Cinisuddi Fresh Cini News 

ಈ ವಾರ ತೆರೆಗೆ ಬರುತ್ತಿದೆ ‘ನಿಮ್ಮೂರು’ ಚಿತ್ರ

ಹಠವಾದಿ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ರಾಜಶೇಖರ್ ಚಂದ್ರಶೇಖರ್  ದಾವಣಗೇರಿ ಅವರು  ನಿರ್ಮಿಸಿರುವ ನಿಮ್ಮೂರು  ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪಕ್ಕಾ ಹಳ್ಳಿಸೊಗಡಿನಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದ್ದು,  ಚಿತ್ರವನ್ನು   ವಿಜಯ್ ಎಸ್. ಅವರು   ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರಕ್ಕೆ ಪಳನಿವೇಲು ಅವರ ಛಾಯಾಗ್ರಹಣ, ಅಭಿನಂದನ್ ಕಷ್ಯಪ್ ಮದು ಸುದಂಡಿ ಅವರ ಸಂಗೀತ ಸಂಯೋಜನೆ, ಹನುರಾಜ್ ಮಧುಗಿರಿ ಅವರ ಸಾಹಿತ್ಯ, ಚಂದ್ರು ಬಂಡೆ ಅವರ ಸಾಹಸ, ಲೋಕೇಶ್ ಯರಂಬಳ್ಳಿ ಅವರ ಕಲಾನಿರ್ದೇಶನ, ಸಿ.ಕೆ. ಕುಮಾರ್ ಅವರ ಸಂಕಲನ, ನೀಲ್‍ರಾಜ್ ರಾಜ್ ನಿರಂಜನ ಸಿಎಂಹೆಚ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಲಕ್ಕಿರಾಮ್, ವೀಣಾ ಗಂಗಾರಾಮ್, ತ್ರಿವಿಕ್ರಂ, ಸಿದ್ದುಮಂಡ್ಯ, ಮಂಜುನಾಥ್, ಅಂಜಿನಪ್ಪ, ಸುಧಾ. ಆರ್, ಶ್ರೀಕಾಂತ್ ಹೊನ್ನವಳ್ಳಿ ಶ್ರೀಭಾ ಮೂರ್ತಿ ಹಾಗೂ ಇತರರು ಈ ಚಿತ್ರದಲ್ಲಿದ್ದಾರೆ.

Related posts