Cinisuddi Fresh Cini News 

“ಬೆಂಗಳೂರು ನನ್ನ ಪ್ರಾಣ” ಎಂದ ನಿತ್ಯಾ

ಲಕ್ಷ್ಮಿ, ಅಂಬಿಕಾ,  ಮಾಲಾಶ್ರೀರಂತಹ ಪರಭಾಷಾ ನಟಿಯರು ನಮ್ಮ ಚಂದನವನದ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಲ್ಲದೆ ಬಹು ಕಾಲದಿಂದಲೂ ನಮ್ಮ  ಕನ್ನಡತಿಯರಾಗಿಯೇ ಬೆರೆತು ಹೋಗಿದ್ದಾರೆ. ಇದೇ ಸಾಲಿಗೆ ಸೇರುವ ಇತ್ತೀಚಿನ ನಟಿ ಎಂದರೆ ನಿತ್ಯಾಮೆನನ್.

ಸೆವೆನ್ ಓ ಕ್ಲಾಕ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಬಂದ ನಿತ್ಯಾಮೆನನ್ ನಂತರ ಜೋಶ್‍ನಲ್ಲಿ ನಟಿಸಿ ಫಿಲಂಫೇರ್ ಪ್ರಶಸ್ತಿ ಗೆಲ್ಲುವ ಮೂಲಕ  ಕನ್ನಡಿಗರ ಮನಗಳಿಗೆ ಲಗ್ಗೆ  ಇಟ್ಟರು. ನಂತರ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲೂ ಗುರುತಿಸಿಕೊಂಡ ನಿತ್ಯಾಮೆನನ್ ಮೈನಾ  ಮೂಲಕ ಮತ್ತೆ ಕನ್ನಡಿಗರ ಕಣ್ಮಣಿ ಆದರು. ಕಿಚ್ಚ ಸುದೀಪ್‍ರೊಂದಿಗೆ  ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸಿದ ನಂತರ ಬೆಂಗಳೂರಿನಲ್ಲೇ ನೆಲೆ ಕಂಡರು.

ನನಗೆ ಬೆಂಗಳೂರೆಂದರೆ ಬಲು ಇಷ್ಟ ನಾನು ಹುಟ್ಟಿ ಬೆಳೆದಿದ್ದು , ವಿದ್ಯಾಭ್ಯಾಸ ಮಾಡಿದ್ದು ಕೂಡ ಇಲ್ಲೇ.  ನನಗೆ  ಬೆಂಗಳೂರಿನ ರೇನಿ ಡೇಸ್, ಕೂಲ್ ನೈಟ್ಸ್, ಏಲಕ್ಕಿ ಚಹಾ ಕೂಡ  ತುಂಬಾ  ಇಷ್ಟ ಎಂದು ತಮ್ಮ ಅಂತರ್ಜಾಲದಲ್ಲಿ  ಸಿಲಿಕಾನ್‍ಸಿಟಿಯ ಅನುಭವವನ್ನು ಹಂಚಿಕೊಂಡಿದ್ದಾರೆ.

ಲಾಕ್‍ಡೌನ್ ವೇಳೆ ಫೋಟೋ ಶೂಟ್‍ನಲ್ಲಿ ತುಂಬಾ ಬ್ಯುಜಿಯಾಗಿದ್ದ ಬಹುಭಾಷಾ ತಾರೆ ನಿತ್ಯಾ ಮೆನನ್ ಆ ಫೋಟೋಗಳನ್ನು ಅಂತರ್ಜಾಲದಲ್ಲಿ ಅಪ್‍ಲೋಡ್  ಮಾಡಿ ಅದಕ್ಕೆ ಸುಂದರವಾದ ಶೀರ್ಷಿಕೆಯನ್ನು ನೀಡಿದ್ದಾರೆ. ಅದು ಈಗ ಅಂತರ್ಜಾಲದಲ್ಲಿ ಜೋರು ಸದ್ದು ಮಾಡುತ್ತಿದೆ.

