Cinisuddi Fresh Cini News 

“ಓಂ” ಸಿಲ್ವರ್ ಜ್ಯೂಬ್ಲಿಗೆ ಸೆಲೆಬ್ರೆಟಿಗಳ ಸಾಥ್

ಕನ್ನಡ ಚಿತ್ರರಂಗದಲ್ಲಿ ರಿಯಲ್ ರೌಡಿಗಳ ದರ್ಬಾರನ್ನು ನೇರವಾಗಿ ಚಿತ್ರೀಕರಣಗೊಳಿಸಿ ಕಥೆಗೆ ಪೂರಕವಾದ ರಿಯಲ್ ರೌಡಿ ಕಥೆಯ ಆಧಾರಿತ ಚಿತ್ರವನ್ನು ತೆರೆಯ ಮೇಲೆ ತಂದು ದಾಖಲೆ ಯಶಸ್ಸನ್ನು ಕಂಡಂತ ಚಿತ್ರ “ಓಂ” ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿಭಿನ್ನ ಷೇಡ್ ನಲ್ಲಿ ಕಾಣಿಸಿಕೊಂಡು, ಲಾಂಗ್ ಹಿಡಿಯುವ ಸ್ಟೈಲ್ ಇಂದಿಗೂ ಜನರು ಕಣ್ಣಲ್ಲಿ ಅಚ್ಚಳಿಯದಂತೆ ಉಳಿದಿದೆ.

ಶಿವಣ್ಣನ ಖದರ್ ಗೆ ನಟಿ ಪ್ರೇಮ ಮನಸೂರೆಗೊಳ್ಳುವಂತೆ ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಮೈಲಿಗಲ್ಲು ಸಾಧಿಸಿ, ಇಂದಿಗೂ ಥಿಯೇಟರ್ ನಲ್ಲಿ ರೀ- ರಿಲೀಸ್ ಆಗಿ ದಾಖಲೆ ಕಲೆಕ್ಷನ್ ಮಾಡುತ್ತಿರುವ ಚಿತ್ರ ಓo.

ಈ ಸಿನಿಮಾ ಬಂದು ಇದೇ 18ನೇ ತಾರೀಖ್ ಗೆ 25 ವರ್ಷಗಳು ಪೂರೈಸುತಿದ್ದು, ಅದರ ಸಂಭ್ರಮಾಚರಣೆಯನ್ನು ಶಿವಣ್ಣ ಅಭಿಮಾನಿ ಸಂಘ ಶಿವಸೈನ್ಯ ವಿಶೇಷ ರೀತಿಯಲ್ಲಿ ಆಚರಿಸುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಎಂದೂ ಮರೆಯದಂಥ ಈ ಸಿನಿಮಾದ ಸಿಲ್ವರ್ ಜ್ಯೂಬ್ಲಿ ಸೆಲೆಬ್ರೇಷನ್ ಗೆ 25 ಸೆಲೆಬ್ರೆಟಿಗಳು ಸಾಥ್ ಕೊಟ್ಟಿದ್ದು, ಕೆಲವು ಸೆಲೆಬ್ರೆಟಿಗಳ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಈ 25 ಸೆಲೆಬ್ರೆಟಿಗಳು ಸಹ ಒಂದೇ ದಿನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ “ಓಂ” ಸಿನಿಮಾದ 25 ವರ್ಷದ ವಿಶೇಷ ಕಾಮನ್ ಡಿಪಿ ಬಿಡುಗಡೆ ಮಾಡಲಿದ್ದಾರೆ. ಇದೇ 18 ಕ್ಕೆ ಸಂಜೆ 6:30 ರಿಂದ ಸತತ 24 ಗಂಟೆಗಳ ಟ್ವಿಟರ್ ಟ್ರೆಂಡ್ ಮಾಡುತ್ತಿದ್ದು, ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮೈಲಿಗಲ್ಲು ಮಾಡಲು ರೆಡಿಯಾಗಿದ್ದಾರೆ.

ಕನ್ನಡದ ಟಾಪ್ ನಿರ್ದೇಶಕರು, ನಿರ್ಮಾಪಕರು, ನಟ- ನಟಿಯರು ಮತ್ತು ಗಾಯಕರು ಸೇರಿದಂತೆ ಹಲವಾರು ಸೆಲೆಬ್ರೆಟಿಗಳು ಸಾಥ್ ಕೊಟ್ಟಿರೋದು ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಮಾಡಲು ಸಿದ್ಧವಾಗಿದೆ ಶಿವಸೈನ್ಯ ತಂಡ.

ಪೂರ್ಣಿಮ ಎಂಟರ್ ಪ್ರೈಸಸ್ ಅರ್ಪಿಸುವ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣದ ಈ “ಓಂ” ಸಿನಿಮಾಕ್ಕೆ ಅದ್ಭುತ ಸಂಗೀತ ನೀಡಿದ್ದು ನಮ್ಮೆಲ್ಲರ ಪ್ರೀತಿಯ ನಾದಬ್ರಹ್ಮ ಹಂಸಲೇಖ ಅವರು. ರಿಯಲ್ ಸ್ಟಾರ್ ಉಪೇಂದ್ರ ಆಕ್ಷನ್ ಕಟ್ ಹೇಳಿರೋ ಈ ದಾಖಲೆಯ ಸಿನಿಮಾ ಇಂದಿಗೂ ಅಳಿಸಲಾಗದ ದಾಖಲೆ ಸೃಷ್ಟಿಸಿದ್ದು, ಶಿವಣ್ಣ ಸಿನಿ ಜರ್ನಿಯಲ್ಲಿ ವಿಶೇಷವೆನಿಸಿರೋ ಸಿನಿಮಾ. ದಾಖಲೆ ಸೃಷ್ಟಿಸಿರೋ “ಓಂ” ಸಿನಿಮಾ ಕೊಟ್ಟ ಈ ಇಡೀ ತಂಡಕ್ಕೆ ಅಭಿಮಾನಿಗಳು ಶುಭಾಶಯವನ್ನು ವ್ಯಕ್ತಪಡಿಸಿದ್ದಾರೆ. ಇದೇ 18 ರoದು “ಓಂ” ಚಿತ್ರದ ಸಂಭ್ರಮ ರಾರಾಜಿಸಲಿದೆ.

Share This With Your Friends

Related posts