Cini Gossips Cinisuddi Fresh Cini News 

ಅನುಷ್ಕಾ, ರಶ್ಮಿಕಾರನ್ನು ಹಿಂದಿಕ್ಕಿದ ಮತ್ತೊಬ್ಬ ಕನ್ನಡತಿ..!

ಕನ್ನಡ ಚಿತ್ರರಂಗಕ್ಕೆ ಮೊದಲಿಂದಲೂ ಅದರದೇ ಆದ ಸ್ಥಾನಮಾನವಿದೆ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಬಂದ ಮೇಲಂತೂ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ.

ವಿಶೇಷವಾಗಿ ಭಾರತೀಯ ಚಿತ್ರರಂಗಕ್ಕೆ ಕನ್ನಡ ತನ್ನದೇ ಆದ ಕೊಡುಗೆಯನ್ನು ನೀಡಿದೆ ಎನ್ನಬಹುದು. ಬಾಲಿವುಡ್‍ನಲ್ಲಿ ಶಾರುಖ್‍ಖಾನ್, ದೀಪಿಕಾ ಪಡುಕೋಣೆ, ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅಷ್ಟೇ ಏಕೆ ಅರ್ಜುನ್ ಸರ್ಜಾ, ಪ್ರಕಾಶ್ ರೈ ಹೀಗೆ ಪಟ್ಟಿ ಮಾಡುತ್ತಾ ಹೋದರೆ ದೇಶದ ಉದ್ದಗಲಕ್ಕೂ ನಮ್ಮವರೇ ಕಾನಸಿಗುತ್ತಾರೆ.

ಇದು ನಿಜಕ್ಕೂ ನಾವೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುವಂಥ ವಿಷಯ. ಈಗ ತೆಲುಗು ಸಿನಿಮಾ ರಂಗದಲ್ಲಿ ಕೂಡ ನಂಬರ್ ಒನ್ ನಾಯಕಿಯ ಪಟ್ಟವನ್ನು ಕರ್ನಾಟಕದವರೇ ಅಲಂಕರಿಸಿದ್ದಾರೆ, ಇದು ನಿಜ. ಆದರೆ, ಅದು ರಶ್ಮಿಕಾ ಮಂದಣ್ಣನೂ ಅಲ್ಲ, ಅನುಷ್ಕಾ ಶೆಟ್ಟಿನೂ ಅಲ್ಲ.

ಮತ್ಯಾರು ಅಂತೀರಾ, ಹೇಳ್ತೀವಿ ಕೇಳಿ, ಚಿತ್ರರಂಗ ಎಂದಮೇಲೆ ಅಲ್ಲಿ ನಂಬರ್ ಒನ್ ಪಟ್ಟಕ್ಕಾಗಿ ಯಾವಾಗಲೂ ಪೈಪೆÇೀಟಿ ನಡೆಯುತ್ತಲೇ ಇರುತ್ತದೆ. ಬಾಲಿವುಡ್‍ಗೆ ಹೋಲಿಸಿದರೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಈ ಪಟ್ಟಕ್ಕೆ ಹೆಚ್ಚು ಮಹತ್ವವಿದೆ ಎನ್ನಬಹುದು.

ಅದರಲ್ಲೂ ನಾಯಕ ನಟರಿಗಿಂತ ನಾಯಕಿ ನಟಿಯರಲ್ಲಿ ತಾನು ನಂಬರ್ ಒನ್ ಎನಿಸಿಕೊಳ್ಳಬೇಕೆಂಬ ಬಯಕೆ ಜಾಸ್ತಿ ಇರುತ್ತದೆ. ಸದ್ಯ ತೆಲುವು ಚಿತ್ರರಂಗದಲ್ಲಿ ಹೆಚ್ಚಿನ ನಟಿಯರು ನಾಮುಂದು, ತಾಮುಂದು ಎಂಬಂತೆ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ.

