ಮತ್ತೊಂದು ಗಂಡು ಮಗುವಿಗೆ ತಂದೆಯಾದ ಪವರ್ ಸ್ಟಾರ್ ಪವನ್ ಕಲ್ಯಾಣ್

ನಟಿ ರೇಣು ದೇಸಾಯಿಗೆ ವಿಚ್ಚೇದನ ನೀಡಿದ ಬಳಿಕ ನಟ ಪವನ್ ಕಲ್ಯಾಣ್ ರಷ್ಯಾದ ಅನ್ನಾ ಲೆಜ್ನೆವಾ ಅವರನ್ನು ವರಿಸಿದ್ದರು. ಕಳೆದ 2011ರಲ್ಲಿ ಟೀನ್ ಮಾರ್ ಎಂಬ ಚಿತ್ರದ ಶೂಟಿಂಗ್ ವೇಳೆ ಪವನ್ ಅವರು ಅನ್ನಾರನ್ನು ಭೇಟಿಯಾಗಿದ್ದರು. ಆ ಬಳಿಕ ಇಬ್ಬರು ಡೇಟಿಂಗ್ ಮಾಡಿದ್ದು, ಪರಿಚಯ ಪ್ರೇಮಕ್ಕೆ ತಿರುಗಿ ಮದುವೆಯೂ ಆದ್ರು. ಈಗಾಗಲೇ ದಂಪತಿಗೆ ಪೊಲೆನಾ ಎಂಬ ಹೆಸರಿನ ಹೆಣ್ಣು ಮಗುವಿದೆ. ಇದೀಗ ಮತ್ತೆ ಗಂಡು ಮಗುವಿಗೆ ಅನ್ನಾ ಜನ್ಮ ನಿಡಿದ್ದು, ಎರಡೂ ಕುಟುಂಬಗಳಲ್ಲೂ ಸಂತಸ ಮನೆ ಮಾಡಿದೆ.

ಪವನ್ ಈ ಮೊದಲು ಮದುವೆಯಾದ ರೇಣು ದೇಸಾಯಿಗೆ ಇಬ್ಬರು ಮಕ್ಕಳಿದ್ದು, ಮಗ ಅಕಿರ ಹಾಗೂ ಮಗಳು ಸದ್ಯ ಇದೀಗ ತಾಯಿಯ ಜೊತೆಗಿದ್ದಾರೆ.