Cinisuddi Fresh Cini News 

ನಿಗದಿತ ಮಹೂರ್ತದಲ್ಲಿ ಮನೆಯಲ್ಲೇ ನಿಖಿಲ್ – ರೇವತಿ ಮದುವೆ

ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಹಾಗೂ ರೇವತಿ ಅವರ ಮದುವೆ ಏಪ್ರಿಲ್ 17 ಎಂದು ಏನು ನಿಗದಿಯಾಗಿತ್ತು , ಅದೇ ದಿನ ಮದುವೆ ನಡೆಯುವುದು ಪಕ್ಕಾ ಎಂದು ಎಚ್. ಡಿ. ಕುಮಾರಸ್ವಾಮಿ ಇಂದು ರಾಮನಗರದಲ್ಲಿ ತಿಳಿಸಿದ್ದಾರೆ.

ಇಡೀ ವಿಶ್ವವ್ಯಾಪಿ ಕೊರೋನಾ ಹಾವಳಿಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಆದರೂ ತಮ್ಮ ಮಗನಿಗೆ ಸಿಕ್ಕ ಮದುವೆಯ ದಿನಾಂಕ ಏಪ್ರಿಲ್ 17 ಬಹಳ ವಿಶೇಷವಾಗಿದ್ದು, ಒಳ್ಳೆಯ ಮುಹೂರ್ತವಾದ ಕಾರಣ ಅಂದೇ ನಿಖಿಲ್-ರೇವತಿ ವಿವಾಹ ನೆರವೇರಿಸಲು ಮನೆಯವರೆಲ್ಲ ಒಪ್ಪಿಗೆ ಸಿಕ್ಕಿದೆಯಂತೆ.

ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆಯನ್ನು ಒಂದಷ್ಟು ಬದಲಾವಣೆ ಮಾಡಿಕೊಂಡು ಹೆಣ್ಣಿನ ಮನೆಯಲ್ಲೇ ಶಾಸ್ತ್ರಗಳನ್ನು ಪೂರ್ಣಗೊಳಿಸಿ , ಮನೆ ಆವರಣದಲ್ಲೇ ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ನಡೆಯಲಿದ್ದು, ಎರಡು ಕುಟುಂಬಸ್ಥರ ಸದಸ್ಯರ ಸಮ್ಮುಖದಲ್ಲಿ ನಿಖಿಲ್ ಹಾಗೂ ರೇವತಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ.

ಈ ಹಿಂದೆ ನಿಯೋಜನೆಗೊಂಡ ರಾಮನಗರ ಹಾಗೂ ಚನ್ನಪಟ್ಟದ ಮಧ್ಯೆ ಬೃಹತ್ತಾದ ಜಾಗದಲ್ಲಿ ಮದುವೆಯ ಎಲ್ಲಾ ಸಿದ್ಧತೆಗಳು ನಡೆದಿದ್ದು , ಅದರಂತೆ ಲಗ್ನ ಪತ್ರಿಕೆಗಳು ಕೂಡ ಹಂಚುವ ಕಾರ್ಯ ಸಾಗಿತ್ತು. ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ಮಗನ ಮದುವೆ ಮಾಡಬೇಕೆಂದು ತೀರ್ಮಾನಿಸಿದ್ದ ಮಾಜಿ ಸಿ.ಎಂ. ಎಚ್.ಡಿ. ಕುಮಾರಸ್ವಾಮಿ ಅವರ ಆಸೆ ಕೊರೋನಾ ಹಾವಳಿಯಿಂದ ಕೈ ತಪ್ಪಿತು.

ನಂತರ ಅರಮನೆ ಮೈದಾನದಲ್ಲಿ ನಡೆಸುವ ಯೋಜನೆಯನ್ನು ಹಾಕಿಕೊಂಡು ಈಗ ಅದು ಕೂಡ ಸಾಧ್ಯವಾಗದೆ ಮನೆಯಲ್ಲಿ ಚೊಕ್ಕದಾಗಿ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ. ಮುಂದೆ ಈ ಕೊರೋನಾ ಹಾವಳಿ ಹೊರ ಬಂದ ನಂತರ ಮಗನ ಆರತಕ್ಷತೆಯನ್ನು ಅದ್ದೂರಿಯಾಗಿ ನಡೆಸಲು ಚಿಂತನೆ ನಡೆಸುತ್ತಿದ್ದಾರೆ. ಮದುವೆ ಸರಳವಾಗಿ ನಡೆದರೂ ಪರವಾಗಿಲ್ಲ… ಅರತಕ್ಷತೆ ಅದ್ದೂರಿಯಾಗಿ ನಡೆಯಲಿ ಎಂಬುದೇ ಅಭಿಮಾನಿಗಳ ಆಶಯ

Share This With Your Friends

Related posts