Cini Gossips Cinisuddi Fresh Cini News 

“ನಿಖಿಲ್ ಎಲ್ಲಿದಿಯಪ್ಪ” ಸಿನಿಮಾ ಟೈಟಲ್‍ಗೆ ಭಾರಿ ಡಿಮ್ಯಾಂಡ್..!

ರಾಜಕೀಯ ವಲಯದಲ್ಲಿ ಭಾರಿ ಸಂಚಲನವನ್ನೇ ಮೂಡಿಸಿದಂತ ಕ್ಷೇತ್ರ ಮಂಡ್ಯ ಲೋಕಸಭಾ ಎಲೆಕ್ಷನ್. ವಿಶೇಷ ಎಂದರೆ ಈ ಕ್ಷೇತ್ರದಲ್ಲಿ ನಿಂತಿರುವ ಇಬ್ಬರು ಚಿತ್ರರಂಗದವರೇ ಸನ್ಮಾನ್ಯ ಮುಖ್ಯಮಂತ್ರಿಗಳಾದ ಎಚ್. ಡಿ ಕುಮಾರಸ್ವಾಮಿ ಸುಪುತ್ರ ಜಾಗ್ವಾರ್ ನಿಖಿಲ್ ಒಂದು ಕಡೆಯಾದರೆ, ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ಅವರ ಧರ್ಮಪತ್ನಿ ಸುಮಲತಾ ಅಂಬರೀಶ್ ಮತ್ತೊಂದು ಕಡೆ.

ಈ ಕ್ಷೇತ್ರ ಇಬ್ಬರಿಗೂ ಪ್ರತಿಷ್ಠೆಯ ಕಣವಾಗಿದೆ. ಜೊತೆಗೆ ಸಿನಿಮಾ ರಂಗಕ್ಕೂ ಕಗ್ಗಂಟಾಗಿದೆ ಎಂದೇ ಹೇಳಬಹುದು. ಈಗಾಗಲೇ ಪರ-ವಿರೋಧಗಳು ಜೋರಾಗಿದ್ದು, ನಿಖಿಲ್ ಎಲ್ಲಿದ್ಯಪ್ಪ ಎಂಬ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿರುವ ವಿಚಾರ ಎಲ್ಲರಿಗೂ ತಿಳಿದಿದೆ.

ಈಗ ವಾಣಿಜ್ಯ ಮಂಡಳಿಗೆ ಕೆಲವು ನಿರ್ಮಾಪಕರು ನಿಖಿಲ್ ಎಲ್ಲಿದ್ಯಪ್ಪ ಅನ್ನೋ ಟೈಟಲ್ ಕೊಡಿ ಎಂದು ಕೇಳುತ್ತಿದ್ದಾರೆ. ಜೊತೆಗೆ ಮಂಡ್ಯದ ಹೆಣ್ಣು, ಜೋಡೆತ್ತು, ಕಳ್ಳೇತ್ತು ಹಾಗೂ ಸುಮಲತಾ ಎಂಬ ಹಲವಾರು ಶೀರ್ಷಿಕೆಗಳನ್ನು ಹೊತ್ತಿಕೊಂಡು ನಮಗೆ ಕೊಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ.

ಈ ವಿಚಾರವಾಗಿ ವಾಣಿಜ್ಯ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಲು ಸಿದ್ಧವಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.

Share This With Your Friends

Related posts