ಈ ಪೈಕಿ ಪ್ರಮುಖವಾಗಿ ಕರ್ನಾಟಕದವರೇ ಆದ ರಶ್ಮಿಕಾ ಮಂದಣ್ಣ ಒಂದು ಕಡೆಯಾದರೆ, ಅನುಷ್ಕಾ ಶೆಟ್ಟಿಯೂ ಸಹ ಈ ರೇಸ್‍ನಲ್ಲಿದ್ದಾರೆ. ಆದರೆ, ಸದ್ಯ ತೆಲುಗು ಚಿತ್ರರಂಗದ ನಂಬರ್ ಒನ್ ನಾಯಕಿ ಯಾರು ಎಂಬುದು ಈಗಾಗಲೇ ಬಹಿರಂಗವಾಗಿದೆ.

ಸದ್ಯ ತೆಲುಗು ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ನಂಬರ್ ಒನ್ ನಟಿ ಎಂದರೆ ಪೂಜಾ ಹೆಗ್ಡೆ. ತೆಲುಗಿನ ದೊಡ್ಡ ದೊಡ್ಡ ಬ್ಯಾನರ್ ಚಿತ್ರಗಳಲ್ಲಿ ಇವರಿಗೆ ಅವಕಾಶ ಕೈಬೀಸಿ ಕರೆಯುತ್ತಿದೆ.

ತನಗೆ ನಂಬರ್ ಒನ್ ನಾಯಕಿಯ ಪಟ್ಟ ಸಿಕ್ಕಿರುವ ಬಗ್ಗೆ ಮಾತನಾಡಿರುವ ಕನ್ನಡತಿ ಪೂಜಾ ಹೆಗ್ಡೆ, ಈ ವಿಚಾರವನ್ನು ತಿಳಿದು ನನಗೆ ತುಂಬಾ ಸಂತಸವಾಗಿದೆ. ಇದು ಹೀಗೆಯೇ ಮುಂದುವರೆಯಲಿ ಎಂದು ಆಶಿಸುತ್ತೇನೆ, ಬಾಲಿವುಡ್‍ನಲ್ಲೂ ನಂಬರ್ ಒನ್ ನಾಯಕಿ ಆಗುವ ಆಸೆ ನನಗಿದೆ ಎಂದಿದ್ದಾರೆ.

ಸದ್ಯ ಅಲ್ಲು ಅರ್ಜುನ್ ಜೊತೆಗೆ ಅಲಾ ವೈಕುಂಟಪುರಂಲೋ ಸಿನಿಮಾದಲ್ಲಿ ನಟಿಸುವ ಮೂಲಕ ಬಹುದೊಡ್ಡ ಹಿಟ್ ನೀಡಿದ ನಂತರ ಅಖಿಲ್ ನಾಗಾರ್ಜುನ ಅವರ ಜೊತೆಗೆ ಮೋಸ್ಟ್ ಎಲಿಜಿಬಲ್ ಬ್ಯಾಜುಲರ್ ಹಾಗೂ ಪ್ರಭಾಸ್ ಅವರ ಮುಂದಿನ ಚಿತ್ರದಲ್ಲಿ ಸಹ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ.

ಪೂಜಾ ಹೆಗ್ಡೆ ಮೂಲತಃ ಕರಾವಳಿ ಕರ್ನಾಟಕದವರು. ಮಂಗಳೂರು ಈಕೆಯ ಮೂಲ. ಆದರೆ, ಅವರು ಬೆಳೆದಿದ್ದು ಮಾತ್ರ ಮುಂಬೈ ಮಹಾನಗರದಲ್ಲಿ. ಇಲ್ಲಿ ಯಾರೇ ನಂಬರ್ ಒನ್ ಪಟ್ಟಕ್ಕೆ ಬಂದರೂ ನಮಗೆ ಖುಷಿಯೇ ಏಕೆಂದರೆ ಈ ಮೂವರೂ ಕನ್ನಡ ನೆಲದ ಕೊಡುಗೆ ಎಂದು ಹೇಳಿಕೊಳ್ಳುವುದಕ್ಕೆ ನಮಗೆಲ್ಲ ಹೆಮ್ಮೆಯಲ್ಲವೇ ?

Share This With Your Friends

Related posts