Cinisuddi Fresh Cini News 

‘ಪೊಗರು’ ದಸ್ತಾಗಿದೆ ಖರಾಬು ಸಾಂಗ್..!

ಸಿನಿ ಪ್ರಿಯರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಗುವಂತಹ ಹಾಡೊಂದು ಬಿಡುಗಡೆಗೊಂಡಿದೆ. ಹೌದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಖರಾಬು ಹಾಡು ಈಗ ಹೊರಬಂದಿದೆ. ರಾಮನವಮಿಯ ವಿಶೇಷ ದಿನದಂದು ಅಭಿಮಾನಿಗಳಿಗೆ ಖರಾಬು​ ಹಾಡಿನ ಮೂಲಕ ದೊಡ್ಡ ಕೊಡುಗೆಯನ್ನೇ ನೀಡಿದೆ ಎನ್ನಬಹುದು.

ಪೊಗರು ಚಿತ್ರಕ್ಕೆ ನಂದ ಕಿಶೋರ್​ ನಿರ್ದೇಶನ ಮಾಡಿದ್ದು , ಸತತವಾಗಿ ಮೂರು ವರ್ಷದ ಫಲವಾಗಿ ಪೊಗರು ಸಿನಿಮಾ ಸಿದ್ಧಗೊಂಡಿದೆ. ಎಲ್ಲಾ ಅಂದುಕೊಂಡಂತೆ ಚಿತ್ರ ಬಿಡುಗಡೆಗೂ ಕೂಡ ತಂಡ ತಯಾರಿ ಮಾಡಿಕೊಳ್ಳುತ್ತಿದೆ. ಮಹಾಮಾರಿ ಕೊರೋನಾ ಹಾವಳಿಯಿಂದ ಜನ ಸಾಮಾನ್ಯರು ತತ್ತರಿಸುತ್ತಿದ್ದಾರೆ. ಇದರಿಂದಾಗಿ ಈ ಪೊಗರು ಸಿನಿಮಾ ಬಿಡುಗಡೆಗೆ ತಡವಾಗುತ್ತಿದೆ.

ಭರ್ಜರಿಯಾಗಿ ಈ ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದು ಇವರಿಗೆ ಜೋಡಿಯಾಗಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಪೊಗರು ಚಿತ್ರಕ್ಕೆ ಬಿಗ್​ ಬಾಸ್​​ ಖ್ಯಾತಿಯ ಚಂದನ್​ ಶೆಟ್ಟಿ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇಂದು ಬಿಡುಗಡೆಯಾಗಿರುವ ಪೊಗರು ಚಿತ್ರದ ಖರಾಬು ಚಿತ್ರದ ಹಾಡಿಗೆ ಸಾಹಿತ್ಯ ಬರೆದು ಸಂಗೀತ ನೀಡಿ ಹಾಡಿರುವುದು ಚಂದನ್ ಶೆಟ್ಟಿ. ಒಟ್ನಲ್ಲಿ ಧ್ರುವ ಸರ್ಜಾ ಅಭಿಮಾನಿಗಳಿಗಾಗಿ ಬಂದಿರುವ ಈ ಪೊಗರು ಸಾoಗ್ ಎಲ್ಲೆಡೆ ವೈರಲ್ ಆಗಿದೆ.

Share This With Your Friends

Related posts