ಬಿಗ್‍ಹೌಸ್‍ಗೆ ಬರ್ತಾರಂತೆ 'ನಾಗಮಂಡಲ'ದ ವಿಜಯಲಕ್ಷ್ಮಿ.

ಕನ್ನಡ ಕಿರುತೆರೆಯಲ್ಲಿ ಹೊಸದೊಂದೇ ಅಲೆ ಎಬ್ಬಿಸಿರುವ ಬಿಗ್‍ಬಾಸ್ 5 ನ ಆರಂಭದ ದಿನಾಂಕ ಈಗಾಗಲೇ ಪ್ರಕಟವಾಗಿದ್ದು ಬರುವ 15 ರಿಂದ ಅದ್ಧೂರಿ ಸಮಾರಂಭದೊಂದಿಗೆ ಪ್ರಸಾರವಾಗಲಿದೆ.
ಬಿಗ್‍ಬಾಸ್ -5ರ ಆವೃತ್ತಿಗೆ ಇನ್ನು ಒಂದು ವಾರ ಮಾತ್ರ ಆದರೆ ಬಿಗ್‍ಹೌಸ್‍ನ ಒಳಗೆ ಹೋಗುವ ಸೆಲಬ್ರೇಟಿಗಳು ಯಾರು, ಸಾಮಾನ್ಯ ಜನರು ಯಾವ ಯಾವ ವಲಯಗಳಿಂದ ಬರುತ್ತಿದ್ದಾರೆ ಎಂಬ ಕುತೂಹಲ ಕೂಡ ಹೆಚ್ಚಿದೆ.

ಈ ನಡುವೆ ಬಿಗ್‍ಹೌಸ್ ಮನೆಗೆ ನಾಗಮಂಡಲ ಚಿತ್ರದಿಂದ ಚಿರಪಚಿತರಾದ ವಿಜಯಲಕ್ಷ್ಮೀ ಅವರು ಸೇರ್ಪಡೆಯಾಗುತ್ತಾರಂತೆ. ಇವರೊಂದಿಗೆ 3 ಪೆಗ್‍ನಂತಹ ಆಲ್ಬಂ ಸಾಂಗ್‍ನಿಂದ ಹೆಸರು ಮಾಡಿರುವ ಸಂಗೀತ ನಿರ್ದೇಶಕ ಚಂದನ್‍ಶೆಟ್ಟಿ , ಸಿಹಿಕಹಿ ಚಂದ್ರು , ರಾಜೇಶ್‍ನಟರಂಗ, ಕಿರುತೆರೆಯ ಕಲಾವಿದರಾದ ವರ್ಷಿಣಿ ಕುಸುಮಾ, ಕವಿತಾಗೌಡ, ಗಾಯಕಿಯರಾದ ಅನುರಾಧ್ ಅಥವಾ ಸುಪ್ರಿಯಾ ಲೋಹಿತ್, ಆರ್‍ಜೆ ರಿಯಾಜ್ ಹೀಗೆ ಸೆಲಬ್ರಿಟಿಗಳ ಪಟ್ಟಿ ಬೆಳೆಯುತ್ತಲೇ ಇದೆ.

ಆದರೆ ಇವರಲ್ಲಿ ಯಾರು ಬಿಗ್‍ಹೌಸ್ ಒಳಗೆ ಹೋಗುತ್ತಾರೆ ಎಂಬುದು ಇನ್ನೂ ಖಚಿತವಾಗಿಲ್ಲ . ಈ ಕುತೂಹಲವನ್ನು ತಣಿಸಿಕೊಳ್ಳಲು ಅಕ್ಟೋಬರ್ 15ರವರೆಗೆ ಕಾಯಲೇಬೇಕಷ್ಟೇ.. ಬಿಗ್‍ಬಾಸ್‍ನ ಟಿಆರ್‍ಪಿಯನ್ನು ಹೆಚ್ಚಿಸುವ ಸಲುವಾಗಿ ಸುದೀಪ್ ಸ್ಪರ್ಧಾಳುಗಳಿಗೆ ಬಗೆಬಗೆಯ ಭಕ್ಷ್ಯಗಳನ್ನು ತಯಾರಿ ಮಾಡಿಕೊಡುವ ಸಲುವಾಗಿ ಹಾಗಾಗೆ ಬಿಗ್‍ಹೌಸ್‍ಗೆ ಎಂಟ್ರಿ ಕೊಡುತ್ತಾರೆ.