ಅ.6ರಿಂದ ತಮಿಳುನಾಡಿನಲ್ಲಿ ತಮಿಳು ಸಿನಿಮಾಗಳು ಬಿಡುಗಡೆ ಆಗಲ್ಲ

ಚೆನ್ನೈ, ಅ.4-ಶೇಕಡ 10ರಷ್ಟು ಸ್ಥಳೀಯ ಸಂಸ್ಥೆ ತೆರಿಗೆ ವಿಧಿಸುವುದನ್ನು ಪ್ರತಿಭಟಿಸಿ ಶುಕ್ರವಾರದಿಂದ (ಅ.6) ರಾಜ್ಯದಾದ್ಯಂತ ಹೊಸ ತಮಿಳು ಸಿನಿಮಾಗಳನ್ನು ಬಿಡುಗಡೆ ಮಾಡದಿರಲು ತಮಿಳು ಸಿನಿಮಾ ನಿರ್ಮಾಪಕರ ಮಂಡಳಿ ನಿರ್ಧರಿಸಿದೆ. ಇದರಿಂದ ತಮಿಳುನಾಡು ಚಿತ್ರೋದ್ಯಮದ ಮೇಲೆ ಪರಿಣಾಮ ಉಂಟಾಗಲಿದೆ.

ಕೇಂದ್ರ ಸರ್ಕಾರ ಜು.1ರಿಂದ ಜಾರಿಗೊಳಿಸಿರುವ ಸರಕುಗಳು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಅನುಷ್ಠಾನದಿಂದ ಈಗಾಗಲೇ ಚಿತ್ರ ನಿರ್ಮಾಪಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದರೊಂದಿಗೆ ಗಾಯದ ಮೇಲೆ ಬರೆ ಎಳೆದಂತೆ ಶೇ.10ರಷ್ಟು ಸ್ಥಳೀಯ ಸಂಸ್ಥೆ ತೆರಿಗೆ ವಿಧಿಸಿರುವುದು ದಿಗ್ಭ್ರಮೆ ಮೂಡಿಸಿದೆ. ಸಿನಿಮಾಗಳ ಮೇಲೆ ಶೇ.28ರಷ್ಟು ಜಿಎಸ್‍ಟಿಯಿಂದ ಚಿತ್ರೋದ್ಯಮ ನಲುಗುತ್ತಿದೆ ಎಂದು ಮಂಡಳಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.