ಕಿರಾತಕನ ಬೆಡಗಿ ಬಹಿಷ್ಕಾರಗೊಂಡಿದ್ದು ಏಕೆ…?
ಯಶ್ ಜೊತೆ ನಾಯಕಿಯಾಗಿ ಕಿರಾತಕ ಎನ್ನುವ ಚಿತ್ರದಲ್ಲಿ ಅಭಿನಯಿಸಿದ್ದ ಓವಿಯಾ ಈಗ ಕನ್ನಡ ಚಿತ್ರರಂಗದಲ್ಲಿ ಮತ್ತೆ ನೆನಪಿಗೆ ಬರುವುದು ಕಷ್ಟ; ಓದಲು ಸೈಕಲೇರಿ ಹೋಗುವ ಯುವತಿಯ ಹಿಂದೆ ಯಶ್ ಬೀಳುವುದು, ಇಲ್ಲಿ ಆಕೆ ತಿರಸ್ಕರಿಸುವುದು, ಅದು ಮುಂದುವರೆಯುತ್ತಲೇ ಇರುವ ಹಂತದಲ್ಲಿ , ಪ್ರೀತಿಯೂ ಆರಂಭವಾಗುತ್ತದೆ.
ಈ ಪಾತ್ರದಲ್ಲಿ ಅಭಿನಯಿಸಿರುವ ಓವಿಯಾ ಪ್ರತಿಭಾವಂತೆ ಎಂಬುದನ್ನು ಸ್ಪಷ್ಟಪಡಿಸಿದ್ದಾಳೆ. ಈಗ ಈ ನಟಿ ತಮಿಳು ಚಿತ್ರರಂಗದಲ್ಲಿದ್ದಾಳೆ. ಅವಕಾಶಗಳು ಒಂದಷ್ಟು ಸಿಕ್ಕೂ ಅಗಿದೆ.
ಇಲ್ಲಿ ಓವಿಯಾ ಅಭಿನಯಿಸಿಕೊಂಡೇ ಹೋಗುತ್ತಿದ್ದರೆ ಸುದ್ದಿ ಆಗುತ್ತಿರಲಿಲ್ಲ, ಈಕೆ ಮದುವೆಯ ವಿಷಯದಲ್ಲಿ ಕೊಟ್ಟ ಅಭಿಪ್ರಾಯದಿಂದ ತಮಿಳುನಾಡಿನಲ್ಲಿ ದೊಡ್ಡ ಮಟ್ಟದಲ್ಲಿ ವಿವಾದಗ್ರಸ್ಥೆ ಆಗಿಹೋಗಿದ್ದಾಳೆ. ಆಕೆಯ ಮಾತಿಗೆ ಹಿಂದು ಸಂಘಟನೆಗಳಂತೂ ಕೆರಳಿ ಕೆಂಡವಾಗಿವೆ, ಮತ್ತು ಈ ನಟಿಯ ವಿರುದ್ದ ಅವರಿಂದ ಪ್ರತಿಭಟನೆಯೂ ಆರಂಭವಾಗಿದೆ.
ಚಿತ್ರದ ಯಶಸ್ಸಿಗೆ ಆಕೆ ಪಾತ್ರಳಾಗಿರುವ ಯಾವುದೇ ದಾಖಲೆ ತಮಿಳು ಚಿತ್ರರಂಗದಲ್ಲಿ ಇಲ್ಲದಿರುವುದರಿಂದ ಓವಿಯಾಳನ್ನು ಚಿತ್ರರಂಗದಿಂದಲೇ ಬಹಿಷ್ಕರಿಸಬೇಕು ಎನ್ನುವ ತೀರ್ಮಾನ ನಿರ್ಮಾಪಕರ ಸಂಘದಿಂದಲೂ ಆಗಿದೆ.
ಹೆಣ್ಣಿಗೆ ಮಧುವೆಯ ಅಗತ್ಯವೇ ಇಲ್ಲ ಎಂದು ಓವಿಯಾ ಮಧುವೆಯ ಮಹತ್ವವನ್ನೇ ಪ್ರಶ್ನಿಸಿದ್ದಾಳೆ. ತಾನಂತೂ ಮಧುವೆನೇ ಆಗಲ್ಲ, ಗಂಡನ ಅಗತ್ಯನೂ ನನಗಿಲ್ಲ ಇದು ಓವಿಯಾಳ ಬಹಿರಂಗ ಹೇಳಿಕೆ.
ಆಕೆಯ ಮತ್ತಷ್ಟು ಮುಂದುವರೆದ ಮಾತುಗಳು ಇಲ್ಲಿ ನಮೂದಿಸಲು ಯೋಗ್ಯವಿಲ್ಲ. ಅದೆಲ್ಲಾ ಓವಿಯಾಳ ಟ್ವಿಟರ್ ಖಾತೆಯಲ್ಲಿದೆ. ಹೀಗೆಲ್ಲಾ ಸಂಸ್ಕ್ರತಿ ಮತ್ತು ಧರ್ಮಕ್ಕೆ ವಿರುದ್ದವಾಗಿ ಮಾತಾಡಿರುವ ಓವಿಯಾಳ ವಿರುದ್ದ ಯಾವಾಗ ತಮಿಳುನಾಡು ಹಿಂದೂ ಪರ ಸಂಘಟನೆಗಳು ಹಿಗ್ಗಾಮುಗ್ಗಾವಾಗಿ ಟೀಕಿಸಲು ಆರಂಭಮಾಡುತ್ತಿದ್ದಂತೆ, ಆಕೆ ಈಗ ತಮಿಳುನಾಡಿನಿಂದಲೇ ಕಾಣೆ ಆಗಿದ್ದಾಳೆ. ಅಭಿನಯಿಸಲು ಬುಕ್ ಆಗಿದ್ದ ಆಕೆಯನ್ನು ನಿರ್ಮಾಪಕರು ಕೈಬಿಟ್ಟಿದ್ದಾರೆ.
ಕನ್ನಡ ನಟಿ ಶೃತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ದ ಮತ್ತೊಂದು ಆಯಾಮದಲ್ಲಿ ಆರೋಪ ಮಾಡಿದ್ದು ಇನ್ನೂ ಮಾಸಿಹೋಗಿಲ್ಲ. ಆದರೆ ಕನ್ನಡ ಚಿತ್ರನಿರ್ಮಾಪಕರು ಶೃತಿ ಹರಿಹರನ್ ವಿಷಯವನ್ನು ಬಹು ಗಂಭೀರವಾಗಿ ತೆಗೆದುಕೊಂಡರು, ಅಷ್ಟೇ ಅಲ್ಲ, ಆನಂತರ ಆಕೆಗೆ ಯಾವ ಚಿತ್ರದಲ್ಲೂ ಅವಕಾಶ ಕೊಡಲಿಲ್ಲ. ಈಗ ಅಂಥದ್ದೇ ಪರಿಸ್ಥಿತಿಯನ್ನು ಓವಿಯಾ ತಮಿಳು ಚಿತ್ರರಂಗದಲ್ಲಿ ಎದುರಿಸುತ್ತಿದ್ದಾಳೆ.