Cinisuddi Fresh Cini News Tv / Serial 

ಬಹುಮುಖ ಪ್ರತಿಭೆ “ನಿಪುಣ್”

ವೀಕ್ಷಕರ ಗಮನ ಸೆಳೆಯುವುದು ಒಬ್ಬ ಕಲಾವಿದನಿಗೆ ಬಹಳ ಮುಖ್ಯ. ನೋಡಲು ಸುಂದರವಾಗಿದ್ದರೆ ಸಾಲದು , ಆತನ ಧ್ವನಿಯೂ ಕೂಡ ಅಷ್ಟೇ ಮಧುರವಾಗಿದ್ದರೆ ಖಂಡಿತ ಗಮನ ಸೆಳೆಯುತ್ತಾರೆ. ಅದಕ್ಕೆ ಪೂರಕ ಎಂಬಂತೆ ಕಿರುತೆರೆಯಲ್ಲಿ ಬರುತ್ತಿರುವ “ರಾಧಾಕೃಷ್ಣ” ಧಾರಾವಾಹಿ ಕೃಷ್ಣನ ಪಾತ್ರಧಾರಿಗೆ ಧ್ವನಿ ನೀಡುತ್ತಿರುವ ನಿಪುಣ್ ಈಗ ಎಲ್ಲರ ಅಚ್ಚು ಮೆಚ್ಚಾಗಿದ್ದಾರೆ. ನೀಪುನ್ 2007 ರಲ್ಲಿ ಬಣ್ಣದ ಪ್ರಪಂಚಕ್ಕೆ ಬಂದು ನಟ ಆಗಬೇಕೆಂದು ನಿರ್ಧರಿಸಿ ಸಿರಿಯಲ್ ಹಾಗೂ ಸಿನಿಮಾದಲ್ಲಿ ಅಭಿನಯಿಸಿದ್ದಾರೆ .

ತದನಂತರ ಡಬ್ಬಿಂಗ್ ಗಾಗಿ ವಾಯ್ಸ್ ಟೆಸ್ಟ್ ಕೊಟ್ಟು ಕಾರ್ಟೂನ್ ಮೂಲಕ 2008 ರಿಂದ ಡಬ್ಬಿಂಗ್ ಪ್ರಯಾಣವನ್ನು ಆರಂಭಿಸಿ , ಕನ್ನಡದ ಪ್ರಖ್ಯಾತ ಸೀರಿಯಲ್ ಗಳಲ್ಲಿ ನಾಯಕನ ಪಾತ್ರಗಳಿಗೆ ಡಬ್ಬಿಂಗ್ ನೀಡುವ ಮೂಲಕ ವೃತ್ತಿ ಬದುಕನ್ನು ಆರಂಭಿಸುತ್ತಾ ಸುವರ್ಣ ವಾಹಿನಿಯ – ಅಮೃತ ವರ್ಷಿಣಿ , ಉದಯ ವಾಹಿನಿಯ – ಚಕ್ರವಾಕ, ನಂದಿನಿ, ಮಾಯಾ, ನಾನು ನನ್ನ ಕನಸು, ಮಾನಸ ಸರೋವರ ಹಾಗೂ ಕಲರ್ಸ್ ಕನ್ನಡ – ನಾಗ ಕನ್ನಿಕೆ ಸೇರಿದಂತೆ ಸುಮಾರು 4,000 ಸಾವಿರ ಕಂತುಗಳಿಗೆ ಡಬ್ಬಿಂಗ್ ನೀಡುವುದರ ಜೊತೆಗೆ ಕಾರ್ಟೂನ್, ಸೀರಿಯಲ್ ಹಾಗೂ ಕಮರ್ಷಿಯಲ್ ಜಾಹೀರಾತುಗಳಿಗೆ ಕೂಡ ಧ್ವನಿ ನೀಡಿ ಗಮನ ಸೆಳೆದಿದ್ದಾರೆ.

ಇದಲ್ಲದೆ ಕನ್ನಡ ಚಿತ್ರಗಳಾದ ಶರಾವತಿ ತೀರದಲ್ಲಿ , ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ , ದೋಸ್ತಿ ಚಿತ್ರಗಳ ಜೊತೆಗೆ ದಕ್ಷಿಣ ಭಾರತದ ಸಾಹೋ ಹಾಗೂ ಮಹರ್ಷಿ ಚಿತ್ರದ ಪ್ರಮುಖ ನಾಯಕರಿಗೂ ಹಾಗೂ ತಮಿಳಿನ ವಿಶ್ವo ಸಹ ಕಲಾವಿದರಿಗೂ ಧ್ವನಿ ನೀಡಿ ಸೈ ಎನ್ನಿಸಿಕೊಂಡಿದ್ದಾರೆ.

ಡಬ್ಬಿಂಗ್ ಕಲಾವಿದರಾಗಿರುವ ನಿಪುಣ್ ಬಹುಮುಖ ಪ್ರತಿಭೆಯಾಗಿದ್ದು , ಡಬ್ಬಿಂಗ್ ಕೋ- ಆರ್ಡಿನೇಟರ್ , ಸೂಪರ್ ವೈಜರ್ ಹಾಗೂ ಸೌಂಡ್ ಸೌಂಡ್ ಎಂಜಿನಿಯರಿಂಗ್ ಆಗಿ ಬಹಳಷ್ಟು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸದ್ಯ ರಾಧಾ ಕೃಷ್ಣ , ದೃಷ್ಟಿ ಹಾಗೂ ಲಕ್ಷ್ಮಿ ಸ್ಟೋರ್ ಧಾರಾವಾಹಿಗಳ ಪ್ರಮುಖ ಪಾತ್ರಧಾರಿಗಳಿಗೆ ಧ್ವನಿ ನೀಡುತ್ತಿರುವ ಈ ಪ್ರತಿಭೆಗೆ ಉಜ್ವಲ ಭವಿಷ್ಯ ಸಿಕ್ಕಿ ಯಶಸ್ಸಿನ ಹಾದಿಯತ್ತಾ ಸಾಗಲಿ.

Related posts