Cinisuddi Fresh Cini News 

ಮೊಟ್ಟೆ ಮೀನು ಕುರಿತಾದ ಕಿರುಚಿತ್ರ ‘ಓ ಫಿಶ್’

ಲಾಕ್‍ಡೌನ್ ಅವಧಿಯಲ್ಲಿ ಸಿದ್ದಗೊಂಡ ಹತ್ತು ನಿಮಿಷದ ‘ಓ ಫಿಶ್’ ಕಿರುಚಿತ್ರವು ವೈರಲ್ ಆಗಿದೆ. ಅಪಾರ್ಟ್‍ಮೆಂಟ್‍ನ ಎರಡನೆ ಮಹಡಿಯಲ್ಲಿ ಅವಳು, ಮೂರನೆ ಮಹಡಿಯಲ್ಲಿ ಅವನು ವಾಸವಿರುತ್ತಾನೆ. ಆತನು ಮೊಟ್ಟೆ, ಆಕೆಯು ಫಿಶ್ ಸರಬರಾಜು ಮಾಡಲು ಆರ್ಡರ್ ಮಾಡಿರುತ್ತಾರೆ.

ಒಂದೇ ತರಹದ ಪ್ಯಾಕ್ ಇರುವ ಕಾರಣ ಡಿಲಿವರಿ ಬಾಯ್ ತಪ್ಪಾಗಿ ಡಿಲಿವರ್ ಮಾಡುತ್ತಾನೆ. ಫೋನ್ ಮಾಡಿದರೆ ಕೊರೋನಾ ಇರುವುದರಿಂದ ಮತ್ತೆ ಬರಲು ಕಷ್ಟವಾಗುತ್ತದೆ. ನೀವೆ ಸರಿಪಡಿಸಿಕೊಳ್ಳಿರೆಂದು ಕೋರಿಕೊಳ್ಳುತ್ತಾನೆ.

ಅಷ್ಟರಲ್ಲಿ ವಿಡಿಯೋ ಕಾಲ್‍ದಲ್ಲಿ ಅಮ್ಮನು ಹೇಳಿದಂತೆ ಫಿಶ್ ಫ್ರೈ ಸಿದ್ದಪಡಿಸಿದ್ದು, ಕಾಲ್ ನೋಡಿ ವಿಷಯ ತಿಳಿದು ಅದನ್ನೆ ಆಕೆಯ ಮನೆ ಬಾಗಿಲ ಬಳಿ ಇಟ್ಟು ಬರುತ್ತಾನೆ. ಅವಳು ಮನೆ ಬಳಿ ಬಂದಾಗ ಅವನನ್ನು ಕ್ಯಾರಂಟೈನ್ ಮಾಡಲಾಗಿರುತ್ತದೆ.

ಕೊನೆಗೆ ವಿಡಿಯೋ ಕಾಲ್ ಮೂಲಕ ಇಬ್ಬರು ಸಂತಸದಿಂದ ಮಾತನಾಡುವುದರೊಂದಿಗೆ ಸಮಾಪ್ತಿ ಆಗುತ್ತದೆ. ಮುಖ್ಯ ಪಾತ್ರದಲ್ಲಿ ದೀಕ್ಷಿತ್‍ಶೆಟ್ಟಿ, ಹಿರಿಯ ನಟ ಜೈಜಗದೀಶ್ ಪುತ್ರಿ ವೈನಿಧಿಜಗದೀಶ್ ಉಳಿದಂತೆ ರವಿಕಿರಣ್, ರಾಜೇಂದ್ರನ್, ಸಿಂಧೂರ್, ಎಂ.ಚಂದ್ರಕಾಂತ್, ರೋಶನ್‍ರಾಯ್ ನಟಿಸಿದ್ದಾರೆ. ಕತೆ,ನಿರ್ದೇಶನ ಮತ್ತು ನಿರ್ಮಾಣ ಮಾಡಿರುವ ವಿದ್ಯಾ.ಬಿ.ರೆಡ್ಡಿ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಇವರೊಂದಿಗೆ ನಂದಿನಿಬೂಸುಪಲ್ಲಿ ಪಾಲುದಾರರು. ಸಂಗೀತ ಶ್ರೀನಿಧಿವೆಂಕಟ್, ಛಾಯಾಗ್ರಹಣ ಓಂಪ್ರಕಾಶ್, ಸಂಕಲನ ಅಂಶುಮನ್‍ಗೋಕೆಲ್ ನಿರ್ವಹಿಸಿದ್ದಾರೆ. ಕೆಟಲ್ಸ್ ಸ್ಟುಡಿಯೋ ಮೂಲಕ ಸಿದ್ದಗೊಂಡಿರುವ ಚಿತ್ರವನ್ನು https://youtu.be/mUKN4UBwbvM ಯೂಟ್ಯೂಬ್‍ದಲ್ಲಿ ವೀಕ್ಷಿಸಬಹುದು.

Share This With Your Friends

Related posts