಾರೇ ನೀ ಮೋಹಿನಿಯ ಕಲಾವಿದರು ವೀಕ್ಷಕರನ್ನು ವಿಶೇಷ ಪ್ರದರ್ಶನದ ಮೂಲಕ ರಂಜಿಸಲಿದ್ದಾರೆ.

ಈ ಅಪರೂಪದ ಕಾರ್ಯಕ್ರಮಕ್ಕೆ ಮೆರುಗು ಹೆಚ್ಚಿಸಿದ್ದು ಕನ್ನಡ ಚಿತ್ರರಂಗದ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್. ಅಭಿಮಾನಿಗಳ ಪ್ರೀತಿಯ ‘ಅಪ್ಪು’ ವೇದಿಕೆಯ ಮೇಲೆ ಹಾಡಿಗೆ ಹೆಜ್ಜೆ ಹಾಕಿ, ಡ್ರಾಮಾ ಮಕ್ಕಳ ಜೊತೆ ಬೆರೆತು ಎಂಜಾಯ್ ಮಾಡಿದ್ದು ಕಾರ್ಯಕ್ರಮದ ಮತ್ತೊಂದು ಹೈಲೈಟ್. ಕಿಲಾಡಿ ಕುಟುಂಬದ ಸಾರಥಿ ನವರಸ ನಾಯಕ ಜಗ್ಗೇಶ್, ಹಿರಿಯ ನಟಿ ಜೂಲಿ ಲಕ್ಷ್ಮಿ, ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ, ಮತ್ತು ತಾರಾ ನಿರೂಪಕರಾದ ಅನುಶ್ರೀ ಮತ್ತು ಮಾಸ್ಟರ್ ಆನಂದ್ ಈ ಸಂಭ್ರಮದ ಇತರೆ ಆಕರ್ಷಣೆಗಳಾಗಿದ್ದರು.

ಇತ್ತೀಚಿನ ವರ್ಷಗಳಲ್ಲಿ ಜೀó ಕನ್ನಡ ವಾಹಿನಿ, ಕನ್ನಡಿಗ ಕುಟುಂಬಗಳನ್ನು ಮನದಲ್ಲಿಟ್ಟುಕೊಂಡು ಪ್ರಸ್ತುತಪಡಿಸಿದ ವೈವಿಧ್ಯಮಯ ಅಲೋಚನೆಗಳ ತಾಜಾ ಕಾರ್ಯಕ್ರಮಗಳಿಗೆ ವೀಕ್ಷಕರಿಂದ ಅಪಾರ ಮನ್ನಣೆ ಸಿಕ್ಕಿದೆ. ಈ ಯಶಸ್ಸಿಗೆ ಶ್ರಮಿಸಿದ ಜೀó ಕುಟುಂಬದ ಎಲ್ಲಾ ಸದಸ್ಯರನ್ನು ಗುರುತಿಸಿ, ಗೌರವಿಸುವುದೇ ಜೀ ಕುಟುಂಬ ಆವಾಡ್ರ್ಸ್‍ನ ಮುಖ್ಯ ಉದ್ದೇಶ ಎಂದು ಜೀó ಕನ್ನಡದ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹೇಳಿದರು.

ಇನ್ನು ಜೀó ಕುಟುಂಬ ಅವಾಡ್ರ್ಸ್ 2017ರ ಸಮಾರಂಭದಲ್ಲಿ ಒಟ್ಟು 36 ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಿದ್ದು. 7 ಜನಪ್ರಿಯ ವಿಭಾಗಗಳಿಗೆ ವೀಕ್ಷಕರೇ ನಿರ್ಣಾಯಕರಾಗಿದ್ದರು. ಜನಪ್ರಿಯ ಧಾರಾವಾಹಿ, ಜನಪ್ರಿಯ ಜೋಡಿ, ನಾಯಕ ನಟ, ನಟಿ, ರಿಯಾಲಿಟಿ ಶೋ ಸ್ಪರ್ಧಿಗಳು ಹಾಗೂ ನಿರೂಪಕರ ವಿಭಾಗಗಳಿಗೆ ವಾಹಿನಿಯು ವೀಕ್ಷಕರಿಂದ ನೇರವಾಗಿ ಮತಗಳನ್ನು ಪಡೆದು ವಿಜೇತರನ್ನು ಆಯ್ಕೆ ಮಾಡಿದೆ. ಇನ್ನಿತರ ವಿಭಾಗಗಳಿಗೆ ವಾಹಿನಿಯ ತೀರ್ಪುಗಾರರ ತಂಡ ಆಯ್ಕೆ ಪ್ರಕ್ರಿಯೆಯನ್ನ ನಡೆಸಿ ಸೆಲೆಕ್ಟ್ ಮಾಡಿದೆ.

ಜೀ ಕುಟುಂಬದವರೆಲ್ಲಾ ಒಂದೇ ವೇದಿಕೆಯಲ್ಲಿ ಸೇರಿದ ಈ ಸಮಾರಂಭದಲ್ಲಿ ವಾಹಿನಿಯ ಕಲಾವಿದರು ಹಾಗೂ ತಂತ್ರಜ್ಞರನ್ನು ಗೌರವಿಸುವ ಅಪೂರ್ವ ಸಂಭ್ರಮದ ಕಾರ್ಯಕ್ರಮ ಜೀó ಕುಟುಂಬ ಅವಾಡ್ರ್ಸ್ 2017 ಇದೇ ಅಕ್ಟೋಬರ್ 14 ಹಾಗೂ 15ರ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.