ನಿತ್ಯಾ ಮಾಡಿರುವ ಇತ್ತೀಚಿನ ಮೂರು ಪೋಸ್ಟ್ ಗಳ ಪೈಕಿ ಒಂದರಲ್ಲಿ ಹೇರ್‍ಸ್ಟೈಲ್ ಹಾಗೂ ಉಡುಪಿನ ಬಗ್ಗೆ ಹಂಚಿಕೊಂಡಿದ್ದಾರೆ. ಆ ಪೋಟೋದಲ್ಲಿ ನಿತ್ಯಾ ಬಿಳಿ ಡ್ರೆಸ್ ಮೇಲೆ ಕಪ್ಪು ಚುಕ್ಕಿ ಇರುವುದರಿಂದ ವೋಲ್ಕಾ ಡಾಟ್ಸ್ ಹಾಗೂ  ಕರ್ಲಿ ಹೇರ್ ಸ್ಟೈಲ್ ಹೊಂದಿರುವುದರಿಂದ ಕಲ್ರ್ಸ್ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.

ಮತ್ತೊಂದು ಪೋಟೋದಲ್ಲಿ ಖ್ಯಾತ ಪ್ರಾಧ್ಯಾಪಕಿ ಬ್ರೆನೆ ಬ್ರೌನ್ ಬರೆದಿರುವ ಸಾಲುಗಳನ್ನು ಉಲ್ಲೇಖಿಸಿದ್ದು ನಮ್ಮದೇ ಆದ ಕಥೆಯ ಮೂಲಕ ತಮ್ಮತನವನ್ನು ಪ್ರೀತಿಸುವುದೇ ನಾವು ಮಾಡುವ ತುಂಬಾ ಧೈರ್ಯವಾದ ಕೆಲಸ  ಎಂದು ಬರೆದಿದ್ದಾರೆ.

ನಿತ್ಯಾ ಮಾಡಿರುವ ಮತ್ತೊಂದು ಪೋಸ್ಟ್ ತುಂಬಾ ಸ್ಪೆಷಲ್ ಆಗಿದೆ, ನೀವು ಯಾವತ್ತೂ ಖಾಲಿ ಕಪ್‍ನಿಂದ ಬೇರೆಯವರೆಗೆ ಏನನ್ನೂ ನೀಡಲು ಸಾಧ್ಯವಿಲ್ಲ, ಮೊದಲು ನಿಮ್ಮನ್ನು ನೀವು ಪ್ರೀತಿಸಿ, ನಿಮ್ಮಲ್ಲಿ ಸಾಮಥ್ರ್ಯವಿದ್ದರೆ ಬೇರೊಬ್ಬರಿಗೆ ಸಹಾಯ ಮಾಡಿ ಎಂದು ಬರೆದುಕೊಂಡಿದ್ದಾರೆ, ಇದಕ್ಕೆ ಹಲವು ಸೆಲಬ್ರಿಟಿಗಳು ಕೂಡ ಉತ್ತಮ ಕಾಮೆಂಟ್ಸ್ ನೀಡಿದ್ದಾರೆ.

ನಿತ್ಯಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದರೂ ಕೂಡ ತಮ್ಮ ತವರು ನೆಲೆಯಾದ ಬೆಂಗಳೂರು ಹಾಗೂ ಕನ್ನಡ ಭಾಷೆಗೆ ಹೆಚ್ಚು ಒತ್ತು ನೀಡುತ್ತಾರೆ.

 

ಕೇರಳದಲ್ಲಿ ಹೆಚ್ಚು ಕಾಲ ಕಳೆದರೂ ಕೂಡ ಕನ್ನಡ ಭಾಷೆಯನ್ನು ಸುಲಲಿತವಾಗಿ ಮಾತನಾಡುವ ನಿತ್ಯಾ,ಕನ್ನಡ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ.

 

ಕನ್ನಡ ಭಾಷಾ ಚಿತ್ರದಲ್ಲೇ ಬೆಳಕಿಗೆ ಬಂದು ಬೇರೆ ಭಾಷೆಯಲ್ಲಿ ಪ್ರಚಲಿತಗೊಂಡ ನಂತರ ಚಿತ್ರ ಜೀವನಕ್ಕೆ ಹಾದಿ ಹಾಕಿಕೊಟ್ಟ ಸ್ಯಾಂಡಲ್‍ವುಡ್ ಅನ್ನೇ ಮರೆಯುವ ಅನೇಕ ನಟಿಯರಿಗಿಂತ ತವರಿನ ಪ್ರೇಮ ಮೆರೆಯುವ ನಿತ್ಯಾಮೆನನ್ ಅವರೇ ಮೇಲಲ್ಲವೇ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಸಿಗುವಂತಾಗಲಿ.

 

 

 

 

 

 

 

Share This With Your Friends

Related posts