Cinisuddi Fresh Cini News 

“ಒಂಬತ್ತನೇ ದಿಕ್ಕು ” No Cuts U/A…

ಬೆಳ್ಳಿ ಪರದೆ ಮೇಲೆ ಸದಾ ಹೊಸತನದ ಪ್ರಯತ್ನದತ್ತ ಗಮನ ಹರಿಸುವ ನಿರ್ದೇಶಕ ದಯಾಳ್ ಪದ್ಮನಾಭನ್. ಈಗ ಅವರ ಸಾರಥ್ಯದಲ್ಲಿ ಹೊಸ ದಿಕ್ಕನ್ನು ಹುಡುಕಿದ್ದಾರೆ. ಅದು ಸೆನ್ಸಾರ್ ಮಂಡಳಿಯ ಮುಂದೆಯೂ ಹೋಗಿ ಯು/ಎ ಅರ್ಹತಾ ಪತ್ರವನ್ನು ಕೂಡ ಪಡೆದುಕೊಂಡೆ.

ಪ್ರಪಂಚದಲ್ಲಿರುವ 8 ದಿಕ್ಕುಗಳ ಜೊತೆಗೆ ಒಂಭತ್ತನೇ ದಿಕ್ಕು ಕೂಡ ಇದೇ ಎಂದು ತಮ್ಮ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ. ದಯಾಳ್ ಪದ್ಮನಾಭನ್ ಅವರು ಕೂಡ ಯಶವಂತ ಚಿತ್ರದ ನಂತರ ಕಮರ್ಷಿಯಲ್ ಚಿತ್ರದ ಗೋಜಿಗೆ ಹೋಗಿರಲಿಲ್ಲ, ಈಗ ಲೂಸ್‍ಮಾದ ಯೋಗೀಶ್ ಅವರು ನಟಿಸಿರುವ ಒಂಭತ್ತನೇ ದಿಕ್ಕು ಚಿತ್ರದ ಮೂಲಕ ಮತ್ತೆ ಆ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಈ ಚಿತ್ರದ ಕಥೆಯು ಬೆಳಗ್ಗೆ 7.30 ರಿಂದ ಸಂಜೆ 4.30ರವರೆಗೆ ನಡೆಯುವ ಕಥೆಯನ್ನು ಹೇಳಲು ಹೊರಟಿದ್ದು , ಲೂಸ್ ಮಾದ ಯೋಗಿ, ಅದಿತಿ ಪ್ರಭುದೇವ ನಾಯಕ, ನಾಯಕಿಯರಾಗಿದ್ದಾರೆ.

ಲೂಸ್ ಮಾದ ಯೋಗಿ ಈ ಚಿತ್ರದಲ್ಲಿ ಟ್ರಾವೆಲ್ ಏಜೆಂಟ್ ಆಗಿ ಕಾಣಿಸಿಕೊಂಡಿದ್ದು , ಈ ಚಿತ್ರವು ತಮ್ಮ ಚಿತ್ರ ಜೀವನಕ್ಕೆ ಒಂದು ಬ್ರೇಕ್ ನೀಡಲಿದೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ. ಸಾಮಾನ್ಯ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅದಿತಿ ಪ್ರಭುದೇವರ ಪಾತ್ರಕ್ಕೂ ಹೆಚ್ಚು ಮಹತ್ವವಿರುವುದರಿಂದ ಸಹಜವಾಗಿಯೇ ಅವರು ಖುಷಿಯಾಗಿದ್ದಾರೆ.

ಉಳಿದಂತೆ ಖಳ ನಾಯಕನಾಗಿ ಸಂಪತ್‍ಕುಮಾರ್, ನಾಯಕಿಯ ತಂದೆಯಾಗಿ ಆಶೋಕ್ , ನಾಯಕನ ತಾಯಿಯಾಗಿ ಶೃತಿ ನಾಯಕ್, ವಿಶೇಷ ಪಾತ್ರದಲ್ಲಿ ಸಾಯಿಕುಮಾರ್ ಹಾಗೂ ಯತಿರಾಜ್, ಮಧುಸೂಧನ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಅಭಿಷೇಕ್ ಎಸ್.ಎನ್. ಜೊತೆ ಸೇರಿಕೊಂಡು ಸಂಭಾಷಣೆಯನ್ನು ರಚಿಸಿದ್ದಾರೆ.

ಡಿ ಪಿಕ್ಚರ್ಸ್‍ ನ ದಯಾಳ್ ಪದ್ಮನಾಭನ್, ಜಿ. ಸಿನಿಮಾಸ್‍ನ ಗುರು ದೇಶಪಾಂಡೆ ಮತ್ತು ಚೆನ್ನೈ ಮೂಲದ ಕೆ9 ಸ್ಟುಡಿಯೋ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅವಿನಾಶ್ ಶೆಟ್ಟಿ ಹಾಗೂ ವೆಂಕಟ್‍ದೇವ್ ಕಾರ್ಯಕಾರಿ ನಿರ್ಮಾಪಕರಾಗಿದ್ದು ಮಣಿಕಾಂತ್ ಕದ್ರಿ ಸಂಗೀತ, ಪ್ರೀತಿ ಮೋಹನ್ ಸಂಕಲನ, ವಿಕ್ರಂ ಮೋರ್ ಸಾಹಸ ಚಿತ್ರಕ್ಕಿದೆ.

ಒಂದು ಹೊಸ ರೀತಿಯ ಪ್ರಯತ್ನದತ್ತ ಸಾಗಿರುವ ಒಂಬತ್ತನೇ ದಿಕ್ಕು ಯಾವುದೇ ಕಟ್ಸ್ ಇಲ್ಲದೆ ಸೆನ್ಸಾರ್ ಮಂಡಳಿಯಿಂದ ಹೊರಬಂದಿದೆ.

Share This With Your Friends

Related posts