ಪದ್ಮಾವತಿ ಟ್ರೇಲರ್ ನೋಡಿ ರಾಜಮೌಳಿ ಹೇಳಿದ್ದೇನು

ಭಾರತದ ಸಿನಿಮಾ ಇತಿಹಾಸದಲ್ಲಿ ದಾಖಲಾಗುವಂತಹ ಬಾಹುಬಲಿ ಸಿನಿಮಾ ಮಾಡಿದ್ದ ನಿರ್ದೇಶಕ ರಾಜಮೌಳಿ, ಸಂಜಯ್‌ ಲೀಲಾ ಬನ್ಸಾಲಿ ಅವರ ನಿರ್ದೇಶನದ, ದೀಪಿಕಾ, ಶಾಹಿದ್, ರಣವೀರ್‌ ಸಿಂಗ್ ಅಭಿನಯದ ಪದ್ಮಾವತಿ ಟ್ರೇಲರ್ ನೋಡಿ ಮೆಚ್ಚುಗೆಯ ಮಾತನಾಡಿದ್ದಾರೆ. ಈ ಸಿನಿಮಾದ ಟ್ರೇಲರ್‌ ನೋಡಿದ ರಾಜಮೌಳಿ ಟ್ವೀಟ್ ಮಾಡಿದ್ದು, ಸಿನಿಮಾದ ಟ್ರೇಲರ್‌ ಬಹಳ ಸುಂದರವಾಗಿ ಮೂಡಿಬಂದಿದೆ. ಪ್ರತಿಯೊಂದು ಸೀನ್‌ಗೂ ಮಹತ್ವ ನೀಡಿ ಶೂಟ್‌ ಮಾಡಲಾಗಿದೆ ಎಂದಿದ್ದಾರೆ. ಸಂಜಯ್‌ ಲೀಲಾ ಬನ್ಸಾಲಿ ಅವರ ನಿರ್ದೇಶನದ ಪದ್ಮಾವತಿ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ಟ್ರೇಲರ್‌ ಮತ್ತಷ್ಟು ಕುತೂಹಲಗಳನ್ನು ಕೆರಳಿಸಿದೆ. ಡಿಸೆಂಬರ್‌ 1ರಂದು ಈ ಎಲ್ಲಾ ಕುತೂಹಲಗಳಿಗೆ ತೆರೆ ಬೀಳಲಿದೆ.