Cinisuddi Fresh Cini News 

ಈ ವಾರ ತೆರೆ ಮೇಲೆ ‘ಒಂಭತ್ತನೇ ಅದ್ಭುತ’

ಕೆ.ಕೆ. ಬ್ರದರ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಬೆಟ ಗೇರಿ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ಮಾಣದ ಜೊತೆ ನಿರ್ದೇಶನ ಮಾಡಿರುವ ಒಂಭತ್ತನೇ ಅದ್ಭುತ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಒಂದು ಮರ್ಡಘರ್ ಮಿಸ್ಟರಿ ಸುತ್ತ ಮುತ್ತ ನಡೆಯುವ ಘಟನೆಯನ್ನು ಹಾಸ್ಯಮಯವಾಗಿ ಹೇಳಲು ಹೊರಟಿರುವ ಈ ಚಿತ್ರಕ್ಕೆ ಸುಶೀಲ್ ಕೋಶಿ ಸಂಗೀತ, ರಾಘವೇಂದ್ರ ಬಿ. ಕೋಲಾರ್ ಛಾಯಾಗ್ರಹಣ, ವೆಂಕಿ ಡಿವಿಡಿ ಸಂಕಲನ, ವೇಣುಕೃಷ್ಣ ಸಾಹಿತ್ಯ ಸುಜಿತ್ ಡ್ಯಾನ್ಸರ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ನಾಗರಾಜ್ ಆರ್ ಕಂತೂರು, ಗೋಪಾಲಕೃಷ್ಣ ಗೌಡ, ಮಂಜಣ್ಣ ಬೆಟ್ಟಹಳ್ಳಿ ಸಹ ನಿರ್ಮಾಪಕರಾಗಿದ್ದು, ಸಂತೋಷ್, ನಯನಾ ಸಾಹಿ, ಸೆಂಚುರಿ ಗೌಡ, ರಘು ಪಾಂಡೇಶ್ವರ, ಮೈಕಲ್ ಮಧು, ಪ್ರಣಯ ಮೂರ್ತಿ, ಅರವಿಂದ ಗೌಡ, ನರಸಿಂಹ ಜೋಷಿ ಮುಂತಾದವರ ತಾರಾಗಣವಿದೆ.

Share This With Your Friends

Related posts