Cinisuddi Fresh Cini News 

”ನಿರ್ಭಯ-2″ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣ

ಬಾಲಕೃಷ್ಣ ಕೆ.ಆರ್ ನಿರ್ಮಾಣದ, ರಾಜು ಕುಣಿಗಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ, ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ “ನಿರ್ಭಯ 2” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯದಲ್ಲೇ ಹಾಡುಗಳ ಚಿತ್ರೀಕರಣ ಆರಂಭವಾಗಲಿದೆ.

ಡಾ|ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಸಂತೋಷ್ ನಾಯಕ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದು, ಆಕಾಶಪರ್ವ ಸಂಗೀತ ನೀಡಿದ್ದಾರೆ. ರಂಗ್ ಮಂಜು ಸಂಭಾಷಣೆ ಬರೆದಿದ್ದಾರೆ. ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಸಂಕಲನ “ನಿರ್ಭಯ 2” ಚಿತ್ರಕ್ಕಿದೆ.

“ಪಾರು” ಖ್ಯಾತಿಯ ಮೋಕ್ಷಿತ ಪೈ, ಅರ್ಜುನ್ ಕೃಷ್ಣ, ಹರೀಶ್ ಹೆಚ್ ಆರ್, ಕುಸುಮ, ರಾಧಾ ರಾಮಚಂದ್ರ, ಅಶೋಕ್, ಗಣೇಶ್ ರಾವ್, ಹನುಮಂತೇ ಗೌಡ್ರು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Related posts