Cinisuddi Fresh Cini News 

‘ಒಂಬತ್ತನೇ ಅದ್ಭುತ’ ತೋರಿಸಲು ಹೊರಟ ಸಂತೋಷ್‍ಕುಮಾರ್

ಸಹಾಯಕ ನಿರ್ದೇಶಕರಾಗಿ ಚಿತ್ರರಂಗದಲ್ಲಿ 13 ವರ್ಷಗಳಿಂದ ಗುರುತಿಸಿಕೊಳ್ಳುವ ಮೂಲಕ ದೇವ್ರಾಣೆ, 90, ಹುಡುಗಾಟ, ಕೆಂಪ ಸೇರಿದಂತೆ 15 ಚಿತ್ರಗಳಿಗೆ ಕೆಲಸ ಮಾಡಿರುವ ಸಂತೋಷ್‍ಕುಮಾರ್ ಬೆಟಗೇರಿ ಈಗ ಒಂಭತ್ತನೇ ಅದ್ಭುತ ಚಿತ್ರದ ಮೂಲಕ ನಿರ್ದೇಶಕನ ಹ್ಯಾಟ್ ಅನ್ನು ಧರಿಸಿದ್ದಾರೆ.

ಮೊನ್ನೆ ಈ ಚಿತ್ರದ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ ಸಮಾರಂಭವು ರೇಣುಕಾಂಬ ಥಿಯೇಟರ್‍ನಲ್ಲಿ ನಡೆಯಿತು. ಸಂತೋಷ್‍ಕುಮಾರ್ ಅವರೇ ಈ ಚಿತ್ರಕ್ಕೆ ಬಂಡವಾಳ ಹಾಕಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಸಂತೋಷ್‍ಕುಮಾರ್ ಮಾತನಾಡಿ, ಒಂಭತ್ತನೇ ಅದ್ಭುತ ಚಿತ್ರದಲ್ಲಿ ಒಂದು ಶವ ಹಾಗೂ ಅದರ ಸುತ್ತ ನಡೆಯುವ ಘಟನೆಗಳನ್ನು ಹಾಸ್ಯದ ಧಾಟಿಯಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಸಾಮಾನ್ಯ ಧಾಟಿಯಲ್ಲಿ ಕಥೆಯನ್ನು ಹೇಳದೆ ವಿಭಿನ್ನ ರೀತಿಯಲ್ಲಿ ಚಿತ್ರದ ಕಥೆಯನ್ನು ಹೆಣೆದಿದ್ದೇವೆ.

ನಿರ್ಮಾಣದ ಕಾರ್ಯದಲ್ಲಿ ನಮ್ಮ ಸಹೋದರ ಸಹಕಾರ ಕೂಡ ಇದೆ . ಈ ಚಿತ್ರದ ಇಡೀ ಕಥೆ ಮಂಡ್ಯದಲ್ಲಿ ನಡೆಯುತ್ತದೆ. ಮಂಗಳೂರು, ಉತ್ತರ ಕರ್ನಾಟಕ, ಮಂಡ್ಯ ಸೇರಿ 3 ಶೈಲಿಯ ಭಾಷೆಗಳ ಮಿಶ್ರಣ ಈ ಚಿತ್ರದಲ್ಲಿದೆ ಎಂದು ಹೇಳಿದರು. ಈ ಚಿತ್ರದ ನಾಯಕಿಯಾಗಿ ನಯನ ಸಾಯಿ ಅವರು ಕಾಣಿಸಿಕೊಂಡಿದ್ದಾರೆ. ಅಲ್ಲದೆ ತಿಥಿ ಖ್ಯಾತಿಯ ಸೆಂಚುರಿಗೌಡ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಿದರು.

ನಟಿ ನಯನಸಾಯಿ ಮಾತನಾಡಿ, ಮಾಡೆಲ್ ಲೋಕದಿಂದ ಬಂದಿರುವ ನಾನು ಮಿಸ್ ಇಂಡಿಯಾ ಸೌತ್‍ನಲ್ಲಿ ಪಾಲ್ಗೊಂಡಿದ್ದೆ. ನನ್ನ ಬಯೋಡೇಟ ನೋಡಿ ನಿರ್ದೇಶಕರು ಈ ಚಿತ್ರದಲ್ಲಿ ನಟಿಸುವ ಅವಕಾಶ ಕೊಟ್ಟರು. ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ಕಾಮಿಡಿ, ಸಸ್ಪೆನ್ಸ್ ಕಥೆಯಿದ್ದು, ಚಿತ್ರತಂಡದವರ ಸಹಕಾರದಿಂದ ತುಂಬಾ ಚೆನ್ನಾಗಿ ನಟಿಸಿದ್ದೇನೆ ಎಂದು ಚಿತ್ರೀಕರಣದ ಸಮಯದಲ್ಲಾದ ಅನುಭವ ಹಾಗೂ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.

ಸುನಿಲ್ ಕೋಶಿ ಸಂಗೀತ, ರಾಘವೇಂದ್ರ ಬಿ.ಕೋಲಾರ್ ಛಾಯಾಗ್ರಹಣವಿದ್ದು, ನಾಗರಾಜ್ ಆರ್.ಕುಂತೂರ್, ಗೋಪಾಲಕೃಷ್ಣ ಗೌಡ ಹಾಗೂ ಮಂಜಣ್ಣ ಬೆಟ್ಟಹಳ್ಳಿ ಈ ಚಿತ್ರದ ಸಹನಿರ್ಮಾಪಕರಾಗಿದ್ದಾರೆ. ಒಂಭತ್ತನೇ ಅದ್ಭುತ ಚಿತ್ರದ ಮೂಲಕ ನಿರ್ದೇಶಕನಾಗಲು ಹೊರಟಿರುವ ಸಂತೋಷ್‍ಗೆ ಈ ಚಿತ್ರವು ಸಕ್ಸಸ್ ನೀಡುವಂತಾಗಲಿ.

Share This With Your Friends

Related posts