ಫನ್ನೇ ಖಾನ್ ಚಿತ್ರದ ಶೂಟಿಂಗ್‍ಗೆ ಮೊದಲ ದಿನವೇ ಐಶು ಕೈಕೊಟ್ಟಿದ್ದೇಕೆ ಗೊತ್ತಾ..?

ಮಾಜಿ ಭುವನ ಸುಂದರಿ ಮತ್ತು ಖ್ಯಾತ ಅಭಿನೇತ್ರಿ ಐಶ್ವರ್ಯ ರೈ ಬಚ್ಚನ್ ಬಾಲಿವುಡ್‍ನ ಬದ್ದತೆಯ ವೃತ್ತಿಪರ ನಟಿ. ಪಾತ್ರ ಮತ್ತು ವಸ್ತ್ರಾಲಂಕಾರ-ಪ್ರಸಾಧನ ಇವುಗಳ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಕಾಸ್ಟ್ಯೂಮ್ ಆಗಲಿ ಅಥವಾ ಮೇಕಪ್ ಆಗಲಿ ಸ್ವಲ್ಪ ಕಿರಿಕಿರಿಯಾದರೂ ಕಾಂಪ್ರೊಮೈಸ್ (ಹೊಂದಾಣಿಕೆ) ಮಾಡಿಕೊಳ್ಳುವುದಿಲ್ಲ. ಸೂಪರ್‍ಹಿಟ್ ಅಯಿ ದಿಲ್ ಹೈ ಮುಷ್ಕಿಲ್ ಸಿನಿಮಾದಲ್ಲಿ ಗಮನಸೆಳೆಯುವ ಪಾತ್ರದಲ್ಲಿ ಮಿಂಚಿದ್ದ ಐಶು ಮುಂದಿನ ಸಿನಿಮಾ ಫನ್ನೇ ಖಾನ್. ಈ ಚಿತ್ರದ ಮೊದಲ ದಿನದ ಶೂಟಿಂಗ್‍ಗೆ ಐಶು ಕೈಕೊಡುವುದಕ್ಕೂ ಕೂಡ ಇದೇ ಕಾರಣ.

ಅಕ್ಟೋಬರ್‍ನಲ್ಲಿ ಐಶು ಫುಲ್ ಬ್ಯೂಸಿ. ಟೈಟ್ ಷೆಡ್ಯೂಲ್. ಹೀಗಿರುವಾಗಲೇ ಫನ್ನೇ ಖಾನ್ ಸಿನಿಮಾಗೆ ವಸ್ತ್ರವಿನ್ಯಾಸಕ ಮನೀಷ್ ಮಲ್ಹೋತ್ರಾ ವಿನ್ಯಾಸಗೊಳಿಸಿದ್ದ ವಸ್ತ್ರದ ಬಗ್ಗೆ ಐಶು ಆಕ್ಷೇಪ ವ್ಯಕ್ತಪಡಿಸಿದಳು. ಈ ಸಿನಿಮಾದಲ್ಲಿ ಆಕೆಯದು ಗ್ಲಾಮರ್ ಪಾಪ್ ಸ್ಟಾರ್ ಪಾತ್ರ.
ಆದರೆ ಸಿದ್ದವಾಗಿದ್ದ ಉಡುಗೆ ಅಪ್ಪಟ ಭಾರತೀಯದ್ದಾಗಿತ್ತು. ಹೀಗಾಗಿ ಪಾತ್ರಕ್ಕೂ ವಸ್ತ್ರಕ್ಕೂ ಪರಸ್ಪರ ಹೊಂದಾಣಿಕೆಯಾಗದು ಎಂಬ ಕಾರಣಕ್ಕಾಗಿ ಆಕೆ ಕೊನೆ ನಿಮಿಷದಲ್ಲಿ ಚಿತ್ರೀಕರಣ ಮುಂದೂಡಿದರು. ಈ ತಿಂಗಳು ನಾನು ತುಂಬಾ ಬ್ಯುಸಿಯಾಗಿದ್ದೇನೆ.

ಕೈತುಂಬಾ ಕೆಲಸವಿದೆ. ಅಲ್ಲದೆ, ಪರ್ಸನಲ್ ಕಮಿಟ್‍ಮೆಂಟ್‍ಗಳಿವೆ. ಹೀಗಾಗಿ ನಾನು ಈ ಶೂಟಿಂಗ್‍ನಲ್ಲಿ ವಸ್ತ್ರದ ಕಾರಣಕ್ಕಾಗಿ ಸಮಯ ವ್ಯರ್ಥ ಮಾಡಲು ಇಚ್ಚಿಸುವುದಿಲ್ಲ. ದೀಪಾವಳಿ ನಂತರ ನಾನು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸುತ್ತೇನೆ. ವಿರಾಮ ತೆಗೆದುಕೊಳ್ಳದೇ ನಾನು ಶೂಟಿಂಗ್‍ನಲ್ಲಿ ಪಾಲ್ಗೊಳ್ಳುತ್ತೇನೆ. ಆ ಮೂಲಕ ನಿರ್ಮಾಣ ವೆಚ್ಚವನ್ನು ತಗ್ಗಿಸುತ್ತೇನೆ ಎಂದು ನಿರ್ಮಾಪಕರಿಗೆ ಆಶ್ವಾಸನೆ ನೀಡಿದ್ದಾರೆ ಐಶು. ಫನ್ನೇ ಖಾನ್ ಸಿನಿಮಾದಲ್ಲಿ ಹಲವು ವರ್ಷಗಳ ಬಳಿಕ ಅನಿಲ್ ಕಫೂರ್ ಜೊತೆ ಐಶು ನಟಿಸುತ್ತಿರುವುದು ವಿಶೇಷವಾಗಿದೆ. ಐಶು ಸದ್ಯದಲ್ಲೇ ಇಡೀ ಕುಟುಂಬದೊಂದಿಗೆ
ಮಾಲ್ಡಿವ್ಸ್‍ಗೆ ತೆರಳಿದ್ದಾರೆ. ಅಲ್ಲಿ ತನ್ನ ಮಾವ ಮತ್ತು ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್‍ರ 75ನೇ ಜನ್ಮದಿನದ ವಿಶೇಷ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.