Cinisuddi Fresh Cini News 

ಪೋಗರು ಟೈಟಲ್ ಸಾಂಗ್ ಗೆ ಒಂದೂವರೆ ಕೋಟಿ ವೆಚ್ಚದ ಸೆಟ್..!

ಕರೋನಾ ಲಾಕ್‍ಡೌನ್‍ನಿಂದಾಗಿ ಕಳೆದ ಆರು ತಿಂಗಳಿಂದ ಕಾಯುತ್ತಿದ್ದ ಪೊಗರು ಚಿತ್ರತಂಡ ಕಳೆದ 24ರಿಂದ ಪೊಗರು ಚಿತ್ರದ ಚಿತ್ರೀಕರಣವನ್ನು ಪುನಾರಂಭ ಮಾಡಿದೆ.

ನಿರ್ಮಾಪಕ ಗಂಗಾಧರ್ ಅವರು ಒಂದೂವರೆ ಕೋಟಿ ರೂ. ಬಜೆಟ್‍ನಲ್ಲಿ ಬೆಂಗಳೂರಿನ ಎಚ್‍ಎಂಟಿ ಫ್ಯಾಕ್ಟರಿಯ ಆವರಣದಲ್ಲಿ ಭವ್ಯವಾದ ಸೆಟ್‍ವೊಂದನ್ನು ಹಾಕಿಸಿದ್ದಾರೆ.

ಇಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ನೂರಾರು ಜನ ನೃತ್ಯ ಕಲಾವಿದರ ಅಭಿನಯದಲ್ಲಿ ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿರುವಪೊಗರು ಅಣ್ಣನಿಗೆ ಎನ್ನುವ ಪೊಗರು ಚಿತ್ರದ ಶೀರ್ಷಿಕೆ ಗೀತೆಯನ್ನು ಶೂಟ್ ಮಾಡಲಾಗುತ್ತಿದೆ, ಈ ಹಿಂದಿನ ಖರಾಬು ಹಾಡಿಗಿಂತ ಅದ್ದೂರಿಯಾಗಿ ಈ ಹಾಡು ಮೂಡಿಬರಲಿದೆ ಎಂಬ ನಿರೀಕ್ಷೆಯಿದ್ದು, ಒಂದು ವಾರದವರೆಗೆ ಈ ಹಾಡಿನ ಶೂಟಿಂಗ್ ನಡೆಯಲಿದೆ,

ಈ ಚಿತ್ರವನ್ನು ಮುಕಿಂದ ಮುರಾರಿ ಖ್ಯಾತಿಯ ನಿರ್ದೇಶಕ ನಂದಕಿಶೋರ್ ಅವರು ಡೈರೆಕ್ಟ್ ಮಾಡುತ್ತಿದ್ದಾರೆ. ಅವರ ಪ್ರಕಾರ, ಪ್ರಸ್ತುತ, ಈ ಚಿತ್ರದ ಕ್ರಿಯೇಟಿವ್ ವಕ್ರ್ಸ್ ನಡೆಯುತ್ತಿದೆ. ಅವರು ಆರು ದಿನಗಳ ಕಾಲದ ಶೂಟಿಂಗ್ ಶೆಡ್ಯೂಲ್ ಅನ್ನು ಗುರುವಾರದಿಂದ ಪ್ರಾರಂಭಿಸಲು ಸಿದ್ಧರಾಗಿದ್ದಾರೆ.

ನಾವು ಪೊಗರು ಚಿತ್ರದ ಶೂಟಿಂಗ್‍ನ ಕೊನೆಯ ಹಂತದಲ್ಲಿದ್ದೇವೆ ಈ ಹಾಡು ಅಲ್ಲದೆ ನಟ ಧನಂಜಯ್ ಮತ್ತು ಇತರ ಕೆಲವು ಕಲಾವಿದರ ಜೊತೆಗಿನ ಎರಡು ದಿನಗಳ ಮಾತಿನ ಭಾಗದ ಚಿತ್ರೀಕರಣ ಬಾಕಿ ಇದ್ದು ಅದನ್ನು ಪೂರೈಸಿದ ನಂತರ ಚಿತ್ರದ ಪ್ರಚಾರ ಕಾರ್ಯ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.

ಪೊಗರು ಚಿತ್ರಕ್ಕೆ ಬಿ.ಎನ್. ಗಂಗಾಧರ್ ಅವರು ಬೃಹತ್ ಪ್ರಮಾಣದ ಬಂಡವಾಳವನ್ನು ಹೂಡಿದ್ದಾರೆ. ಅಲ್ಲದೆ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಜೋಡಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ನಟಿ ಮಯೂರಿ ಅಲ್ಲದೆ ಹಿರಿಯ ನಟ ರಾಘವೇಂದ್ರ ರಾಜಕುಮಾರ್, ರವಿಶಂಕರ್, ಸಾಧು ಕೋಕಿಲ, ಚಿಕ್ಕಣ್ಣ ಮತ್ತು ಕುರಿ ಪ್ರತಾಪ್ ಸಹ ಪೊಗರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

ಚಿತ್ರದ ಕ್ಲೈಮ್ಯಾಕ್ಸ್ ಸೀನ್‍ನಲ್ಲಿ ಬಾಡಿ ಬಿಲ್ಡರ್‍ಗಳಾದ ಕೈ ಗ್ರೀನ್, ಮೋರ್ಗನ್ ಅಸ್ಟೆ, ಜೋಹಾನ್ ಲ್ಯೂಕಾಸ್ ಮತ್ತು ಜೋ ಲಿಂಡರ್ ಇವರುಗಳ ವಿಶೇಷವಾದ ಸ್ಟಂಟ್ ಪೋರ್ಷನ್ ಇರುವುದು ಚಿತ್ರದ ಪ್ಲಸ್ ಪಾಯಿಂಟ್. ಈ ಚಿತ್ರಕ್ಕೆ ವಿಜಯ್ ಮಿಲ್ಟನ್ ಅವರ ಛಾಯಾಗ್ರಹಣವಿದೆ.

ಅಲ್ಲದೆ ಅರ್ಜುನ್ ಜನ್ಯಾ ಅವರ ಸಂಗೀತ ಸಂಯೋಜನೆಯಿದೆ. ಖರಾಬು ಸಾಂಗ್ ಈಗಾಗಲೇ ಚಿತ್ರರಂಗದಲ್ಲೇ ದೊಡ್ಡ ಮಟ್ಟದ ದಾಖಲೆಯನ್ನು ಬರೆದಿದೆ.

Related posts