Cinisuddi Fresh Cini News 

ಹೊಸಬರಿಗೆ ‘ನಿಮ್ಮೆಲ್ಲರ ಆಶೀರ್ವಾದ’ ಬೇಕಾಗಿದೆ

ಸದ್ಯ ನಾವು ಮಾತನಾಡುವ ಪದಗಳೇ ಶೀರ್ಷಿಕೆಯಾಗುತ್ತಿರುವುದು ಇತ್ತೀಚೆಗೆ ವಾಡಿಕೆಯಾಗುತ್ತಿದೆ. ಹೊಸಬರು ಚಿತ್ರರಂಗಕ್ಕೆ ಬಂದಾಗ ಹಿರಿಯರ ಬಳಿ ‘ನಿಮ್ಮೆಲ್ಲರ ಆಶೀರ್ವಾದ’ ಬೇಕು ಎಂದು ವಿನಂತಿಸಿಕೊಳ್ಳುತ್ತಾರೆ.

ಈಗ ಇದೇ ಹೆಸರಿನ ಮೇಲೆ ಚಿತ್ರವೊಂದು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಸುದ್ದಿ ಮಾಡಲು ಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ. ರವಿಕಿರಣ್ ನಿರ್ದೇಶನದಲ್ಲಿ ಪ್ರತೀಕ್‍ಶೆಟ್ಟಿ ನಾಯಕ, ಪಾಯಲ್‍ರಾಧಕೃಷ್ಣ ನಾಯಕಿ. ಇವರೊಂದಿಗೆ ದಿನೇಶ್‍ಮಂಗಳೂರು, ಗೋವಿಂದೇಗೌಡ, ಅರವಿಂದಬೋಳಾರ್, ಎಂ.ಎನ್.ಲಕ್ಷ್ಮೀದೇವಿ, ಸ್ವಾತಿಗುರುದತ್ ಮುಂತಾದವರು ನಟಿಸಿದ್ದಾರೆ.

ಸಿನಿಮಾದ ಬಗ್ಗೆ ಮಾತನಾಡುವ ನಿರ್ದೇಶಕರು, ಎಲ್ಲವು ಇದ್ದುಕೊಂಡು ತಾನೇನು ಮಾಡಬೇಕೆಂದು ಗೊತ್ತಿಲ್ಲದ ಹುಡುಗ. ಪೋಲೀಸ್ ಅಧಿಕಾರಿಯಾದವನು ತನ್ನ ಕೆಲಸವನ್ನು ಕರ್ತವ್ಯ ಅಂತ ಭಾವಿಸಿದರೆ, ಅದರಲ್ಲಿ, ಆತನಲ್ಲಿ ಏನೇನು ಬದಲಾವಣೆಗಳನ್ನು ಕಾಣಬಹುದು ಎಂಬುದು ಒಂದು ಏಳೆಯ ಸಾರಾಂಶವಾಗಿದೆ.

ಉಡುಪಿ, ಮಲ್ಪೆ, ಕಾರ್ಕಳ ಸುತ್ತಮುತ್ತ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸುನಾದ್‍ಗೌತಮ್ ಸಂಗೀತ, ಶರವಣನ್.ಕೆ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ರೂಪೇಂದ್ರಆಚಾರ್ ಕಲೆ ಇದೆ.

ವರುಣ್ ಸಿನಿ ಕ್ರಿಯೇಶನ್ಸ್ ಬ್ಯಾನರ್‍ನಲ್ಲಿ ವರುಣ್‍ಹೆಗ್ಡೆ ಬಂಡವಾಳ ಹೂಡುತ್ತಿದ್ದಾರೆ. ಪ್ರಸಕ್ತ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಅಕ್ಟೋಬರ್‍ದಲ್ಲಿ ಸೆನ್ಸಾರ್‍ಗೆ ಹೋಗಲಿದೆ. ಲಾಕ್‍ಡೌನ್ ಮುಗಿದ ನಂತರ ಬಿಡುಗಡೆ ಮಾಡಲು ತಂಡವು ಚಿಂತನೆ ನಡೆಸಿದೆ.

Share This With Your Friends

Related posts