Cinisuddi Fresh Cini News 

“ನಿರ್ಭಯ 2” ಚಿತ್ರಕ್ಕೆ ಚಾಲನೆ

ಚಂದನವನಕ್ಕೆ ಯುವಪಡೆಗಳ ಬಳಗ ಆಗಮಿಸುತ್ತಿದ್ದು , ಸಮಾಜದಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳನ್ನು ಸತ್ಯ ಹಾಗೂ ಅಸತ್ಯದ ಬಗ್ಗೆ ಅನಾವರಣ ಮಾಡಲು ಮುಂದಾಗಿದೆ. ಈ ಚಿತ್ರವನ್ನು ಬಾಲಕೃಷ್ಣ ಕೆ.ಆರ್ ನಿರ್ಮಾಣದಲ್ಲಿ , ರಾಜು ಕುಣಿಗಲ್ ನಿರ್ದೇಶನದ ಮೂಲಕ ಸರಿಗಮಪ ಖ್ಯಾತಿಯ ಸುಹಾನ ಸೈಯ್ಯದ್ ಪ್ರಮುಖ ಪಾತ್ರದಲ್ಲಿ ನಟಿಸುವುದರೊಂದಿಗೆ “ನಿರ್ಭಯ 2” ಎಂಬ ಶೀರ್ಷಿಕೆ ಮೂಲಕ ಮುಹೂರ್ತ ಸಮಾರಂಭವನ್ನು ತುಮಕೂರಿನ ಸಾಯಿಬಾಬಾ ದೇವಸ್ಥಾನದಲ್ಲಿ ನೆರವೇರಿಸಿತು. ಸಂಸದರಾದ ಜಿ.ಎಸ್ ಬಸವರಾಜ್ ಆರಂಭ ಫಲಕ ತೋರುವುದರ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

ತುಮಕೂರಿನಲ್ಲಿ ಮುಹೂರ್ತ ಸಮಾರಂಭ ಮುಗಿಸಿ ಬೆಂಗಳೂರಿಗೆ ಆಗಮಿಸಿದ ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.
ನಾ‌ನು ಆರುವರ್ಷಗಳ ಹಿಂದೆ ಈ ಕಥೆ ಸಿದ್ದಮಾಡಿಕೊಂಡಿದ್ದೆ. ನಿರ್ಮಾಪಕರು ಸಿಗದ ಕಾರಣ ಚಿತ್ರ ನಿರ್ಮಾಣ ವಿಳಂಬ ವಾಯಿತು. ಕಥೆ ಕೇಳಿದ ಬಾಲಕೃಷ್ಣ ಅವರು ನಿರ್ಮಾಣಕ್ಕೆ ಮುಂದಾದರು.

ಇದೇ ಹದಿನೇಳರಿಂದ ತುಮಕೂರು, ಬೆಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಸಮಾಜದಲ್ಲಿ ನಡೆಯುತ್ತಿರುವ ಕೊಲೆ, ಅತ್ಯಾಚಾರ ಮುಂತಾದ ವಿಷಯಗಳನ್ನಿಟ್ಟುಕೊಂಡು ಈ ಚಿತ್ರದ ಕಥೆ ಹೆಣೆದಿದ್ದೇನೆ.

ನಾನೇ ಕಥೆ, ಚಿತ್ರಕಥೆ ಬರೆದಿದಿದ್ದೇನೆ. ನುರಿತ ತಂತ್ರಜ್ಞರು ಹಾಗೂ ಗಾಯಕಿ ಸುಹಾನ ಸೈಯದ್ ಸೇರಿದಂತೆ ನೂತನ ಪ್ರತಿಭೆಗಳ ಸಂಗಮದಲ್ಲಿ “ನಿರ್ಭಯ 2” ನಿರ್ಮಾಣವಾಗಲಿದೆ. ಈ ಚಿತ್ರದ ಬಿಡುಗಡೆ ನಂತರ “ನಿರ್ಭಯ 1” ಚಿತ್ರ ಸಹ ನಿರ್ಮಾಣ ಮಾಡುತ್ತೇವೆ.

ಎಲ್ಲರೂ ಮೊದಲು ಭಾಗ ಒಂದನ್ನು ನಿರ್ಮಾಣ ಮಾಡಿ, ನಂತರ ಎರಡನ್ನು ತೆರೆಗೆ ತರುತ್ತಾರೆ. ಆದರೆ ನಾವು ಮೊದಲು ಭಾಗ ಎರಡನ್ನು ಬಿಡುಗಡೆ ಮಾಡಿ ಆಮೇಲೆ ಒಂದನ್ನು ನಿರ್ಮಾಣ ಮಾಡುತ್ತೇವೆ‌. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ರಾಜು ಕುಣಿಗಲ್.

ನಾನೊಬ್ಬ ರೈತ. ಕುಣಿಗಲ್ ನಮ್ಮೂರು. ಸಮಾಜಕ್ಕೆ ಉತ್ತಮ ಚಿತ್ರ ನೀಡಬೇಕೆಂಬ ಹಂಬಲದಿಂದ ಈ ಚಿತ್ರ ನಿರ್ಮಾಣಕ್ಕೆ ಮುಂದಾದೆ.‌ ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕ ಬಾಲಕೃಷ್ಣ ಕೆ.ಆರ್.
ಈ ಚಿತ್ರದಲ್ಲಿ ನನ್ನದು ಟಿಪಕಲ್ ಪಾತ್ರ. ನೆಗೆಟಿವ್ ಶೆಡ್ ನಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ತಮ್ಮ ಪಾತ್ರ ವಿವರಣೆ ನೀಡಿದರು ನಾಯಕ ಅರ್ಜುನ್ ಕೃಷ್ಣ.

ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹರೀಶ್ ಹಾಗೂ ಕುಸುಮ ಸಹ ತಮ್ಮ‌ ಪಾತ್ರಗಳ ಬಗ್ಗೆ ಮಾತನಾಡಿದರು.
ಚಿತ್ರಕ್ಕೆ ಸಂಗೀತ ನೀಡುತ್ತಿರುವ ಆಕಾಶ್ ಪರ್ವ, ಛಾಯಾಗ್ರಹಕ ಗುಂಡ್ಲುಪೇಟೆ ಸುರೇಶ್ ತಮ್ಮ ಕೆಲಸದ ಬಗ್ಗೆ ಮಾಧ್ಯಮ ಮಿತ್ರರಿಗೆ ತಿಳಿಸಿದರು. ಕಾರ್ಯಕಾರಿ ನಿರ್ಮಾಪಕ ಆನಂದ್ ತುಮಕೂರು ಕಾರ್ಯಕ್ರಮ ನಿರೂಪಣೆ ಮಾಡಿದರು.

Related posts