Cinisuddi Fresh Cini News 

“ಪೆದ್ದು ನಾರಾಯಣ” ಚಿತ್ರದ ಟ್ರೈಲರ್ ಲಾಂಚ್

ಗಂಗಾ ಗುರು ಕಂಬೈನ್ಸ್ ಕೆ.ವಾಸುದೇವ್ ಅರ್ಪಿಸುವ ಭೀಮರೆಡ್ಡಿ ನಿರ್ಮಾಣದ ಸಿನಿಮಾ ಪೆದ್ದು ನಾರಾಯಣ. ಹಲವು ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ‌ ಮಾಡಿ‌ ಅನುಭವವಿರುವ ಉತ್ತರ‌ ಕರ್ನಾಟಕದ ಹುಬ್ಬಳ್ಳಿ ಹುಡ್ಗ ಯುವ ನಿರ್ದೇಶಕ ರಘು ನಿರ್ದೇಶನದ ಪೆದ್ದು ನಾರಾಯಣ ಸಿನಿಮಾ.

ಲವ್ ಕಂ‌ ಆಕ್ಷನ್ ಕಥಾಹಂದರ ಹೊಂದಿರುವ ಪೆದ್ದು ನಾರಾಯಣ ಸಿನಿಮಾದಲ್ಲಿ ಶ್ರೀ ರತ್ನಕಾರ್ ನಾಯಕನಾಗಿ ಬಣ್ಣ ಹಚ್ಚಿದ್ದು, ಸೋನು ಆರ್ ಅಶೋಕ್ ನಾಯಕ ನಟಿಯಾಗಿ‌ ಕಾಣಿಸಿಕೊಂಡಿದ್ದಾರೆ. ಇದು ಇವರಿಬ್ಬರ ಮೊದಲ ಸಿನಿಮಾ. ಸಿನಿಮಾ ಶೇಖಡ 60 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಹಿರಿಯ ಕಲಾವಿದ ಕೀರ್ತಿರಾಜ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭಕೋರಿದರು. ಹಾಗೇ ಕಾರ್ಯಕ್ರಮದಲ್ಲಿ ನಟ ಚಂದು ಗೌಡ ಸಹ ಉಪಸ್ಥತರಿದ್ದರು

ಚಿಕ್ಕಮಗಳೂರು, ಹೊನ್ನಾವರ, ಹಾಸನ, ಗೋಕಾಕ್, ಧಾರವಾಡ, ದಾಂಡೇಲಿ, ರಾಜಸ್ತಾನ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಕಿಶೋರ್, ಜೈಜಗದೀಶ್, ಶೋಭರಾಜ್, ವೀಣಾ ಸುಂದರ್, ಸುನಂದ ಶರಣಪ್ಪ ಸೇರಿದಂತೆ ಹಲವು ತಾರಾಗಣ ಸಿನಿಮಾದಲ್ಲಿದೆ.

ಪೆದ್ದು ನಾರಾಯಣ ಸಿನಿಮಾದಲ್ಲಿ ರಘು ರೂಗಿ ಛಾಯಾಗ್ರಾಹಕರಾಗಿಯೂ ಕೆಲಸ‌ನಿರ್ವಹಿಸಿದ್ದಾರೆ. ಶ್ರೀಶಸ್ತ್ರ ಸಂಗೀತ, ನಾಗೇಂದ್ರ ಪ್ರಸಾದ್ ಸಾಹಿತ್ಯ, ಎನ್.ಎಂ.ವಿಶ್ವ ಸಂಕಲನ ಸಿನಿಮಾಕ್ಕಿದೆ.

Related posts