Cinisuddi Fresh Cini News 

ಮಂತ್ರಾಲಯ ಗುರುಗಳಿಂದ ‘ಓ ಮೈ ಲವ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ

ತೂಫಾನ್, ಬಳ್ಳಾರಿ ದರ್ಬಾರ್, 18 ಟು 25 ಚಿತ್ರಗಳನ್ನು ನಿರ್ದೇಶಿಸಿರುವ ಸ್ಮೈಲ್ ಶ್ರೀನು ಈಗ ಮತ್ತೊಂದು ಬಿಗ್ ಬಜೆಟ್ ಚಿತ್ರಕ್ಕೆ ಕೈ ಹಾಕಿದ್ದಾರೆ. ನಟ ಶಶಿಕುಮಾರ್ ಅವರ ಪುತ್ರ ಅಕ್ಷಿತ್ ಶಶಿಕುಮಾರ್ ಈ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ.ಆರಂಭದಿಂದಲೂ ವಿಭಿನ್ನ ಚಿತ್ರಗಳನ್ನೇ ನಿರ್ದೇಶಿಸುತ್ತ ಬಂದಿರುವ ಸ್ಮೈಲ್‍ಶ್ರೀನು ಈಗ ಮತ್ತೊಂದು ಪ್ರೇಮಕಥೆಯನ್ನು ತೆರೆಮೇಲೆ ತರಲು ಹೊರಟಿದ್ದಾರೆ.

ಲವ್, ಫ್ಯಾಮಿಲಿ ಎಂಟರ್ ಟೈನರ್ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಹದಿಹರೆಯದ ಪ್ರೀತಿ-ಪ್ರೇಮ, ವೈ ಫೈ ಯುಗದಲ್ಲಿ ಕಣ್ಮರೆಯಾಗುತ್ತಿರುವ ಭಾವನಾತ್ಮಕ ಸಂಬಂಧಗಳ ಕುರಿತಾಗಿ ಹೇಳಹೊರಟಿರುವ ನಿರ್ದೇಶಕ ಸ್ಮೈಲ್‍ಶ್ರೀನು ಅವರು ರೆಗ್ಯುಲರ್ ಜಾನರ್ ಬಿಟ್ಟು ಬೇರೆಥರದ ನಿರೂಪಣೆ ಮಾಡುತ್ತಿದ್ದಾರೆ, ಇತ್ತೀಚೆಗೆ ಈ ಚಿತ್ರದ ಫಸ್ಟ್‌ ಲುಕ್ ನ್ನು ಮಂತ್ರಾಲಯದ ಗುರುಗಳು ಬಿಡುಗಡೆ ಮಾಡಿ ಆಶೀರ್ವದಿಸಿದ್ದಾರೆ. ಇನ್ನು ಸಂಕ್ರಾಂತಿ ಹಬ್ಬದ ಶುಭದಿನ ಈ ಚಿತ್ರ ಸೆಟ್ಟೇರಲಿದೆ. ಸಚಿವ ಶ್ರೀರಾಮುಲು, ಉದ್ಯಮಿ ಚನ್ನಬಸಪ್ಪ ಹಾಗೂ ನಟ ಶಶಿಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬಿ ರಾಮಾಂಜಿನಿ ಅವರು ಈ ಚಿತ್ರದ ಕಥೆ ಬರೆಯುವುದರೊಂದಿಗೆ ಜಿಸಿಬಿ ಪ್ರೊಡಕ್ಷನ್ಸ್ ಮೂಲಕ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರೇ ರಚಿಸಿದ್ದಾರೆ. ಈ ಚಿತ್ರದ ಮೇಕಿಂಗ್, ಸಾಂಗ್, ಸ್ಟಾರ್‍ಕಾಸ್ಟ್ ಎಲ್ಲದರಲ್ಲೂ ಅದ್ದೂರಿತನ ಎದ್ದು ಕಾಣುತ್ತದೆ. ಅಲ್ಲದೆ ಈ ಚಿತ್ರದಲ್ಲಿ ನಾಯಕಿಯಾಗಿ ಕೀರ್ತಿ ಕಲಕೇರಿ ಅಭಿನಯಿಸುತ್ತಿದ್ದಾರೆ. ಮಗಧೀರ ವಿಲನ್ ದೇವಗಿಲ್ ಅವರು ಈ ಚಿತ್ರದ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ಡಾ.ವಿ.ನಾಗೇಂದ್ರಪ್ರಸಾದ್ ಅವರು ಈ ಚಿತ್ರದ 6 ಹಾಡುಗಳಿಗೆ ಸಾಹಿತ್ಯ ರಚಿಸುತ್ತಿದ್ದು, ಚರಣ್ ಅರ್ಜುನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚಿತ್ರದ 6 ಆ್ಯಕ್ಷನ್ಗಳಿಗೆ ಇಸ್ಮಾರ್ಟ್ ಶಂಕರ್, ಅಲಾ ವೈಕುಂಠಪುಲೋ ಖ್ಯಾತಿಯ ರಿಯಲ್ ಸತೀಶ್ ಅವರು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಹೆಸರಾಂತ ಕೊರಿಯೋಗ್ರಾಫರ್ ಮುರುಳಿ ಎಲ್ಲಾ ಹಾಡುಗಳಿಗೆ ನ್ರತ್ಯ ನಿರ್ದೇಶನ ಮಾಡುತ್ತಿದ್ದಾರೆ.

ಆಕಾಶ್‍ಕುಮಾರ್ ಚವನ್ ಅವರ ಸಹನಿರ್ದೇಶನ ಈ ಚಿತ್ರಕ್ಕಿದ್ದು, ಬೆಂಗಳೂರು ಸುತ್ತಮುತ್ತ 20 ದಿನಗಳ ಕಾಲ ಚಿತ್ರದ ಮೊದಲಹಂತದ ಚಿತ್ರೀಕರಣ ನಡೆಯಲಿದೆ.

Related posts