ಕಿರುತೆರೆ ಮೇಲೆ ಮತ್ತೊಮ್ಮೆ ಕಮಾಲ್ ಮಾಡಲು ಬರುತ್ತಿದ್ದಾರೆ ಪವರ್ ಸ್ಟಾರ್ ಪುನೀತ್

ಪವರ್ ಸ್ಟಾರ್ ಪುನೀತ್ ಅಭಿಮಾನಿಗಳಿಗಳಿಗೊಂದು ಸಿಹಿ ಸುದ್ದಿ. ಕನ್ನಡಿಗರ ಮನಗೆದ್ದಿದ ಪವರ್ ಸ್ಟಾರ್ ಪುನಿತ್ ರಾಜ್‌ಕುಮಾರ್ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಈಗಾಗಲೇ ಪುನೀತ್ ನಡೆಸಿಕೊಟ್ಟಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಮನೆಮಾತಾಗಿತ್ತು.

ಈ ಬಾರಿ ಕಲರ್‍ಸ್ ಕನ್ನಡದಲ್ಲಿ ಪುನಿತ್ ಅವರು ಹೊಸ ಶೋ ನಡೆಸಿಕೊಡಲು ಸಜ್ಜಾಗಿದ್ದು, ಇದಕ್ಕಾಗಿ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಈ ಶೋ ಕುರಿತ ಪ್ರೋಮ್ ಕೂಡ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರಿ ಕುತುಹಲ ಕೆರಳಿಸಿದೆ ಎನ್ನಬಹುದು.

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ, ಮಿನುಗು ತಾರೆ ಎಂದ, ನೋಡು ಎಂತ ಚೆಂದ ರಾತ್ರಿ ಆಯ್ತಿ ಮಲಗು ನನ್ನ ಪುಟ್ಟ ಕಂದ.. ನನ್ನ ಪುಟ್ಟ ಕಂದ….. ಎಂದು ಪುನಿತ್ ಮಗುವನ್ನು ಎತ್ತಿಕೊಂಡು ಹಾಡುತ್ತಿದ್ದಾರೆ…. ಬರುತ್ತಿದೆ ಬೆಸೆದ ಬಂಧಗಳನ್ನು ಗಟ್ಟಿ ಮಾಡೋ ಹೊಸ ಶೋ…. ಎಂಬ ಪ್ರೋಮ್ ಜನರ ಮೆಚ್ಚುಗೆ ಗಳಿಸಿದೆ.

ಈಗಾಗಲೇ ಹಲವಾರು ಜನಪ್ರಿಯ ರಿಯಾಲಿಟಿ ಶೋ ಮೂಲಕ ಇತರೆ ವಾಹಿನಿಗಳ ಅಗ್ರಸ್ಥಾನಕ್ಕೆ ಪೈಪೋಟಿಗೆ ಬಿದ್ದಿವೆ. ಇದರ ಮಧ್ಯೆ ಇದೀಗ ಪುನಿತ್ ಅವರು ಹೊಸ ಶೋ ಆರಂಭವಾಗುತ್ತಿರುವುದು ಪ್ರೇಕ್ಷಕರಿಗೆ ಸಿಗುವ ಮನೋರಂಜನೆ ಇನ್ನಷ್ಟು ಹೆಚ್ಚಾಗಲಿದೆ.

ಈಗ ಗೇಮ್ ಶೋ ಮೂಲಕ ಮತ್ತೆ ಕಿರುತೆರೆಯಲ್ಲಿ ಮಿಂಚು ಹರಿಸಲಿದ್ದಾರೆ. ಹೊಸ ರೀತಿಯ ರಿಯಾಲಿಟಿ ಶೋ ಇದಾಗಿದ್ದು, ಪುನೀತ್ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಅವರು ಹರ್ಷ ನಿರ್ದೇಶನದ ‘ಅಂಜನಿಪುತ್ರ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ನಂತರದಲ್ಲಿ ಟಿ.ವಿ. ಶೋ ಕುರಿತಾಗಿ ಹೆಚ್ಚಿನ ಮಾಹಿತಿ ಸಿಗಲಿದೆ.

ಮುಖ್ಯವಾಗಿ ಈ ಪ್ರೋಮೋ ಹೊಸ ಕಾರ್ಯಕ್ರಮ ವಿಭಿನ್ನತೆಯನ್ನು ಹೇಳುತ್ತಿದೆ ಮತ್ತು ಕಾರ್ಯಕ್ರಮದ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡುತ್ತದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮ ಒಂದು ಗೇಮ್ ಶೋ ಎಂದು ಹೇಳಲಾಗಿದೆ. ’ಕನ್ನಡ ಕೋಟ್ಯಾಧಿಪತಿ’ ಕಾರ್ಯಕ್ರಮ ಮೂಲಕ ಮೊದಲ ಬಾರಿಗೆ ನಿರೂಪಕರಾಗಿದ್ದ ಪುನೀತ್ ಈಗ 5 ವರ್ಷದ ಬಳಿಕ ಮತ್ತೆ ಕಿರುತೆರೆಯ ಒಂದು ಕಾರ್ಯಕ್ರಮವನ್ನು ಒಪ್ಪಿಕೊಂಡಿದ್ದಾರೆ. ನಿರೂಪಣೆ ಜೊತೆಗೆ ಕಿರುತೆರೆಯಲ್ಲಿ ಪುನೀತ್ ’ಮನೆದೇವ್ರು’ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದರು.