Bollywood Cini Gossips Cinisuddi 

ಹುಲಿ ಡ್ರೆಸ್‍ನಲ್ಲಿ ಮಿಂಚಿದ `ಇಲಿ’ಯಾನಾ

ಬಳಕುವ ಸೋಂಟದ ಮೋಹಕ ನಟಿ ಇಲಿಯಾನ ಡಿಕ್ರೂಜ್ ಬಾಲಿವುಡ್ ಆಪ್ತವಲಯದಲ್ಲಿ ಇಲಿ ಎಂದೇ ಪರಿಚಿತಳು. ಇಲಿಯಾನಾ ಸೋಷಿಯಲ್ ಮೀಡಿಯಾ ಲವರ್. ಇನ್‍ಸ್ಟಾಗ್ರಾಂನಲ್ಲಿ ಇತ್ತೀಚಿನ ದಿನಗಳಲ್ಲಿ ಈಕೆ ಸಕ್ರಿಯ.

ಆಗಾಗ ಅಲ್ಟ್ರಾ ಮಾಡ್ರನ್ ಉಡುಪುಗಳು ಮತ್ತು ಬಿಕಿನಿ ಧರಿಸಿ ಫೋಟೋಗಳನ್ನು ಅಪ್‍ಲೋಡ್ ಮಾಡಿ ಎಲ್ಲರ ಗಮನ ಸೆಳೆಯುತ್ತಾಳೆ. ಇಲಿ ಬಿಂದಾಸ್ ಲುಕ್‍ಗೆ ಪಡ್ಡೆಗಳಂತೂ ಥ್ರಿಲ್ ಆಗುತ್ತಾರೆ.ರುಸ್ತುಂ ಖ್ಯಾತಿಯ ನಟಿ ಟೈಗರ್ ಪ್ರಿಂಟೆಡ್ ಪ್ಯಾಂಟ್‍ಸೂಟ್‍ನಲ್ಲಿ ಭರ್ಜರಿಯಾಗಿ ಕಾಣಿಸಿಕೊಂಡಿದ್ದಾರೆ.

ತನ್ನ ಹೊಸ ಲುಕ್‍ಗಳ ಸರಣಿ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾಳೆ. ಈ ಬೆಡಗಿ ಫ್ಯಾಷನ್ ಪ್ರಿಯೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಹುಲಿ ಚರ್ಮದಂಥ ಡ್ರೆಸ್‍ನಲ್ಲಿ ಹೈ-ವಿ ನೆಕ್ ವಿನ್ಯಾಸ ಗಮನ ಸೆಳೆಯುತ್ತಿದೆ. ತೆಳುವಾದ ಮೇಕಪ್, ಆಕರ್ಷಕ ಕೇಶವಿನ್ಯಾಸ ಮತ್ತು ಆಯತಾಕರಾದ ಇಯರಿಂಗ್ ಕೂಡ ಆಕೆಯ ಮ್ಯಾಚಿಂಗ್ ಅಭಿರುಚಿಗೆ ಪೂರಕವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ತನ್ನ ಸಿನಿಮಾ ಮತ್ತು ವೈಯಕ್ತಿಕ ಸುದ್ದಿ ಸಂಗತಿಗಳನ್ನು ಶೇರ್ ಮಾಡುವ ಇಲಿಯಾನಾಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಈಕೆಯ ಜೀವನ ಪ್ರೀತಿ ಮತ್ತು ಬದುಕಿನ ಕಹಿ ಘಟನೆಯನ್ನು ಮರೆಯುವ ಜೀವನೋತ್ಸಾಹ ಮೆಚ್ಚತಕ್ಕದ್ದು, ದೀರ್ಘಕಾಲ ಬಾಯ್‍ಫ್ರೆಂಡ್ ಆಗಿದ್ದ ಆಸ್ಟ್ರೇಲಿಯಾದ ಖ್ಯಾತ ಛಾಯಾಚಿತ್ರಗಾರ ಆಂಡ್ರ್ಯೂ ನೀ ಬೋನ್ ಜೊತೆ ಸಂಬಂಧ ಮುರಿದು ಬಿದ್ದಾಗ, ಇಲಿಯಾನಾ ಎಲ್ಲ ಭಗ್ನ ಪ್ರೇಮಿಯಂತೆ ಘಾಸಿಗೊಂಡಳು.

ನಂತರ ಚೇತರಿಸಿಕೊಂಡು ಇಂಥ ಘಟನೆಗಳನ್ನು ಬದುಕಿನಲ್ಲಿ ಎದುರಿಸುವ ಗುಣಗಳನ್ನು ಪ್ರತಿಯೊಬ್ಬರೂ ಬೆಳಸಿಕೊಳ್ಳಬೇಕೆಂದು ಧೈರ್ಯದ ಮಾತುಗಳನ್ನಾಡಿದರು. ಈಕೆ ದಿಟ್ಟ ನಿಲುವು ಮತ್ತು ಜೀವನ ಧೋರಣೆ ಅಭಿಮಾನಿಗಳಿಗೆ ಬಹುವಾಗಿ ಇಷ್ಟವಾಯಿತು.

ಇಲಿ ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ, ಇಲಿಯಾನಾ ಅಭಿನಯದ ಪಾಗಲ್‍ಪಂಟಿ ಇದೇ ತಿಂಗಳು 22ರಂದು ತೆರೆಕಾಣಲಿದೆ. ಅನೀಸ್ ಬಜ್ಮಿ ನಿರ್ದೇಶನದ ಈ ಹಾಸ್ಯಪ್ರಧಾನ ಚಿತ್ರದಲ್ಲಿ ಜಾನ್ ಅಬ್ರಹಾಂ, ಅನಿಲ್ ಕಪೂರ್, ಕೃತಿ ಕರಬಂದ, ಪುಳಕಿತ್ ಸಾಮ್ರಾಟ್, ಅರ್ಷದ್ ವಾರ್ಸಿ, ಸೌರಭ್ ಶುಕ್ಲಾ ಮತಿತರರು ನಟಿಸಿದ್ದಾರೆ.

Share This With Your Friends

Related posts